ನನ್ನ ತಮ್ಮನ ಸೈಕಲ್ ಪುರಾಣ

ಅಡುಗೆ  ಮನೆಯಲ್ಲಿ ಅಮ್ಮನಿಗೆ ಇಷ್ಟ ಅಂತ ಅರಿವೆ ಸೊಪ್ಪಿನ ಪಲ್ಯ ಮಾಡಲು ರೆಡಿ ಮಾಡುತಿದ್ದೆ. ಹೊರಗಡೆ ಗೇರುಹಣ್ಣು ಕೀಳುತ್ತಿದ್ದ ಅಮ್ಮ ಮುನ್ನಿ(ಅಮ್ಮ ಪ್ರೀತಿಯಿಂದ ಕರೆಯುವ ಹೆಸರು) ಬಾರೆ ಇಲ್ಲಿ ಎಂದು ಕರೆದರು.

ಸೊಪ್ಪಿಗೆ ಒಗ್ಗರಣೆ ಹಾಕಲು ಎಣ್ಣೆ  ಇಟ್ಟ ನಾನು ಗ್ಯಾಸ್ ಸಣ್ಣಕ್ಕೆ ಮಾಡಿ ಹೊರಗಡೆ ಬಂದಾಗ ನಮ್ಮ ಮನೆ ಗೇಟ್ ಮುಂದೆ ಒಂದು ಸೈಕಲ್ ನಿಂತಿತ್ತು. ಅದನ್ನ ನೋಡಿ ಅಮ್ಮ ಆ ಸೈಕಲ್ ನೋಡೆ ಯಾರದು ಅಂತ ಗೋತ್ತಾ? ಅಂತ ಕೇಳಿದರು.

ಗೊತ್ತಿಲ್ಲ ಎಂದು ಒಳ ಹೋಗಬೇಕು ಅನ್ನುವಷ್ಟರಲ್ಲಿ ಅಂಜು ಅಕ್ಕ ನನಗೆ ವಿಸಿಡಿ ಇದ್ದರೆ ಕೊಡಿ ಎಂದು ಕೇಳುತ್ತಿದ್ದ ನನ್ನ ಪುಟ್ಟ ಚಿಕ್ಕಮ್ಮನ ಪುಟ್ಟ ಮಗ.

ಈಗ ಆರನೇ ತರಗತಿ ಓದುತ್ತಿದ್ದಾನೆ. ಈತನ ಹೆಸರು ಪ್ರಶಾಂತ್. ಅವನ ತಾಯಿ ತಂದೆ ಉಳಿದ ದೋಡ್ಡೋರೆಲ್ಲಾ ಈತನನ್ನು ಪಚ್ಚು ಅಂತ ಕರೆದರೆ. ನಾವೆಲ್ಲ ಹಾಗಲ್ಲ ಒಬ್ಬೊಬ್ಬರು ಒಂದೋದು ಹೆಸರಲ್ಲಿ ಕರಿತೀವಿ. ನಾನು ಪಚ್ಚು ಕುಟ್ಟ ಅಂತ ಕರೆದರೆ ಇನ್ನು ಕೆಲವರು ಕುಟ್ಟ ಅಂತ ಕರೆದರೆ ಇನ್ನೂಕೆಲವರು ಬಬ್ಲಿ ಅಂತೆಲ್ಲಾ ಕರಿಯೋದು.

ಈಗ ಆರನೇ ತರಗತಿಯಲ್ಲಿದ್ದರೂ ಈತ ನೋಡೋಕೆ ಮುರನೇ ಕ್ಲಾಸಿನ ಹುಡುಗನಂತಿದ್ದಾನೆ. ಆದರೆ ಆತ ಮಾಡೋ ಕೆಲಸ ಬರೀ ರೀಪೆರೀ ಕೆಲಸನೇ ನಮ್ಮ ಊರಿನ ಏಲ್ಲಾ ಮಕ್ಕಳ ರೇಡಿಯೋ, ಟಾರ್ಚ್ ಹಾಗು ಏಲ್ಲಾ ವಿದ್ಯುತ್ ಉಪಕರಣಗಳು ಎಲ್ಲವನ್ನೂ ಇವನೆ ಸರಿ ಮಾಡಿ ಕೊಡುವವನು.

ಸಣ್ಣವನಿರುವಾಗ ದೊಡ್ಡವನಾದ ಮೇಲೆ ಎನಾಗುತ್ತೀಯಾ ಅಂತ ಕೇಳಿದರೆ ಚೆನ್ನಾಗಿ ಕಲಿತು ಫಾರಿನ್ ಹೋಗುತ್ತೀನಿ ಅಂತಾನೆ. ಅಲ್ಲಿ ಹೋಗಿ ಎನ್ ಮಾಡುತ್ತೀಯ ಅಂತ ಕೇಳಿದರೆ ಅಲ್ಲಿ ಹೋಗಿ ಮೀನು ಹಿಡಿಯುತ್ತೇನೆ ಅಂತ ಹೇಳುತ್ತಿದ್ದ.

ಎಲ್ಲರೂ ಜೊತೆಗೆ ಊಟಕ್ಕೆ ಕೂತರೆ ಹತ್ತಿರ ಕೂತವನ ತಟ್ಟೆಯಿಂದ ಮೀನು ತೆಗೆದು ತಿನ್ನುತ್ತಿದ್ದ ಅವರು ಕೇಳಿದಾಗ ಅದಾ ಕಂಡು ಪುಚ್ಚೆ ಕೋನೋಂಡು (ಕಳ್ಳ ಬೆಕ್ಕು ತೆಗೆದು ಕೊಂಡು ಹೋಯಿತು) ಅನ್ನೋನು ಆಗ ಎಲ್ಲರೂ ನಕ್ಕು ತಮ್ಮ ಊಟ ಮುಗಿಸುತ್ತಿದ್ದರು.

ಅಯ್ಯೋ ಅವನ ಸೈಕಲ್ ವಿಷಯ ಹೇಳೋದು ಬಿಟ್ಟು ಇದನ್ನೆಲ್ಲಾ ಹೇಳ್ತಾ ಇದ್ದಿನಲ್ಲ ಅಂತ ಬೈಕೊಬೇಡಿ. ವಿಸಿಡಿ ಕೇಳಿದ ಆತನನ್ನು  ಪರಿಕ್ಷೇ ಬಂತು ಕಲಿಯಬೇಕು ಆಮೇಲೆ ವಿಸಿಡಿ ನೋಡೋದೆಲ್ಲಾ ಎಂದು ಗದರಿಸಿದೆ.

ಆದರೆ ಆತ ಅಯ್ಯೋ ನೋಡೋದಿಕ್ಕಲ್ಲ ನನ್ನ ಸೈಕಲ್ ಗೆ ಬೇಕು ಅಂತ ಹೇಳಿ ನನ್ನನ್ನು ಅದರ ಪಕ್ಕ ಕರೆದು ಕೋಡು ಹೋದ. ಆ ಸೈಕಲ್ ನೋಡಿ ನನಗೆ ಆಶ್ಚರ್ಯವಾಯಿತು. ಇದು ನಿನ್ನ ಸೈಕಲ ಅಂತ ಕೇಳಿದೆ ಅದಕ್ಕವನು ಹ ನೀನೆ ಕೊಡಿಸಿದ ಸೈಕಲ್ ಅಂತ ಹೇಳಿದರು ನಾನು ನಂಬಲು ಸಾದ್ಯವಿಲ್ಲ ಅನ್ನುವಂತಿತ್ತು ಆ ಸೈಕಲ್.

ನಾನು ಆ ಸೈಕಲನ್ನು ನನ್ನ ತಮ್ಮನ ಒತ್ತಾಯಕ್ಕೆ ಐವತ್ತು ರೂಪಾಯಿ ಕೊಟ್ಟು ತೆಗೆದು ಕೊಂಡಿದ್ದೆ. ನಂತರ ಅದಿಕ್ಕೆ ನೂರರಿಂದ ಐನೂರರ ವರೆಗೆ ಖರ್ಚು ಮಾಡಿ ಓಡಿಸುತ್ತಿದ್ದ. ನಂತರ ಆತನ ಕಾಲಿಗೆ ಏಟಾದ ಮೇಲೆ ಆತನಿಗೆ ಸೈಕಲ್ ಓಡಿಸಲು ಆಗುತ್ತಿರಲಿಲ್ಲ. ಮತ್ತದು ಮೂಲೆ ಸೇರಿತು.

ಎರಡು ವರುಷದ ಬಳಿಕ ಪಚ್ಚುನ ಅಣ್ಣ ಅಣ್ಣು ಆ ಸೈಕಲನ್ನು ತೆಗೆದು ಕೊಡು ಹೋಗಿ ಅದಿಕ್ಕೆ ಪೈಂಟಿಗ್ ಮಾಡಿಸಿ ಓಡಿಸುತ್ತಿದ್ದ ನಂತರ ಓದಿನ ಒತ್ತಡ ಜಾಸ್ತಿ ಆದ ಹಾಗೆ ಸೈಕಲ್ ಕಡೆಗಿನ ಒಲವು ಕಡಿಮೆಯಾಯಿತು.

ಈಗ ಸೈಕಲ್ ಪಚ್ಚುವಿನ ಕೈಯಲ್ಲಿ ಇದೆ. ಈ ಸೈಕಲ್ ಅವನಿಗೆ ಖುಷಿಯಾಗಿರುವುದಕ್ಕಿಂತ ಆ ಸೈಕಲ್ ತುಂಬಾ ಖುಷಿಪಟ್ತಿರುತ್ತೆ. ಯಾಕೆಂದರೆ ಆತ ಸೈಕಲನ್ನು ಹಾಗಿಟ್ಟು ಕೊಂಡಿದ್ದಾನೆ. ಒಳ್ಳೆ ಎ.ಸಿ ಕಾರಿನಲ್ಲಿರುವಂತೆ  ಎಫ್.ಯಮ್ ರೇಡಿಯೋ ಅದೂ ಒಂದಲ್ಲ ಎರಡು, ನಮ್ಮೂರಲ್ಲಿ ಹತ್ತು ರೂಪಾಯಿಗೆ ಸಿಗುವ ಮೂರು ಕಲ್ಲರಿನ ಟಾರ್ಚು ಅದು ಒಂದಲ್ಲ ಐದರ ತನಕ ಇರಬಹುದು. ಇದಕ್ಕೆಲ್ಲ ಒಂದೇ ಸ್ವಿಚ್ಚು, ಹಾಗೆ ಕರೆಂಟು ಚಾರ್ಜ್ ಮಾಡುವಂತಹ ಎರಡು ಬ್ಯಾಟರಿಗಳು,ಆಮೇಲೆ ವಿಸಿಡಿಗಳಿಗೆಲ್ಲಾ ದೇವರ ಫೋಟೋ ಅಥವಾ ಶರ್ಟ್ ಗಳಿಗೆ ಹಾಕುವಂತ ಗುಂಡಿಗಳನೆಲ್ಲಾ ಜೋಡಿಸಿ ಅಲಂಕಾರ ಮಾಡಿದ್ದಾನೆ.ಸೈಕಲಿನ ಚಕ್ರದ ಕಡ್ಡಿಗಳಿಗೆ ಮೀನು ಹಾಗು ತಾವರೆಯಂತ ಏನೋ ವಸ್ತುಗಳನೆಲ್ಲಾ ಜೋಡಿಸಿ ಅಲಂಕರಿಸಿದ್ದಾನೆ.

ಎಲ್ಲಾ ಮಕ್ಕಳು ಇವನ ಸೈಕಲ್ ನೋಡಿ ಹೊಟ್ಟೆ ಉರಿಪಟ್ಟುಕೊಳ್ಳಬೇಕು ಹಾಗಿದೆ ಈ ಸೈಕಲ್  ಈತನ ಕೈಗೆ ಬಂದಾಗಿನಿಂದ ಒಂದು ದಿನನೂ ರೀಪೇರಿಗೆ ಹೋಗಿಲ್ಲ. ಈ ಸೈಕಲನ್ನು ಯಾರೊಬ್ಬರು ಮುಟ್ಟುವಂತಿಲ್ಲ. ಹೀಗಿದೆ ಈತನ ಸೈಕಲ್ ಪುರಾಣ.

 ಇದನ್ನೆಲ್ಲ ನೋಡಿ ಸರಿ ಈಗ ಹೋಗು ಮತ್ತೆ ಕೊಡುತ್ತೇನೆ ಎಂದು ಕಳುಹಿಸಿಕೊಟ್ಟಾಯಿತು. ಆತನನ್ನು ಕಳುಹಿಸಿ ಒಳಗೆ ಬರುವವರೆಗೂ ಒಲೆ ಮೇಲೆ ಇಟ್ಟ ಒಗ್ಗರಣೆ ನೆನಪಿಗೆ ಬರಲೇ ಇಲ್ಲ. ಮೆಲ್ಲ ಅಡುಗೆ ಮನೆಗೆ ಬಂದರೆ ಸೊಪ್ಪು ಆಗಲೇ ರೆಡಿಯಾಗಿತ್ತು. ನಾನು ಮಾಡಬೇಕಿದ್ದ ಕೆಲಸವನ್ನು ಅಮ್ಮ ಮಾಡಿ ಮುಗಿಸಿದ್ದರು.

ನನ್ನ ಪಚ್ಚು ಕುಟ್ಟನ ಸೈಕಲ್ ನೋಡುತ್ತಾ ನಿಂತು ಒಗ್ಗರಣೆ ಇಟ್ಟಿದ್ದನ್ನೇ ಮರೆತು ಅಮ್ಮನ ಕೈಯಿಂದ ಬೈಸಿಕೊಂಡಂತೆ. ಈತನ ಸೈಕಲ್ ಪುರಾಣ ಓದುತ್ತಾ ಕೂತು ಯಾರ ಕೈಯಿಂದನೂ ಬೈಸ್ಕೋಬೇಡಿ. ಒಂದು ವೇಳೆ ಬೈಸ್ಕೋಂಡರೆ ನಾನಂತೂ ಜವಬ್ದಾರಳಲ್ಲ.

25 responses to “ನನ್ನ ತಮ್ಮನ ಸೈಕಲ್ ಪುರಾಣ

 1. ರೋಹಿಣಿ ನಿನ್ನ ಬರವಣಿಗೆ ತಿಳಿನೀರು ಕುಡಿದ ಹಾಗಿದೆ. ಯಾವದೇ ಕಲ್ಮಶ ವಿಲ್ಲದ ಶಬ್ದಗಳ ಬಣ್ಣವಿಲ್ಲದ ಬಾಯರಿದವನಿಗೆ ದಾಹವ ನೀಗಿಸುತ್ತದೆ . ಹಾಡ್ತಾ ಹಾಡ್ತಾ ರಾಗ ,ಬರಿತಾ ಬರಿತಾ ಕವನ .
  ನಿನು ಬರಿತಾ ಇದ್ದಾರೆ ನಾನು ಓದಕ್ಕೆ ರೆಡಿ .
  ಲಕ್ಶ್ಮಣ

 2. ಪ್ರೀತಿಯ ರೋಹಿಣಿ ಅಕ್ಕ,
  ನನಗೂ ಆ ಸೈಕಲ್ ನೋಡೇಕೆಂಬ ತವಕ ಶುರುವಾಗಿದೆ…
  ಆ ಸೈಕಲ್ ಫೋಟೋ ಹಾಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಂತನಿಸುತ್ತದೆ..ಅಕ್ಕ…..
  ಆ ಸೈಕಲ್ ನೂರು ಕಾಲ ಬಾಳಲಿ ಎಂದು ಹಾರೈಸುತ್ತೇನೆ….

 3. ಸಹೋದರಿ, ಸೈಕಲ್ ಪುರಾಣ ಚನ್ನಾಗಿದೆ. ತಿಳಿಹಾಸ್ಯದ ಜೊತೆಗೆ ಬರಹ ಮುದನೀಡುತ್ತದೆ.
  -ನಾಗು,ತಳವಾರ್.

 4. ಸಹೋದರಿ,
  ಇಂಚರ ಹೇಳಿದಂತೆ ಆ ಸೈಕಲ್ಲಿನ ಫೋಟೋ ನೋಡ ಬೇಕು ಅನ್ನೋ ಆಸೆ, ಸಾಧ್ಯವಾದರೆ ಅದರ ಫೋಟೋ ಇಲ್ಲಿ ಹಾಕಿ.

 5. Rohini baraha chennagide
  nirjiva vastugalu kuda namma jivanadalli bhavanatmakavagi besediruttave alva
  laxman

 6. ರೋಹಿಣಿ,

  ನಿನ್ನ ಕುಟ್ಟನ ಸೈಕಲ್ ನನಗೆ ಒಂದು ದೊಡ್ಡ ಲೇಖನದ ವಸ್ತುವಾಗುವಂತಿದೆ…..ಅವನನ್ನು ಮತ್ತು ಅವನ ಸೈಕಲನ್ನು ಒಮ್ಮೆ ನೋಡಲಾದರೂ ನಿಮ್ಮ ಊರಿಗೆ ಬರಬೇಕು ಅನ್ನಿಸಿದೆ…ಮುಂದೆ ಆತ ತೇಜಸ್ವಿಯೋ…..ಅಥವ…ಇನ್ಯಾರೋ ದೊಡ್ಡ ಸಾಧಕನಾಗುತ್ತಾನೆ….ಅನ್ನಿಸುತ್ತೆ……ಅವನು ಕೇಳಿದ್ದನೆಲ್ಲಾ ಕೊಡಬೇಡ…ಕೊಟ್ಟರೆ ಸುಲಭ….ಕೊಡದಿದ್ದಲ್ಲಿ ಅವನೇ ಸ್ವಲ್ಪ ಕಷ್ಟಪಟ್ಟು ಹುಡುಕಿಕೊಳ್ಳುತ್ತಾನೆ….ಆ ಹುಡುಕುವಿಕೆಯಲ್ಲಿ ಅವನ ಕ್ರೀಯೇಟಿವಿಟಿ ಜಾಗ್ರುತಗೊಳ್ಳಬಹುದು….

  ಒಟ್ಟಾರೆ ಒಂದು ಸುಂದರ ಲೇಖನ ಓದಿದ ಅನುಭವವಾಯಿತು…ಮುಂದುವರಿಸು….

 7. ನನ್ನ ಮುದ್ದು ಕಂದಾ, ಕಥಾ ವಸ್ತು ಚನ್ನಾಗಿದೆ, ಒಂದು ಸೈಕಲ್ಲಿಗೆ ಜೀವ ತುಂಬಿದ್ದೀರಿ, ಆದರೆ ಭಾಷೆ, ಉಚ್ಚರಣೆ ಮೇಲೆ ಹಿಡಿತವಿರಲಿ.. ನಾನೇನು ಭಾಷ ಜ್ಞಾನಿ ಅಲ್ಲ, ಆದರು ನನಗೆ ಅನಿಸಿದ್ದನ್ನು ಹೇಳ್ತಾ ಇದೀನಿ. Gud Luck Dear….

 8. ರೋಹಿಣಿ,
  ಸೈಕಲ್ ಪುರಾಣ ಚೆನ್ನಾಗಿದೆ. ಪುಟ್ಟ ಮಕ್ಕಳು ತಮ್ಮ ಸೊತ್ತುಗಳ ಬಗ್ಗೆ ಅ೦ತಹ possessiveness ಇಟ್ಟುಕೊ೦ಡಿರುತ್ತಾರೆ ಮತ್ತು ಅವನ್ನು ಅಷ್ಟು ಚೆನ್ನಾಗಿ ಅಲ೦ಕರಿಸಿಟ್ಟುಕೊ೦ಡಿರುತ್ತಾರೆ. ಮುದ್ದಾದ ಬರಹ. ಮಸ್ತ್ ಖುಷಿಯಾ೦ಡಮ್ಮ, ಎನ್ನ ಬ್ಲಾಗ್ follow ಮಲ್ಪುಲಮ್ಮ, ಯಾನ್ ನಿನ್ನ ಬ್ಲಾಗ್ follow ಮಲ್ತೊ೦ದುಲ್ಲೆ. ನಮಸ್ಕಾರ.

 9. baraha ChennAgide.
  blog na itara barahagaLu kuDa.

  Preetiyinda,
  Chetana Teerthahalli

 10. ರೋಹಿಣಿ ಕಂದಾ! ಬರವಣಿಗೆಯಲ್ಲಿ ತುಂಬಾ ಅಂದ್ರೆ ತುಂಬಾ ಬದಲಾವಣೆಯಾಗಿದ್ದಿಯಾ…ತುಂಬ ಕುಷಿಯಾಗುತ್ತೆ ಓದಲಿಕ್ಕೆ ! ನನಗೆ ಆ ಸೈಕಲ್ಲು ನೋಡಬೇಕು ಅಂತ ಆಸೆ..ಅದರ ಒಂದು ಪೋಟೋ ತೆಗ್ದು ನನ್ ಮೈಲ್ ಗೆ ಕಲ್ಸು ಕಂದ…

  ಓಕೆ ಎಲ್ಲಿ ಒಂದು ಸೂಪರ್ ಇರೋ ಕವಿತೆ ಬರಿ…ನಾನೆ ಮೊದ್ಲು ಒದುತ್ತೀನಿ

  ನಿನ್ನ
  ಸೋಮು

 11. ನಮಸೇ ಲಕ್ಷ್ಮಣ್ ಸರ್
  ಕಂಡಿತ ಬರೀತಿನಿ ನಿಮ್ಮ ಹಾರೈಕೆ ಹಾಗೂ
  ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು

 12. ನಮಸ್ತೇ ಪುಟ್ಟಿ
  ಆ ಸೈಕಲ್ ಫೋಟೋ ಹಾಕಲು ಸಾದ್ಯವಾಗಲಿಲ್ಲ ನನಗೂ ಬೇಜಾರಾಗಿದೆ. ಕಂಡಿತ ಫೋಟೋ ಇನ್ನೊಂದು ಲೇಖನದಲ್ಲಿ ಹಾಕುವೆ. ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು.

 13. ನಮಸ್ತೇ ನಾಗು ಸರ್
  ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು.

 14. ನಮಸ್ತೇ ಸಹೋದರ
  ಕಂಡಿತ ಫೋಟೋ ಇನ್ನೊಂದು ಲೇಖನದಲ್ಲಿ ಹಾಕುವೆ.
  ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು.

 15. ನಮಸೇ ಲಕ್ಷ್ಮಣ್ ಸರ್
  ನಿಜ ಸರ್ ನಿರ್ಜೀವ ವಸ್ತುಗಳಿಗೆ ನಾವು ಜೀವ ತುಂಬುವ ಪ್ರಯತ್ನ ಮಾಡುತ್ತೇವೆ. ಹಾಗೆ ಅಂತಹ ನಿರ್ಜೀವ ವಸ್ತುಗಳೇ ನಮ್ಮ ಜೀವವನ್ನು ಉಳಿಸುತ್ತವೆ. ಹಾಗೂ ಕಾಪಾಡುತ್ತವೆ

 16. ನಮಸ್ತೇ ಶಿವು ಅಣ್ಣ
  ನಿಜ ಅಣ್ಣ ಈ ಬರಹವನ್ನು ಮೊದಲೆ ಬರೆದಿದ್ದೆ. ಈಗ ಸ್ವಲ್ಪ ದೈರ್ಯ ಮಾಡಿ ಇಲ್ಲಿ ಹಾಕಿದೆ. ನಿಜ ಅಣ್ಣ ನಾವು ಕೊಟ್ಟಿಲ್ಲ ಅಂದ್ರೆ ಅವನೇ ಹೇಗಾದರು ಸಂಗ್ರಹಿಸುತ್ತಾನೆ.
  ನಿಮ್ಮ ಹಾರೈಕೆ ಸದಾ ಹೀಗೆ ಇರಲಿ
  ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು

 17. ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ, ಹೊಸ ಹುರುಪನ್ನು ತು೦ಬಲಿ
  ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಸುಖಶಾ೦ತಿ, ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ

  ಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.

  K.N.ಪರಾ೦ಜಪೆ
  http://www.nirpars.blogspot.com
  email: paraanjape@gmail.com

 18. ರೋಹಿಣಿ,
  ಎನ್ನ ಬ್ಲಾಗ್ ಡೊ೦ಜಿ ಪೊಸ ಲೇಖನ ಉ೦ಡಮ್ಮ, ಒರೋ ಓದುಲೇ, ಅ೦ಚನೆ ಎನ್ನ ಬ್ಲಾಗ್ Follower List ಡ್ ಇರೆನ ಹಸ್ತಾಕ್ಷರ ಪಾಡ್ಲೆ
  namaskaara

 19. ರೋಹಿಣಿ ಅವರಿಗೆ ನಮಸ್ತೆ:
  ಕೇವಲ ‘ಕನ್ನಡಮ್ಮನ ಮುದ್ದಿನ ಮಗಳು’ ? ಅಂತ ಹೇಳಿಕೊಂಡರೆ ಸಾಲದು, ಸರಿಯಾಗಿ ಕನ್ನಡವನ್ನು ಬರೆಯುವುದನ್ನೂ ಕಲಿಯಬೇಕು.
  ಇತ್ತೀಚಿಗೆ ನಿಮ್ಮ ಬ್ಲಾಗ್ ಗೆ ಬೇಟಿ ಕೊಟ್ಟಾಗ ಏಕೋ “ನನ್ನ ತಮ್ಮನ ….” ಅನ್ನು ಓದಬೇಕೆಂದು ಅನಿಸಿತು.ಓದಲು ಅನುವಾದರೆ ಅಲ್ಲಿ ‘ಕನ್ನಡಮ್ಮನ ಮುದ್ದಿನ ಮಗಳು’ ಎಂದು ಹೇಳಿಕೊಳ್ಳುತ್ತಿದ್ದ ‘ಮಂಗಳೂರಿನ ನಕ್ಷತ್ರ ಮೀನು’ ಕನ್ನಡ ಪದಗಳನ್ನು ಸರಿಯಾಗಿ ಕಲಿತಿಲ್ಲವೋ ಅಥವಾ ಅವಸರದಿಂದ ತಪ್ಪು ಪದಗಳನ್ನು ಬರೆದಿದ್ದಾರೋ ಎಂದು ತಿಳಿಯಲಿಲ್ಲ.
  ನಿಮ್ಮ ಈ ಬರಹದಲ್ಲಿ ನಾನು ಹಲವು ತಪ್ಪುಗಳನ್ನು ಹುಡುಕಿದ್ದೇನೆ.ದಯವಿಟ್ಟು ಮುಂದಾದರೂ ಜಾಗ್ರತೆ ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

  ಅಂದಹಾಗೆ ನಾವು ಹುಡುಕಿದ ತಪ್ಪುಗಳು ಈ ಕೆಳಕಂಡಂತಿವೆ:
  ‘ಗೊತ್ತಾ’ ಎಂದಿರಬೇಕಿತ್ತು ‘ಗೋತ್ತಾ’ ಎಂದಿದೆ.
  ‘ದೊಡ್ದೋರೆಲ್ಲಾ’ ಎಂದಿರಬೇಕಿತ್ತು ‘ದೋಡ್ಡೋರೆಲ್ಲಾ’ ಎಂದಿದೆ.
  ‘ಒಂದೊಂದು’ ಎಂದಿರಬೇಕಿತ್ತು ‘ಒಂದೋದು’ ಎಂದಿದೆ.
  ‘ರಿಪೇರಿ’ ಎಂದಿರಬೇಕಿತ್ತು ‘ರೀಪೆರೀ’ ಎಂದಿದೆ.
  ‘ಎಲ್ಲಾ’ ಎಂದಿರಬೇಕಿತ್ತು ‘ಏಲ್ಲಾ’ ಎಂದಿದೆ.
  ‘ಏನಾಗುತ್ತೀಯ’ ಎಂದಿರಬೇಕಿತ್ತು ‘ಎನಾಗುತ್ತೀಯಾ’ ಎಂದಿದೆ,
  ‘ಫಾರಿನ್ ಗೆ’ ಎಂದಿರಬೇಕಿತ್ತು ‘ಗೆ’ ಬಿಟ್ಟು ಹೋಗಿದೆ.
  ‘ಏನ್’ ಎಂದಿರಬೇಕಿತ್ತು ‘ಎನ್’ ಎಂದಿದೆ,
  ‘ಪರೀಕ್ಷೆ’ ಎಂದಿರಬೇಕಿತ್ತು ‘ಪರಿಕ್ಷೇ’ಎಂದಿದೆ.
  ‘ಕರೆದುಕೊಂಡು’ ಎಂದಿರಬೇಕಿತ್ತು ‘ಕೋಡು’ ಎಂದಿದೆ.
  ‘ಹೇಳಿದರೂ’ ಎಂದಿರಬೇಕಿತ್ತು ‘ಹೇಳಿದರು’ ಎಂದಿದೆ,
  ‘ತೆಗೆದುಕೊಂಡು’ ಎಂದಿರಬೇಕಿತ್ತು ‘ತೆಗೆದು ಕೊಡು’ ಆಗಿದೆ.
  ‘ಕಲ್ಲರಿನ’ ಎಂಬುದು ‘ಕಲರ್ ನ’ ಎಂದಿರಬೇಕಿತ್ತು.
  .

  ಇನ್ನೊಂದು ಮಾತು ,ಅದೂ ಅಲ್ಲದೆ ನಿಮ್ಮ ಈ ಬರಹ ಓದಿದವರೂ ಕೂಡ ತಪ್ಪುಗಳನ್ನು ಗುರುತಿಸಿಲ್ಲ ,ಹುಡುಕಿದರೆ ಅವ್ರ ಕಾಮೆಂಟ್ ಗಳಲ್ಲೂ ತಪ್ಪುಗಳು ಸಿಗುತ್ತವೆ.

 20. Namaskara Rohini,

  Channagi ide. Ide tharaha innu lekanaglanu bareiri.

 21. ರೋಹಿಣಿ ಅವರೆ ನಿಮ್ಮ wriring style ತುಂಬಾ ಚೆನ್ನಾಗಿದೆ…….
  keep it up………..
  ಆ cycle photo upload ಮಾಡ್ಲಿಕ್ಕೆ try ಮಾಡಿ…….

 22. bhaari eDDe unDu saikal puraaNa….
  Odi mast khushi aanD 🙂

 23. ರೋಹಿಣಿ…ಸೈಕಲ್ ಪುರಾಣ ಚೆನ್ನಾಗಿದೆ, ನನ್ ತಮ್ಮನ ಬಳಿ ಇರುವ ಗುಜರಿ ಸೈಕಲ್ ನ್ನು ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
  -ಧರಿತ್ರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s