Monthly Archives: ಮಾರ್ಚ್ 2009

ನನ್ನ ತಮ್ಮನ ಸೈಕಲ್ ಪುರಾಣ

ಅಡುಗೆ  ಮನೆಯಲ್ಲಿ ಅಮ್ಮನಿಗೆ ಇಷ್ಟ ಅಂತ ಅರಿವೆ ಸೊಪ್ಪಿನ ಪಲ್ಯ ಮಾಡಲು ರೆಡಿ ಮಾಡುತಿದ್ದೆ. ಹೊರಗಡೆ ಗೇರುಹಣ್ಣು ಕೀಳುತ್ತಿದ್ದ ಅಮ್ಮ ಮುನ್ನಿ(ಅಮ್ಮ ಪ್ರೀತಿಯಿಂದ ಕರೆಯುವ ಹೆಸರು) ಬಾರೆ ಇಲ್ಲಿ ಎಂದು ಕರೆದರು.

ಸೊಪ್ಪಿಗೆ ಒಗ್ಗರಣೆ ಹಾಕಲು ಎಣ್ಣೆ  ಇಟ್ಟ ನಾನು ಗ್ಯಾಸ್ ಸಣ್ಣಕ್ಕೆ ಮಾಡಿ ಹೊರಗಡೆ ಬಂದಾಗ ನಮ್ಮ ಮನೆ ಗೇಟ್ ಮುಂದೆ ಒಂದು ಸೈಕಲ್ ನಿಂತಿತ್ತು. ಅದನ್ನ ನೋಡಿ ಅಮ್ಮ ಆ ಸೈಕಲ್ ನೋಡೆ ಯಾರದು ಅಂತ ಗೋತ್ತಾ? ಅಂತ ಕೇಳಿದರು.

ಗೊತ್ತಿಲ್ಲ ಎಂದು ಒಳ ಹೋಗಬೇಕು ಅನ್ನುವಷ್ಟರಲ್ಲಿ ಅಂಜು ಅಕ್ಕ ನನಗೆ ವಿಸಿಡಿ ಇದ್ದರೆ ಕೊಡಿ ಎಂದು ಕೇಳುತ್ತಿದ್ದ ನನ್ನ ಪುಟ್ಟ ಚಿಕ್ಕಮ್ಮನ ಪುಟ್ಟ ಮಗ.

ಈಗ ಆರನೇ ತರಗತಿ ಓದುತ್ತಿದ್ದಾನೆ. ಈತನ ಹೆಸರು ಪ್ರಶಾಂತ್. ಅವನ ತಾಯಿ ತಂದೆ ಉಳಿದ ದೋಡ್ಡೋರೆಲ್ಲಾ ಈತನನ್ನು ಪಚ್ಚು ಅಂತ ಕರೆದರೆ. ನಾವೆಲ್ಲ ಹಾಗಲ್ಲ ಒಬ್ಬೊಬ್ಬರು ಒಂದೋದು ಹೆಸರಲ್ಲಿ ಕರಿತೀವಿ. ನಾನು ಪಚ್ಚು ಕುಟ್ಟ ಅಂತ ಕರೆದರೆ ಇನ್ನು ಕೆಲವರು ಕುಟ್ಟ ಅಂತ ಕರೆದರೆ ಇನ್ನೂಕೆಲವರು ಬಬ್ಲಿ ಅಂತೆಲ್ಲಾ ಕರಿಯೋದು.

ಈಗ ಆರನೇ ತರಗತಿಯಲ್ಲಿದ್ದರೂ ಈತ ನೋಡೋಕೆ ಮುರನೇ ಕ್ಲಾಸಿನ ಹುಡುಗನಂತಿದ್ದಾನೆ. ಆದರೆ ಆತ ಮಾಡೋ ಕೆಲಸ ಬರೀ ರೀಪೆರೀ ಕೆಲಸನೇ ನಮ್ಮ ಊರಿನ ಏಲ್ಲಾ ಮಕ್ಕಳ ರೇಡಿಯೋ, ಟಾರ್ಚ್ ಹಾಗು ಏಲ್ಲಾ ವಿದ್ಯುತ್ ಉಪಕರಣಗಳು ಎಲ್ಲವನ್ನೂ ಇವನೆ ಸರಿ ಮಾಡಿ ಕೊಡುವವನು.

ಸಣ್ಣವನಿರುವಾಗ ದೊಡ್ಡವನಾದ ಮೇಲೆ ಎನಾಗುತ್ತೀಯಾ ಅಂತ ಕೇಳಿದರೆ ಚೆನ್ನಾಗಿ ಕಲಿತು ಫಾರಿನ್ ಹೋಗುತ್ತೀನಿ ಅಂತಾನೆ. ಅಲ್ಲಿ ಹೋಗಿ ಎನ್ ಮಾಡುತ್ತೀಯ ಅಂತ ಕೇಳಿದರೆ ಅಲ್ಲಿ ಹೋಗಿ ಮೀನು ಹಿಡಿಯುತ್ತೇನೆ ಅಂತ ಹೇಳುತ್ತಿದ್ದ.

ಎಲ್ಲರೂ ಜೊತೆಗೆ ಊಟಕ್ಕೆ ಕೂತರೆ ಹತ್ತಿರ ಕೂತವನ ತಟ್ಟೆಯಿಂದ ಮೀನು ತೆಗೆದು ತಿನ್ನುತ್ತಿದ್ದ ಅವರು ಕೇಳಿದಾಗ ಅದಾ ಕಂಡು ಪುಚ್ಚೆ ಕೋನೋಂಡು (ಕಳ್ಳ ಬೆಕ್ಕು ತೆಗೆದು ಕೊಂಡು ಹೋಯಿತು) ಅನ್ನೋನು ಆಗ ಎಲ್ಲರೂ ನಕ್ಕು ತಮ್ಮ ಊಟ ಮುಗಿಸುತ್ತಿದ್ದರು.

ಅಯ್ಯೋ ಅವನ ಸೈಕಲ್ ವಿಷಯ ಹೇಳೋದು ಬಿಟ್ಟು ಇದನ್ನೆಲ್ಲಾ ಹೇಳ್ತಾ ಇದ್ದಿನಲ್ಲ ಅಂತ ಬೈಕೊಬೇಡಿ. ವಿಸಿಡಿ ಕೇಳಿದ ಆತನನ್ನು  ಪರಿಕ್ಷೇ ಬಂತು ಕಲಿಯಬೇಕು ಆಮೇಲೆ ವಿಸಿಡಿ ನೋಡೋದೆಲ್ಲಾ ಎಂದು ಗದರಿಸಿದೆ.

ಆದರೆ ಆತ ಅಯ್ಯೋ ನೋಡೋದಿಕ್ಕಲ್ಲ ನನ್ನ ಸೈಕಲ್ ಗೆ ಬೇಕು ಅಂತ ಹೇಳಿ ನನ್ನನ್ನು ಅದರ ಪಕ್ಕ ಕರೆದು ಕೋಡು ಹೋದ. ಆ ಸೈಕಲ್ ನೋಡಿ ನನಗೆ ಆಶ್ಚರ್ಯವಾಯಿತು. ಇದು ನಿನ್ನ ಸೈಕಲ ಅಂತ ಕೇಳಿದೆ ಅದಕ್ಕವನು ಹ ನೀನೆ ಕೊಡಿಸಿದ ಸೈಕಲ್ ಅಂತ ಹೇಳಿದರು ನಾನು ನಂಬಲು ಸಾದ್ಯವಿಲ್ಲ ಅನ್ನುವಂತಿತ್ತು ಆ ಸೈಕಲ್.

ನಾನು ಆ ಸೈಕಲನ್ನು ನನ್ನ ತಮ್ಮನ ಒತ್ತಾಯಕ್ಕೆ ಐವತ್ತು ರೂಪಾಯಿ ಕೊಟ್ಟು ತೆಗೆದು ಕೊಂಡಿದ್ದೆ. ನಂತರ ಅದಿಕ್ಕೆ ನೂರರಿಂದ ಐನೂರರ ವರೆಗೆ ಖರ್ಚು ಮಾಡಿ ಓಡಿಸುತ್ತಿದ್ದ. ನಂತರ ಆತನ ಕಾಲಿಗೆ ಏಟಾದ ಮೇಲೆ ಆತನಿಗೆ ಸೈಕಲ್ ಓಡಿಸಲು ಆಗುತ್ತಿರಲಿಲ್ಲ. ಮತ್ತದು ಮೂಲೆ ಸೇರಿತು.

ಎರಡು ವರುಷದ ಬಳಿಕ ಪಚ್ಚುನ ಅಣ್ಣ ಅಣ್ಣು ಆ ಸೈಕಲನ್ನು ತೆಗೆದು ಕೊಡು ಹೋಗಿ ಅದಿಕ್ಕೆ ಪೈಂಟಿಗ್ ಮಾಡಿಸಿ ಓಡಿಸುತ್ತಿದ್ದ ನಂತರ ಓದಿನ ಒತ್ತಡ ಜಾಸ್ತಿ ಆದ ಹಾಗೆ ಸೈಕಲ್ ಕಡೆಗಿನ ಒಲವು ಕಡಿಮೆಯಾಯಿತು.

ಈಗ ಸೈಕಲ್ ಪಚ್ಚುವಿನ ಕೈಯಲ್ಲಿ ಇದೆ. ಈ ಸೈಕಲ್ ಅವನಿಗೆ ಖುಷಿಯಾಗಿರುವುದಕ್ಕಿಂತ ಆ ಸೈಕಲ್ ತುಂಬಾ ಖುಷಿಪಟ್ತಿರುತ್ತೆ. ಯಾಕೆಂದರೆ ಆತ ಸೈಕಲನ್ನು ಹಾಗಿಟ್ಟು ಕೊಂಡಿದ್ದಾನೆ. ಒಳ್ಳೆ ಎ.ಸಿ ಕಾರಿನಲ್ಲಿರುವಂತೆ  ಎಫ್.ಯಮ್ ರೇಡಿಯೋ ಅದೂ ಒಂದಲ್ಲ ಎರಡು, ನಮ್ಮೂರಲ್ಲಿ ಹತ್ತು ರೂಪಾಯಿಗೆ ಸಿಗುವ ಮೂರು ಕಲ್ಲರಿನ ಟಾರ್ಚು ಅದು ಒಂದಲ್ಲ ಐದರ ತನಕ ಇರಬಹುದು. ಇದಕ್ಕೆಲ್ಲ ಒಂದೇ ಸ್ವಿಚ್ಚು, ಹಾಗೆ ಕರೆಂಟು ಚಾರ್ಜ್ ಮಾಡುವಂತಹ ಎರಡು ಬ್ಯಾಟರಿಗಳು,ಆಮೇಲೆ ವಿಸಿಡಿಗಳಿಗೆಲ್ಲಾ ದೇವರ ಫೋಟೋ ಅಥವಾ ಶರ್ಟ್ ಗಳಿಗೆ ಹಾಕುವಂತ ಗುಂಡಿಗಳನೆಲ್ಲಾ ಜೋಡಿಸಿ ಅಲಂಕಾರ ಮಾಡಿದ್ದಾನೆ.ಸೈಕಲಿನ ಚಕ್ರದ ಕಡ್ಡಿಗಳಿಗೆ ಮೀನು ಹಾಗು ತಾವರೆಯಂತ ಏನೋ ವಸ್ತುಗಳನೆಲ್ಲಾ ಜೋಡಿಸಿ ಅಲಂಕರಿಸಿದ್ದಾನೆ.

ಎಲ್ಲಾ ಮಕ್ಕಳು ಇವನ ಸೈಕಲ್ ನೋಡಿ ಹೊಟ್ಟೆ ಉರಿಪಟ್ಟುಕೊಳ್ಳಬೇಕು ಹಾಗಿದೆ ಈ ಸೈಕಲ್  ಈತನ ಕೈಗೆ ಬಂದಾಗಿನಿಂದ ಒಂದು ದಿನನೂ ರೀಪೇರಿಗೆ ಹೋಗಿಲ್ಲ. ಈ ಸೈಕಲನ್ನು ಯಾರೊಬ್ಬರು ಮುಟ್ಟುವಂತಿಲ್ಲ. ಹೀಗಿದೆ ಈತನ ಸೈಕಲ್ ಪುರಾಣ.

 ಇದನ್ನೆಲ್ಲ ನೋಡಿ ಸರಿ ಈಗ ಹೋಗು ಮತ್ತೆ ಕೊಡುತ್ತೇನೆ ಎಂದು ಕಳುಹಿಸಿಕೊಟ್ಟಾಯಿತು. ಆತನನ್ನು ಕಳುಹಿಸಿ ಒಳಗೆ ಬರುವವರೆಗೂ ಒಲೆ ಮೇಲೆ ಇಟ್ಟ ಒಗ್ಗರಣೆ ನೆನಪಿಗೆ ಬರಲೇ ಇಲ್ಲ. ಮೆಲ್ಲ ಅಡುಗೆ ಮನೆಗೆ ಬಂದರೆ ಸೊಪ್ಪು ಆಗಲೇ ರೆಡಿಯಾಗಿತ್ತು. ನಾನು ಮಾಡಬೇಕಿದ್ದ ಕೆಲಸವನ್ನು ಅಮ್ಮ ಮಾಡಿ ಮುಗಿಸಿದ್ದರು.

ನನ್ನ ಪಚ್ಚು ಕುಟ್ಟನ ಸೈಕಲ್ ನೋಡುತ್ತಾ ನಿಂತು ಒಗ್ಗರಣೆ ಇಟ್ಟಿದ್ದನ್ನೇ ಮರೆತು ಅಮ್ಮನ ಕೈಯಿಂದ ಬೈಸಿಕೊಂಡಂತೆ. ಈತನ ಸೈಕಲ್ ಪುರಾಣ ಓದುತ್ತಾ ಕೂತು ಯಾರ ಕೈಯಿಂದನೂ ಬೈಸ್ಕೋಬೇಡಿ. ಒಂದು ವೇಳೆ ಬೈಸ್ಕೋಂಡರೆ ನಾನಂತೂ ಜವಬ್ದಾರಳಲ್ಲ.

“ರಕ್ತ ಸಂಭಂದಗಳ ಮೀರಿದ ಬಂಧವಿದು”

 
 
bubble-playಆವಳ ಮಡಿಲಲ್ಲಿ….ಅವನು  ಮಲಗಿದ್ದ ಮಗುವಿನ ಹಾಗೆ….ಅವಳ  ಕೈಯನ್ನು   ಗಟ್ಟಿಯಾಗಿ  ಹೇಗೆ  ಅದುಮಿಡಿದಿದ್ದನೆಂದರೆ  ಆ ಹಿಡಿತದಲ್ಲಿ  ಮಮತೆ ಮತ್ತು ನಂಬಿಕೆ  ಒಟ್ಟಿಗಿರುವ   ಆ ಹಸ್ತದಲ್ಲಿ ಇವನ  ಸಂಪೂರ್ಣ  ಭಾರವಿತ್ತು…ಮಗುವೇ  ತಾಯಿಯ  ಮಮತೆಯ  ಅಲೆಯಲ್ಲಿ ತೇಲಿದಂತೆ….
 
 
           ಅವನ  ಉಸಿರು  ನಿದಾನವಾಗಿ  ಕ್ಷೀಣವಾಗುತ್ತಿತ್ತು……ನೋಟದಲ್ಲಿ   ಅಪರಾಧಿ ಮನೋಭಾವನೆ  ತುಂಬಿತ್ತು….ಇವಳಿಗೂ  ಆಷ್ಟೇ  ಅವನ ಸ್ಥಿತಿಯನ್ನು  ಕಂಡು  ಎದೆ ಉಮ್ಮಳಿಸಿ ಬಂದಂತಾದರೂ   ಕಷ್ಟಪಟ್ಟು  ತಡೆದುಕೊಳ್ಳುತ್ತಿದ್ದಳು…..
 
 
           ಎಂಥ  ಗೆಳೆಯನಾಗಿದ್ದ……ಸ್ನೇಹವೆಂದರೇ  ಇವನೇನಾ……..ಆಗ  ನಾವಿಬ್ಬರೂ   ಹಂಚಿಕೊಂಡ  ವಿಚಾರಗಳೆಷ್ಟು….ಒಟ್ಟುಗೂಡಿ  ಅನುಭವಿಸಿದ  ಪರಿಶುದ್ಧ  ಸ್ನೇಹದ  ತನ್ಮಯತೆಯನ್ನು  ಮರೆಯಲು ಸಾಧ್ಯವೇ….. ಇಬ್ಬರೂ ಕಷ್ಟಪಟ್ಟು  ಮೇಲೆ ಬಂದವರು…..ಈಗ  ನೋಡಿದರೆ   ಸಾಯುವ ಸ್ಥಿತಿಯಲ್ಲಿ  ಹೀಗೆ  ನನ್ನ  ಮಡಿಲಲ್ಲಿ  ಮಲಗಿದ್ದಾನೆ….
 
 
             ಇಷ್ಟಕ್ಕೂ….ನಾವಿಬ್ಬರೂ  ಗೆಳೆಯರಾಗಿದ್ದೆ……ಒಂದು  ಆಕಸ್ಮಿಕ………………………………………………………………………………………………………………………………………………. 
 
ಒಂದು ಸಣ್ಣ ಕುಟುಂಬ ಇರೋದು ನಾಲಕ್ಕು ಜನ.  ತುಂಬಾ ಸಂತೋಷದಿಂದ ಜೀವನ ನಡೆಸುತಿದ್ದ ಕುಟುಂಬ. ಕೆಲಸಕ್ಕೆ ಹೋಗೋ ತಂದೆ ತಾಯಿ ಶಾಲೆಗೆ ಹೋಗೋ ಪುಟಾಣಿ ಇಬ್ಬರು ಮಕ್ಕಳು.
 
ಈ ಮಕ್ಕಳನ್ನ ಸ್ನಾನ ಮಾಡಿಸೋದು. ಅವರ ಶಾಲೆ ಕೆಲಸ ಮಡಿಸೋದೆಲ್ಲಾ ತಂದೆಯ ಕೆಲಸ. ತಾಯಿಗೆ ಮಕ್ಕಳ ಜೊತೆ ಗಂಡನನ್ನು ನೋಡಿಕೋಳ್ಳೋ ಕೆಲಸ. ಈ ಎಲ್ಲಾ ಕೆಲಸ ಮುಗಿಸಿ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡೋದು ಇವರಿಬ್ಬರ ಕೆಲಸ.
 

ಹೀಗೆ ಸುಖವಾಗಿ ನಡೆಯುತಿದ್ದ ಸಂಸಾರಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ಸಂಸಾರಕ್ಕೆ ಮೊದಲ ಆಘಾತ ಯಜಮಾನನ ಸಾವು. ಆಘಾತವನ್ನು ಎದುರಿಸಲು ಸಂಸಾರ ಸಿದ್ದವಾಗಿರಲಿಲ್ಲ.

 

ಒಂದು ದಿನ ಯಜಮಾನಿ ಇನ್ನು ಬದುಕುವುದರಲ್ಲಿ ಅರ್ಥ ಇಲ್ಲ ನಾವು ಅನಾಥರದೆವು ಎಂದು ತಾನು ಮಕ್ಕಳು ಅತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದಳು.

 

ವಿಷಯ ಹೇಗೋ ಕುಟುಂಬದ ಸ್ನೇಹಿತ ಅನ್ನೋ ಅವಕಾಶವಾದಿಗೆ ಗೊತ್ತಾಯಿತು . ಈತ ಸಮಯನ ಚೆನ್ನಾಗಿ ಉಪಯೋಗಿಸಬೇಕು ಎಂದು ಯೋಚನೆ ಮಾಡಿ ಇವರು ಆತ್ಮಹತ್ಯೆ ಮಾಡದಂತೆ ತನ್ನ ಮಾತಿನಲ್ಲೇ ಕಟ್ಟಿ ಹಾಕಿದ .

 

ಪಾಪ ಕುಟುಂಬಕ್ಕೂ ಈಗ ಸಮಾಧಾನ ಮಾಡೋರು ಬೇಕಾಗಿತ್ತು . ಅದನ್ನ ಅರಿತು ವ್ಯಕ್ತಿ ಹಾಗೆ ನಡೆದುಕೊಂಡು ಕುಟುಂಬದ ನಂಬಿಕೆಯನ್ನ ಸಂಪಾದಿಸಿದ . ಸಮಯದಲ್ಲಿ ಕುಟುಂಬಕ್ಕೆ ನಾವು ಒಬ್ಬ ನರಭಕ್ಷಕನ ಕೈಅಳು ಆಗುತ್ತೇವೆ ಎಂದು ಸ್ವಲ್ಪನೂ ಸಂಶಯ ಬಂದಿರಲಿಲ್ಲ .

 

ಹೀಗೆ ವರುಷಗಳು ಉರುಳಿದವು ಈತನು ಕುಟುಂಬದಲ್ಲಿ ಒಬ್ಬನಾದ ತನ್ನ ಸ್ವಾರ್ಥಕ್ಕೋಸ್ಕರ ಕುಟುಂಬಕ್ಕೆ ಸಹಾಯಮಾಡುತ್ತ ಬಂದ .

 

ಮಕ್ಕಳು ಬೆಳೆದು ದೊಡ್ಡವರಾದರುಹುಡುಗಿಗೆ ಈತನ ಮಾತೆಂದರೆ ದೇವರ ವಾಕ್ಯ . ಹುಡುಗನಿಗೆ ಈತ ದೇವರೇ ಆಗಿದ್ದ

 

ಯಾಕೆಂದರೆ ಸಾಯೋ ಪರಿಸ್ಥಿತಿಯಲಿ ಬದುಕಿಸಿದವನು ಈತ ಅನ್ನೋ ಮಮಕಾರ .ಮಕ್ಕಳು ಬೆಳೆದಂತೆ ಅವರ ಮನಸ್ಸು ಬೆಳೆದಿತ್ತು ಹಾಗೆ ಯೋಚನೆ ಮಾಡೋ ಶಕ್ತಿನೂ ಬೆಳೆದಿತ್ತು .

 

ಬರು ಬರುತ್ತಾ ಹುಡುಗಿಗೆತನನ್ನು ನೋಡಿದರೆ ಮನಸೆಲ್ಲಾ ನೀರಿನಿಂದ ಹೋರ ಬಂದ ಮೀನಿನಂತೆ ವಿಲ ವಿಲ ಒದ್ದಾಡುತಿತ್ತು.  ಇದಕ್ಕೂ ಒಂದು ಕಾರಣ ಇತ್ತು .

 

ಒಂದು ದಿನ ಮನೆಯಲಿ ಯಾರು ಇಲ್ಲದ ಸಮಯದಲ್ಲಿ ಈತ ಇವಳಲ್ಲಿ ಮಾತನಾಡಿದ ರೀತಿ ಹಾಗಿತ್ತು. ವ್ಯಕ್ತಿಗೆ ಮೂರುಜನ ಮಕ್ಕಳು ಇವರಲ್ಲಿ ದೊಡ್ಡ ಮಗ ಹುಡುಗಿನ ಇಷ್ಟ ಪಟ್ಟಿದ್ದ .ಹುಡುಗಿಗೂ ತಿಳಿಸಿದ್ದ.

 

ಆದರೆ ಹುಡುಗಿಗೆ ಇಷ್ಟ ಇದ್ದರೂ ತಾಯಿ ಮತ್ತು ಮಾವಂದಿರ ಭಯ . ಹಾಗಾಗಿ ಹುಡುಗಿ ಏನು ಉತ್ತರ ಕೊಡೋದು ಅಂತ ಗೊತ್ತಾಗದೆ ಹುಡುಗನ ತಂದೆಯಲ್ಲಿ( ವ್ಯಕ್ತಿ) ಹೇಳುತ್ತಾಳೆ.

 

ಆಗ ಸಮಯದಲ್ಲಿ ಹುಡುಗಿ ಯೋಚನೇನು ಮಾಡದ ರೀತಿ ವ್ಯಕ್ತಿ ಮಾತನಾಡುತ್ತಾನೆ. ಅವನು ಹುಡುಗ ಅವನ ಪ್ರಾಯನೇ ಅಂತದ್ದು ನೀನೆ ಸಹಕರಿಸು ಅಂತಾನೆ.

 

ನಿಮ್ಮ ಮದುವೆ ನಾನೇ ಮಾಡಿಸ್ತೀನಿ. ನಿನ್ನ ಅಮ್ಮನಲ್ಲಿ ಮಾವನಲ್ಲಿ ನಾನೇ ಮಾತಾಡ್ತೀನಿ. ಮಾತು ಆತನ ಬಾಯಿಂದ ಹೊರಬಿಳೋ ಅಷ್ಟರಲಿ ಹುಡುಗಿಗೆ ಅವನ ಮೇಲಿರುವ ಅಭಿಮಾನ ಇನ್ನು ಜಾಸ್ತಿಯಾಗುತ್ತೆ .

 

ಪಾಪ ಈಕೆಗೆನು ಗೊತ್ತು ಈತ ನಯವಂಚಕನೆಂದು! ಈತನ ಮಾತು ಕೇಳಿ ಹುಡುಗನನ್ನು  ಪ್ರೀತಿಸಲು ಪ್ರಾರಂಭಿಸಿದಳು .

 

 

 ಹೀಗೆ ಒಂದು ದಿನ ಮಾತಾಡುತ್ತ ತನ್ನ ಮಗನ ಮತ್ತು ಹುಡುಗಿಯ ಪ್ರೀತಿ ಬಗ್ಗೆ ವಿಚಾರಿಸಿದ . ಹುಡುಗಿ ಆತ ನನಗೂ ಇಷ್ಟ ಆದರೆ ನಮ್ಮ ಮನೆಯವರ ಮಾನ ಮರ್ಯಾದೆ ಹಾಳು ಮಾಡಲು ಇಷ್ಟ ವಿಲ್ಲ ಅಂದಳು .

 

ಈತ ಮಾತನ್ನು ಹೇಳೋದೇ ಕಾಯುತಿದ್ದ . ಕೂಡಲೇ ಆತ ನಾನು ಒಪ್ಪಿಸುತ್ತೇನೆ ನಾನೆ ನಿಂತು ನಿಮ್ಮ ಮದುವೆ ಮಾಡುತ್ತೀನಿ ಅಂತಾನೆ ಆದರೆ ನಾನೊಂದು ಮಾತು ಹೇಳ್ತೀನಿ ಅದರಂತೆ ನೀನು ನಡೆದು ಕೊಳ್ಳ ಬೇಕು ಅನ್ನೋ ಕೆಟ್ಟ ಬೇಡಿಕೆನ ಅವಳ ಮುಂದೆ ಇಡುತ್ತಾನೆ.

 

ಇವಳಿಗೆ ಆತನ ಮಾತಿನ ಓಳ ಮರ್ಮದ ಅರಿವಿಲ್ಲದೆ ಸರಿ ಅನ್ನುತಾಳೆ .

 

ಹೀಗೆ ಸ್ವಲ್ಪ ದಿನಗಳಲ್ಲಿ ಹುಡುಗಿ ಮತ್ತೆ ಒಂಟಿಯಾಗಿ ಸಿಕ್ಕಿದಳು . ಆವತ್ತು ಆತ ನೋಡೋ ರೀತಿ ಮಾತನಾಡೋ ಶೈಲಿಯಲ್ಲಿ ಏನೋ ವ್ಯತ್ಯಾಸ ಕಂಡಳು. ಅವನು ಅಂದ ಮಾತು ಹೀಗಿತ್ತು.

 

“ನಿನ್ನನ್ನು ನಾನು ನನ್ನ ಸೊಸೆ ಯಾಗಿ ನನ್ನ ಮನೆ ತುಂಬಿಸಿ ಕೊಳ್ಳುತ್ತೇನೆ. ಆದರೆ ನೀನು ನನ್ನ ಮಾತು ಕೇಳಬೇಕು ನಾನು ಹೇಳಿದ ಹಾಗೆ ಕೇಳಬೇಕು ನನ್ನ ಬಯಕೆ ತೀರಿಸ ಬೇಕು.”

 

 ಅವನ ಬಾಯಿಂದ ಬಂದ ಮಾತಿಂದ ಆತನ ವ್ಯಕ್ತಿತ್ವ ಸಾಬೀತಾಯಿತು. ಹುಡುಗಿಗೆ ಏನು ಹೇಳುವುದು ಎಂದು ಗೊತ್ತಾಗದೆ ಅಲ್ಲೇ ಕುಸಿದು ಕುಳಿತಳು .

 

ಯೋಚನೆ ಮಾಡಿ ಹೇಳು ಈಗ ನಾನು ಹೇಳಿದ ಮಾತು ಕೇಳಿದರೆ ನಿನ್ನ ಇಷ್ಟದಂತೆ ನಿನ್ನ ಮದುವೆನ ನನ್ನ ಮಗನ ಜೊತೆ ಮಾಡ್ತೀನಿ ಅಂತ ಹೇಳಿ ಹೊರಡುತ್ತಾನೆ.

 

ಎಳೆ ಮನಸ್ಸು ಸಮಾಧಾನ ಮಾಡಿ ಕೊಳ್ಳೋದಿಕ್ಕೆ ತುಂಬಾನೇ ಸಮಯ ತೆಗೆದುಕೊಳ್ಳುತ್ತೆ. ಅನಂತರ ಒಂದು ನಿರ್ಧಾರಕ್ಕೆ ಬರುತ್ತಾಳೆ.

 

ಒಂದು ವಾರ ಯೋಚನೆ ಮಾಡಿ ಅವನಲ್ಲಿ ನಾನು ನಿನ್ನ ಮಗಳಿಗಿಂತ ಇನ್ನೂ ಚಿಕ್ಕವಳು ನೀವು ನನ್ನ ದೃಷ್ಟಿಲಿ ನೊಡುತ್ತೀರಾ ಅಂತ ಅಂದುಕೊಂಡಿರಲಿಲ್ಲ. ದಯವಿಟ್ಟು ನನ್ನ ಜೀವನನ ಅದರ ಪಾಡಿಗೆ ಬಿಟ್ಟು ಬಿಡಿ. ಇನ್ನು ಯಾವತ್ತೂ ನನ್ನಲ್ಲಿ ವಿಷಯ ಮಾತಡಬೇಡಿ. ಇನ್ನು ನಾನು ಯಾವತ್ತು ನಿಮ್ಮ ಮತ್ತು ನಿಮ್ಮ ಮನೆಯವರ ವಿಷಯಕ್ಕೆ ಬರೋದಿಲ್ಲ. ಅಂತ ಹೇಳಿದಳು.

 

 ಇಂತಹ ಮಾತು ಇವನಂತಹ ವ್ಯಕಿಗಳಿಗೆ ಅರ್ಥ ಅಗಬೇಕಲ್ವ. ಎಳೆ ಬಾಲೆಯ ಮಾತುಗಳು ಈತನ ಮನಸ್ಸಿಗೆ ಮುಟ್ಟಲೇಯಿಲ್ಲ.ಈತನಿಂದ ಮತ್ತೂ ತೊಂದರೆ ಕಡಿಮೆ ಆಗಲೇ ಇಲ್ಲ. ಈತನ ವರ್ತನೆಯಿಂದ ಹುಡುಗಿ ಹುಡುಗರನ್ನು ದ್ವೇಷಿಸಲು ಪ್ರಾರಂಭಿಸಿದಳು

 

ಮನೆಯಿಂದ ಹೊರಗಡೆ ಮತ್ತು ಒಳಗಡೆ ಒಬ್ಬಳೇ ಇರಲು ಭಯ ಪಡುತ್ತಿದ್ದಳು . ಇದನ್ನು ಗಮನಿಸಿದ ಈಕೆಯ ಮಾವ (ತಾಯಿಯ ತಮ್ಮ) ಒಂದು ವಿಷಯ ಇವಳ ಮುಂದೆ ಇಡಲು ಬಯಸುತ್ತಾರೆಇದರ ಬಗ್ಗೆ ಈಕೆಯ ತಾಯಿಯಲ್ಲೂ ಮಾತಾನಾಡಿ ಒಪ್ಪಿಸುತ್ತಾರೆ.

 

ಹುಡುಗಿಗೆ ಮಕ್ಕಳು ಅಂದರೆ ತುಂಭಾ ಪ್ರೀತಿ. ವಿಷಯ ತಿಳಿದ ಹುಡುಗಿಯ ಮಾವ ಈಕೆನ ಒಂದು ಸಣ್ಣ ಮಕ್ಕಳ ಆಟ ಆಡುವ ಶಾಲೆಗೆ ಸಹಾಯಕಿಯಾಗಿ ಕೆಲಸಕ್ಕೆ ಸೇರಿಸುತ್ತಾರೆ. ಇದರಿಂದ ಹುಡುಗಿಯ ಮನಸ್ಸಿಗೂ ನೆಮ್ಮದಿಯಾಯಿತು.

 

ಹೀಗೆ ವರುಷಗಳು ಕಳೆದವು. ಹುಡುಗಿಯು ತನ್ನ ಜೀವನದಲ್ಲಿ ನಡೆದ ಕೆಟ್ಟ ಘಟನೆನ ಮರೆಯುತ್ತಾ ಬಂದಳು. ಅಷ್ಟರಲ್ಲಿ ಅವರ ಕಿರುಕುಳನು ಕಡಿಮೆಯಾಗಿತ್ತು. ಆದರೆ ಹುಡುಗಿಗೆ ಪುರುಷರ ಬಗ್ಗೆ ಇದ್ದ ದ್ವೇಷ ಮಾತ್ರ ಕಡಿಮೆಯಾಗಿರಲಿಲ್ಲ. ಇನ್ನು ತನ್ನ ವಿದ್ಯಾಬ್ಯಾಸ ಮುಂದುವರಿಸಬೇಕು ಎಂದು ನಿರ್ಧರಿಸಿ ಅಲ್ಲಿಂದ ಕೆಲಸ ಬಿಟ್ಟು ಕಲಿಕೆಯ ಕಡೆಗೆ ಗಮನ ಹರಿಸುತ್ತಾಳೆ.

 

ತಾನು ಕಲಿಯುವ ವಾತವರಣದಲ್ಲಿ ಎಲ್ಲರ ಜೊತೆ ಬೆರೆಯಲು ಮನಸ್ಸು ಒಪ್ಪುವುದಿಲ್ಲ. ಹೀಗೆ ತಾನಯಿತು ತನ್ನ ಓದಾಯಿತು ಅಂತ ಇರುವ ಹುಡುಗಿಯ ಸ್ನೇಹ ಪಡೆಯಲು ಒಬ್ಬ ಹಾತೊರೆಯುತ್ತಾನೆ. ಅಂತೂ ಕೊನೆಗೆ ಆಕೆಯ ಸ್ನೇಹನ ಪಡೆಯುತ್ತಾನೆ. ಒಳ್ಳೆಯ ಸ್ನೇಹಿತರಾಗುತ್ತಾರೆ.

 

ಇವರ ಸ್ನೇಹ ಎಷ್ಟು ಬೆಳೆದಿತ್ತು ಎಂದರೆ ಇಬ್ಬರ ನಡುವೆ ಯಾವುದೇ ಮುಚ್ಚು ಮರೆ ಇರಲಿಲ್ಲ . ಹುಡುಗಿಗೆ ಪರುಷರಲ್ಲಿ ಇದ್ದ ಭಯ ಕೋಪ ಎಲ್ಲ ಈತನಿಂದ ನಾಶವಾಯಿತು.

 

ಓದು ಮುಗಿಯಿತು ಹುಡುಗನಿಗೆ ದೂರದ ಊರಲ್ಲಿ ಕೆಲಸ ಸಿಕ್ಕಿತು.ಹುಡುಗಿಗೆ ಇದೆ ಊರಲ್ಲಿ ಕೆಲಸ ದೊರಕಿತು. ದಿನಾಲೂ ಅವನಿಂದನು ಫೋನ್ ಬರುತಿತ್ತು ಇವಳು ಮಾಡುತ್ತಿದಳು . ಹೀಗೆ ಬರುಬರುತ್ತಾ ಆತನ ಕಡೆಯಿಂದ ಫೋನ್ ಬರುವುದು ಕಡಿಮೆಯಾಯಿತು. ಇಲ್ಲಿಂದ ಈಕೆ ಫೋನ್  ಮಾಡುತ್ತಿದ್ದಳು. ಕೊನೆಗೆ ಆತ ಹೇಳಿಬಿಟ್ಟ ಫೋನ್ ಮಾಡಿ ನನಗೆ ತೊಂದರೆ ಕೊಡಬೇಡ.

 

ಸ್ನೇಹಾನ ನಂಬಿದ್ದ ತನ್ನ ಕಷ್ಟವೆಲ್ಲಾ ಹೇಳಿಕೊಳ್ಳುತ್ತಿದ್ದ ಸ್ನೇಹಿತನೇ ಹೀಗೆ ಹೇಳಿದರೆ ಈಕೆಯ ಮನಸ್ಸು ಹೇಗಾಗಿರಬೇಡ ಆದರು ಈಕೆಗೆ ಆತ ಹೀಗೆ ಹೇಳಿದನ್ನು ನಂಬಲಾಗುತ್ತಿಲ್ಲ. ಏನೋ ತೊಂದರೆ ಆಗಿರಬೇಕು ಅಂತ ಒಂದು ಮೇಲ್ ಕಳಿಸಿದಳು.

 

ಅದರಲ್ಲಿ ಹೀಗೆ ಬರೆದಿತ್ತು . ಸ್ನೇಹವೇ ಏನಾಗಿದೆ ನಿನಗೆ ನನ್ನ ಮನಸ್ಸು ಹೇಳ್ತಿದೆ ನೀನು ತೊಂದರೆಯಲ್ಲಿಯಿದ್ದಿಯಾಂತ. ತಿಳಿಸು ನನ್ನಿಂದ ಆಗಬಹುದಾದ ಸಹಾಯ ಮಾಡುವೆ .ಅಥವಾ ನನ್ನಿಂದ ಏನಾದರೂ ತೊಂದರೆ ಆಗಿದ್ದರೆ ಹೇಳು ಇನ್ನುಏನು ಹೇಳಲ್ಲ . ಆದರೆ ನನ್ನ ಸ್ನೇಹಾನ ಮಾತ್ರ ಮರೆಯಬೇಡ. ನನ್ನ ಸ್ನೇಹ ಯಾವಾಗಲು ನಿನ್ನ ನೆನಪ್ಪಿಟ್ಟು ಕೊಳ್ಳುತ್ತೆ. ಹಾಗು ನಿನ್ನ ಸಾಂತ್ವನಕ್ಕೊಸ್ಕರ ಕಾಯುತ್ತಿರುತ್ತೆ .

 

ಆತನಿಂದ ಉತ್ತರನೂ ಬರಲಿಲ್ಲ. ಫೋನೂ ಇಲ್ಲ ಇನ್ನು ನನ್ನಿಂದ ಆತನಿಗೆ ತೊಂದರೆಯಾಗಬಾರದು ಎಂದು ನಿರ್ಧರಿಸಿ ತನ್ನ ಪಾಡಿಗೆ ತಾನು ಇರಲು ನಿರ್ಧರಿಸಿದಳು.

 

ಹೀಗೆ ಒಂದು ದಿನ ಇದ್ದಕ್ಕಿದಂತೆ ಆತನಿಂದ ಒಂದು ಸಂದೇಶ ಬಂತು

 

ದಯವಿಟ್ಟು ನನಗೆ ಸಹಾಯ ಮಾಡು ನನಗೆ ತುರ್ತಾಗಿ ಸ್ವಲ್ಪ ಹಣದ ಅವಶ್ಯಕತೆ ಇದೆ. ಎಲ್ಲಿಯೂ ಸಿಗಲಿಲ್ಲ ಕೊನೆಗೆ ನಿನ್ನಲಿ ಕೇಳುತ್ತಿದ್ದೇನೆ ನನಗೆ ಸಂಜೆಯೊಳಗೆ 5000 ರೂಪಯಿ ಕಳುಹಿಸಿಕೊಡು ನಮ್ಮ ಸ್ನೇಹಾನ ದುರುಪಯೋಗ ಮಾಡುತ್ತಿದ್ದೇನೆ ಅಂತ ತಿಳ್ಕೋಬೇಡ. ಹಣ ಯಾಕೆ ಏನು ಅಂತ ಕೇಳಬೇಡ ಸಮಯ ಬಂದಾಗ ನಾನೇ ಹೇಳುತ್ತೇನೆ . ದಯವಿಟ್ಟು ಸಹಾಯ ಮಾಡು.

 

ಹುಡುಗಿಗೆ ಗಾಬರಿಯಾಯಿತು ಕರೆ ಮಾಡಿದಳು ಆದರೆ ಆತ ಸ್ವಿಚ್ ಒಫ್ಫ್ ಮಾಡಿದ್ದ. ಹೆದರಿಕೆಯಾಯಿತು ಮತ್ತೆ ಹೇಗೋ ಹೊಂದಿಸಿ ಹಣ ಕಳುಹಿಸಿದಳು.

 

ಮತ್ತೆ ಬಂತು ಸಂದೇಶ ಧನ್ಯವಾದಗಳು ನೀನಿನ್ನು ನಮ್ಮ ಸ್ನೇಹಾನ ಮರೆತಿಲ್ಲ ಅಲ್ವಾ ಆದರೆ ನಾನು?

 

ಅಯ್ಯೋ ಏನಾಗಿದೆ ಇವನಿಗೆ ಯಾಕೆ ರೀತಿ ಸಂದೇಶ ಕಳುಹಿಸುತ್ತಿದ್ದಾನೆ ಇರಲಿ ಕಾಯುತ್ತೇನೆ ನನ್ನ ಸ್ನೇಹ ನನಗೆ ಮೋಸ ಮಾಡೋದಿಲ್ಲ.

 

ಹೀಗೆ 3 ತಿಂಗಳುಗಳು ಕಳೆದಾಗ ಇನ್ನೊಂದು ಸಂದೇಶ.

     ನಿನ್ನ ಕೊನೆ ಬಾರಿ ನೋಡಬೇಕು ನಿನ್ನ ಮಡಿಲಲ್ಲಿ ಮಲಗಬೇಕು ನಿನ್ನ ಕೈಯಿಂದ ನನಗಿಷ್ಟವಾದುದ್ದನ್ನು ತಿನ್ನಬೇಕು. ತುಂಬಾ ಆಸೆಯಿಂದ ಕೇಳಿಕೊಳ್ಳುತ್ತಾಇದ್ದೀನಿ ನನಗೇನಿಷ್ಟ ಅಂತ ನಿನಗೆ ಗೊತ್ತು . ನಿನ್ನ ಬರುವಿಕೆಗೊಸ್ಕರ ಉಸಿರು ಬಿಗಿ ಹಿಡಿದು ಕಾಯುತ್ತಿರುತ್ತೇನೆ ಬೇಗ ನಮ್ಮ ಮನೆಗೆ ಬಂದು ಬಿಡು ಆದಷ್ಟು ಬೇಗ .

 

ಇದನ್ನು ಓದಿದ ಹುಡುಗಿಗೆ ಆದ ಸಂತೋಷ ಅಷ್ಟಿಷ್ಟಲ್ಲ . ನನಗೆ ಒಂದು ಸುಳಿವು ಕೊಡದೆ ಊರಿಗೆ ಬಂದಿದ್ದೀಯಲ್ಲ ಇರು ಈಗ ಹೊರಡುತ್ತೇನೆ ಆಗಲೇ ನೆನಪಾಯಿತು ಆತನಿಗೆ ನಾನು ಮಾಡಿದ ಪಾಯಸ ತುಂಬಾ ಇಷ್ಟ ಅಂತ . ಕೂಡಲೇ ಪಾಯಸ ಮಾಡಿ ಬಾಕ್ಸ್ ನಲ್ಲಿ ತುಂಬಿಸಿ ತಾಯಿಯೊಂದಿಗೆ ಹೊರಟಳು. ಬೇಗ ತಲುಪಬೇಕು ಅಂತ ಆಟೋ ಮಾಡಿ ಹೊರಟಳು .

 

ಆಗ ಇನ್ನೊದು ಸಂದೇಶಆದಷ್ಟು ಬೇಗ ಬನ್ನಿ” ಇದನ್ನ ನೋಡಿದ ಹುಡುಗಿಗೆ ಆಶ್ಚರ್ಯ ಇವನ್ಯಾಕೆಬನ್ನಿ” ಅಂತಾನೆ ? ಬಾ ಅನ್ಬೇಕಿತಲ್ವಾ ಅಂತ ಯೋಚಿಸ್ಕೊಂಡು ಆತನ ಮನೆ ಹತ್ತಿರ ಬಂದೇ ಬಿಟ್ಟರು . ಹುಡುಗಿಗೆ ಆಗ ಅರಿವಾಯಿತು ಅಲ್ಲಿಯ ಪರಿಸ್ಥಿತಿ !

 

ಆಟೋ ಇಳಿಯುತ್ತಿದ್ದಂತೆ ಹುಡುಗಿಯ ಜೊತೆ ಓದುತಿದ್ದವರಲ್ಲಿ 3 ಜನ ಹುಡುಗರು ಬಂದು ಬೇಗ ಬಾ ಎಂದು ಆಕೆನ ಎಳೆದುಕೊಂಡೇ ಹೊರಟರು ಮನೆ ತುಂಬಾ ಜನ ಹಾಗೂ ಗುಸು ಗುಸು ಮಾತು.

 

ಮನೆ ಒಳಗಡೆ ಕಾಲು ಇಡುತ್ತಿದ್ದಂತೆ ಎದೆ ಬಡಿತ ಯಾಕೋ ಹೆಚ್ಚಾಗಿತ್ತು ಕೈ ಕಾಲು ನಡುಗುತ್ತಿತ್ತು . ಇನ್ನು ನಡೆಯಲು ಆಗದು ಅನ್ನೋ ಮನಸ್ಥಿತಿ ಅಲ್ಲೇ ಕುಳಿತು ಬಿಡಲೇನೋ ಅನ್ನೋ ಅನಿಸಿಕೆ.

 

 ಹೀಗೆ ಮನೆ ಒಳಗಡೆ ಕಾಲಿಟ್ಟವಳು ಮಂಚದಲ್ಲಿ ಮಲಗಿದ್ದ ತನ್ನ ಸ್ನೇಹಿತನ ಕಂಡು ಅಲ್ಲೇ ಕುಸಿದಳು. ಮತ್ತೆ ಚೇತರಿಸಿ ಕೊಂಡವಳಿಗೆಆತನನ್ನು ನೋಡಲಾಗಲಿಲ್ಲ ಹೇಗಿದ್ದವನು ಈಗ ಹೀಗೆ ಲೋಕದ ನೆನಪೇ ಇಲ್ಲದಂತೆ ಮಲಗಿದ್ದಾನೆ ಕಣ್ಣು ಮುಚ್ಚಿ ಮಲಗಿದ್ದಾನೆ.

 

 ಹತ್ತಿರ ಬಂದು ನೋಡಿದವಳಿಗೆ ಆತನ ಮುಖ ನೋಡಲಾಗಲಿಲ್ಲ ಹೊರಗೆ ಓಡಿಬರಬೇಕೆಂದು ಕೊಂಡಳು.

 

 ಅಲ್ಲಿಂದ ಹೊರಡಬೇಕೆಂದು ಅಂದುಕೊಳ್ಳುವಷ್ಟರಲ್ಲಿ ಆತ ಆಕೆಯ ದುಪ್ಪಟ್ಟನ ಹಿಡಿದ್ದಿದ್ದ ತಿರುಗಿ ನೋಡಿದವಳಿಗೆ ಆಳು ನುಂಗಲಾಗಲಿಲ್ಲ . ಕಣ್ಣಂಚ್ಚಿಂದ ಕಣ್ಣಹನಿ ಜಾರಿತ್ತು.

 

ಎಷ್ಟು ನಿಶ್ಯಕ್ತನಾಗಿದ್ದ ಎಂದರೆ ಮಾತನಾಡಲು ಆಗುತ್ತಿರಲಿಲ್ಲ ಬಾ ಎಂದು ಸನ್ನೆ ಮಾಡಿ ಕುಳಿತು ಕೊಳ್ಳಲು ಹೇಳಿದ. ಈಕೆ ಆತನ ತಲೆಯನ್ನೆತ್ತಿ ತನ್ನ ಮಡಿಲಲ್ಲಿ ಮಲಗಿಸಿದಳು.

 

ಸಮಯದಲ್ಲಿ ಆತನ ಮುಖದಲ್ಲಿ ಸಂತೋಷದ ಅಲೆಯೊಂದು ಬಂದು ಹಾಗೆ ಮರೆಯಾಯಿತು.

 

 ತಾನು ತಂದಿದ್ದ ಪಾಯಸವನ್ನು ಸ್ವಲ್ಪ ಸ್ವಲ್ಪವೇ ತಿನ್ನಿಸಿದಳು. ತುಂಬಾ ಕಷ್ಟದಲ್ಲಿ ತಿನ್ನುತಿದ್ದ ಮಧ್ಯ ಮಧ್ಯ ಆಕೆಯ ಕೈಯನ್ನು ತನ್ನ ಎದೆಗಂಟುವಂತೆ ಗಟ್ಟಿಯಾಗಿ ಹಿಡಿಯುತ್ತಿದ್ದ.

 

ಹಾಗೆ ತನ್ನ ತಂಗಿಯ ಕಡೆ ತಿರುಗಿ ಏನೋ ಸನ್ನೆ ಮಾಡಿದ ಆಗ ಆಕೆ ಒಂದು ಪತ್ರ ತಂದುಕೊಟ್ಟಳು. ಅದನ್ನ ಸ್ನೇಹಿತೆಯ ಕೈಗಿತ್ತು ನಾನು ಹೋಗುತ್ತಿದ್ದೇನೆ. ಇನ್ನು ನಿನ್ನ ಮಗನಾಗಿ ಹುಟ್ಟಿ ಬರಲು ಅವಕಾಶ ನೀಡುವೆಯಾ ಎಂದು ಕೇಳುತ್ತಾನೆ.

 

ಸಮಯದಲ್ಲಿ ಆಕೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಬಿಸಿದಳು. ಅಲ್ಲಿ ಇದ್ದವರೆಲ್ಲರ ಕಣ್ಣು ಒದ್ದೆಯಾಯಿತು.

 

ಪತ್ರ ಓದು ಎಂದು ಸನ್ನೆ ಮಾಡಿದ  ಪತ್ರದಲ್ಲಿ  ಹೀಗೆ ಬರೆದಿತ್ತು

 

 

 

ಪ್ರಿಯ ಗೆಳತಿ ,

ಬದುಕಿನಲ್ಲಿ ನಾನು ಪಡೆದ ಭಾಗ್ಯಗಳಲ್ಲಿ ದೊಡ್ಡದು ನಿನ್ನ ಸ್ನೇಹ. ನಿನ್ನ ನೋಡಿದ ಮೊದಲನೇ ದಿನನೇ ಹೃದಯ ಮನಸ್ಸನ್ನು ತಟ್ಟಿ ಹೇಳಿತು ಈಕೆ ನಿನ್ನ ಗೆಳತಿ. ಆದರೆ ನಾನು ಕೆಲಸದ ವಿಚಾರವಾಗಿ ದೂರ ಹೋಗಬೇಕಾಗಿ ಬಂತು .

 

ಆವತ್ತೇ ಶುರುವಾಯಿತು ನೋಡು ನನಗೆ ಗ್ರಹಚಾರ . ಹೋದ ಎರಡೇದಿನಗಳಲ್ಲಿ ಒಬ್ಬ ಹುಡುಗಿಯ ಪರಿಚಯವಾಯಿತು. ಪರಿಚಯನೇ ಸ್ನೇಹ ಪ್ರೀತಿಗೆ ಬದಲಾವಣೆ ಯಾಯಿತು. ತುಂಬಾನೇ ಪೀತಿ ಮಾಡ್ತಿದ್ದೆ ಅವಳ್ನ. ಅವಳು ಅಷ್ಟೇ ಪ್ರೀತಿ ಮಾಡ್ತಾ ಇದ್ಲು ಅಂತ ನಂಬಿದ್ದೆ.

   

ಆದರೆ ಆಕೆ ಮೋಸ ಮಾಡಿ ಬಿಟ್ಲು ನನ್ನ ಒಳ್ಳೆತನನ ದುರುಪಯೋಗ ಮಾಡಿ ಬಿಟ್ಲು. ಅವಳು ಅಸೆ ಪಟ್ಟಳು ಅಂತ ನರ್ಸಿಂಗ್ ಕಲಿಯೋದಿಕ್ಕೆ ಸಹಾಯ ಮಾಡಿದೆ. ಎರಡು ವರುಷ ನಾನೇ ಖರ್ಚು ಮಾಡಿ ಕಳಿಸಿದೆ. ಈಗ ಮೂರನೆ ವರುಷದ ಕಲಿಕೆ ನಡೆಯುತಿದೆ.

    

ಈಗ ನಾನು ಅವಳಿಗೆ ಬೇಡವಾದೆ ಯಾರೋ ಇನ್ನೊಬ್ಬ ಸಿಕ್ಕಿದ್ದಾನೆ ಅವನು ನನ್ನ ದುಬೈ ಗೆ ಕರೆದು ಕೊಂಡು ಹೋಗ್ತಾನಂತೆ ಅದಕ್ಕಾಗಿ ನಾನು ಅವನ ಜೊತೆ ಅಲ್ಲಿ ಹೋಗ್ತೀನಿ ಅವನನ್ನೇ ಮದುವೆ ಆಗುತ್ತೀನಿ ಅಂತ ಹೇಳಿ ಹೋದಳು.

    

 ಈಗ ಹೇಳು ನಾನು ಏನು ಮಾಡಲಿ ಅವಳ ಅಪ್ಪ ಈಗಲೂ ಅವಳನ್ನ ನಿನಗೆ ಕೊಟ್ಟು ಮದುವೆ ಮಾಡುತ್ತೀನಿ ಅಂತಾನೆ ಹೇಳ್ತಾರೆ. ಅದಿಕ್ಕೆ ನಾನೇ ಸತ್ತರೆ ಒಳ್ಳೆದಲ್ಲವೇ? ಅವಳಿಗಾಗಿ ತಂದ ಬಣ್ಣದ ಬಳೆಗಳನ್ನೇ ನನ್ನ ಉಸಿರು ನಿಲ್ಲಿಸಲು ಬಳಸಿದ್ದೀನಿ.

 

ಇನ್ನೊಂದು ವಿಷಯ ನೀನು ನನಗೆ ಮಾಡಿದ ಸಹಾಯಕ್ಕೆ ಇನ್ನೂ ಮುಂದೆ ನಿಮ್ಮ ಸಂಸಾರಕ್ಕೆ ಏನು ತೊಂದರೆ ಅಗಬರದೆಂದು ನಾನು ಬಿಟ್ಟು ಹೋಗುತ್ತಿರೋ ಕೆಲಸವನ್ನು ನಿನ್ನ ತಮ್ಮನಿಗೆ ವಹಿಸುತ್ತೇನೆ.

 

 ನನ್ನ ಮನೆಯವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡ ನಿನಗೆ ಹಾಗೂ ನಿನ್ನ ಮನೆಯವರಿಗೆ ನನ್ನ ಉಡುಗೊರೆ ಇತೀ ನಿನ್ನ ಪುಟ್ಟ

 

ಇಷ್ಟು ಬರೆದು ತನ್ನ ಕಛೇರಿಯ ವಿಳಾಸ ಬರೆದಿತ್ತು ಇನ್ನೂ ಒಂದು ತಿಂಗಳು ಬಿಟ್ಟು ನಿನ್ನ ತಮ್ಮನನ್ನು ಕಳುಹಿಸು ಎಂದಿತ್ತು. ಸ್ನೇಹದ ಮದ್ಯೆ ಹಣದ ವಿಷಯ ಬರಬಾರದಂತೆ ಹಾಗಾಗಿ ನೀನು ಕಳುಹಿಸಿರೋ ಹಣನ ಬಡ್ಡಿ ಸಮೇತವಾಗಿ

ನಿನ್ನ ಖಾತೆಗೆ ಜಮಾ ಮಾಡಿರುವೆ. 
 
ಪತ್ರ ಓದಿ ಮುಗಿಯುತಿದ್ದಂತೆ ಪತ್ರ ಪೂರ್ತಿಯಾಗಿ ಒದ್ದೆಯಾಗಿತ್ತು

ಹಾಗೆ ಈತನ ಉಸಿರಲ್ಲಿ ಎರಿಳಿತ ಪ್ರಾರಂಭವಾಗಿತ್ತು.

 
ಇನ್ನು ನನ್ನಿಂದ ನೋಡಲಾಗಲ್ಲ ಎಂದು ತನ್ನ ಮಡಿಲಿಂದ ಎತ್ತಬೇಕೆನ್ನುವಷ್ಟರಲ್ಲಿ ಬೇಡ ಎಂದು ಸನ್ನೆ ಮಾಡಿ ಆಕೆಯ ಎರಡೂ ಕೈಗಳನ್ನು ಆತನ ಎದೆಗೆ ಒತ್ತಿ ಹಿಡಿದುಕೊಂಡ.
 
ಇದನ್ನು ನೋಡಲಾಗದ ಹುಡುಗಿ ಕಣ್ಣು ಮುಚ್ಚಿ ಅಳತೊಡಗಿದಳು. ಇದ್ದಕ್ಕಿದಂತೆ ಹಿಡಿದ ಹಿಡಿತ ಸಡಿಲವಾಗುತ್ತಾ ಬಂತು. ಮತ್ತದೇ ಮಾತು ಬರುವ ಜನುಮದಲ್ಲಿ ನಿನ್ನ ಮಗನಾಗಿ ಹುಟ್ಟಿ ಬರಲೇ?  ಈ ಮಾತಿಗೆ ಉತ್ತರ ನೀಡುವ ಮೊದಲೇ  ಮಡಿಲಲ್ಲಿ ಇದ್ದ ಭಾರ ಪಕ್ಕಕ್ಕೆ ವಾಲಿದಂತಾಯಿತು. ಕಣ್ಣು ಬಿಟ್ಟು ನೋಡಿದರೆ ತನ್ನ ಸ್ನೇಹಿತನ ಪ್ರಾಣ ಪಕ್ಷಿ ಹಾರಿಹೋಗಿತ್ತು .

ವಿಧಿಯು ಇವರ ಸ್ನೇಹದಲ್ಲಿ ತನ್ನ ಆಟ ಮುಗಿಸಿತ್ತು.

 

[ “ ಕತೆಯನ್ನು ಬರೆದ ಮೇಲೆ (ಕತೆಯ  ಆರಂಭ  ಮತ್ತು  ಅಂತ್ಯವನ್ನು  ತಿದ್ದಿ, ಅದಕ್ಕೆ  ಸೂಕ್ತವಾದ  ಛಾಯಾಚಿತ್ರ  ನೀಡಿದವರು ಛಾಯಕನ್ನಡಿಯ  ಶಿವಣ್ಣ )ಅವರಿಗೆ ದನ್ಯವಾದಗಳನ್ನು ಹೇಳುತ್ತಾ ……ಈ ಕತೆ ತಮಗೆಲ್ಲಾ ಇಷ್ಟವಾಗುತ್ತೆ ಅಂದುಕೊಂಡಿದ್ದೇನೆ….…. ಓದಿ ನೋಡಿ ಕಾಮೆಂಟ್ ಮಾಡಿ ಪುಟ್ಟ ತಂಗಿಯನ್ನು ಪ್ರೊತ್ಸಾಹಿಸಿ..” ]