Monthly Archives: ಫೆಬ್ರವರಿ 2009

ಎಲ್ಲರಿಗೂ ಧನ್ಯವಾದ ಹೇಳುತ್ತಾ

thank-you1ಬರಿಬೇಕು ಅಂತ ಕೂತೆ ಆದ್ರೆ ಏನ್ ಬರಿಲಿ ಅಂತ ಯೋಚನೆ ಮಾಡಿ ಮಾಡಿ ಸಾಕಾಗೋಯ್ತು . ಅಷ್ಟರಲ್ಲಿ ನನ್ನ ತಮ್ಮ ಬಂದು ನಿಂಗೆ ಈ ಬ್ಲಾಗ್ ಪ್ರಾರಂಭಿಸಲು ಯಾರು ಹೇಳಿ ಕೊಟ್ಟಿದ್ದು? ಅನ್ನೋ ಪ್ರೆಶ್ನೆನ ಮುಂದಿಟ್ಟ ಒಂದು ಒಳ್ಳೆ ವಿಷಯ ಸಿಕ್ಕಿತು ಅಂತ ಖುಷಿ ಪಟ್ಟು ಆತನಿಗೆ ಧನ್ಯವಾದ ಹೇಳಿ. ನೋಡಿ ಹೀಗೆ ಪ್ರಾರಂಭಿಸಿದೆ. ಶಾಲೆಗೆ ಹೋಗುತ್ತಿರುವಾಗಲೇ  ಕವನ ಓದೋದು ಸಂಗ್ರಹಿಸೋದು ಅಂದರೆ ತುಂಬಾ ಇಷ್ಟ. ಉದಯವಾಣಿ ಪತ್ರಿಕೇಲಿ ಬರುತಿದ್ದ ಕಾವ್ಯ ಬಿಂದು ಓದುತಿದ್ದೆ. ನಾನು ಒಂದು ದಿನ ಹೀಗೆ ಬರೀಬೇಕು ಅಂತ ಅಸೆ ಪಡುತಿದ್ದೆ. ಆದರೆ ಏನು ಬರೆಯುವುದೆಂದು ಗೊತ್ತಾಗುತ್ತಿರಲಿಲ್ಲ ಏನಾದ್ರು ಬರೆದರು ಅದನ್ನ ಯಾರಿಗೂ ತೋರಿಸಲು ಭಯ ಯಾಕೆಂದರೆ ಎಲ್ಲರೂ ತಮಾಷೆ ಮಾಡುತ್ತಿದ್ದರು. ಹಾಗೇ ನನ್ನ ಆಸೇನ  ಅಲ್ಲೇ ಮುಚಿಡುತಿದ್ದೆ. ಹೀಗೆ ನನ್ನ ಕವನ ಹಾಗೂ ಲೇಖನ ಸಂಗ್ರಹಿಸೋ ಹುಚ್ಚು ಬೆಳೆಯುತ್ತಾ ಹೋಯಿತು. ಹೀಗೆ ಒಂದು ದಿನ ಆರ್ಕುಟ್ ನಲ್ಲಿ ಸದಸ್ಯೆಯಾದೆ. ಇಲ್ಲಿ ನನ್ನ ಏನಾದ್ರು ಬರೀಬೇಕು ಅನ್ನೋ ಅಸೆ ಮತ್ತೆ ಚಿಗುರೊಡೆಯಿತು ಅದಿಕ್ಕೆ ಮೊದಲ ಕಾರಣ ನವಿಲೂರ ಹುಡುಗ ಸೋಮಣ್ಣ ನ ಹಾಗೂ ಹರೀಶ್ ರವರ ಬರಹ. ನಾನು ಹೀಗೆ ಬರೀಬೇಕು ಅಂತ ಬರೆಯಲು ಪ್ರಾರಂಭಿಸಿದೆ. ಮೊದಲನೆಯದಾಗೆ ಸೋಮಣ್ಣನಿಗೆ ಪತ್ರ ಬರೆದೆ. ನಂತರ ಇನ್ನೂ ಬರೀಬೇಕು ಅಂತ ಅಸೆ ಬೆಳೆಯಿತು ಹಾಗಾಗಿ ಬರಿತ ಇದ್ದೆ. ಹೀಗೆ ಬರೆದಿದ್ದನ್ನು ಒಂದು ಕಡೆ ಸಂಗ್ರಹಿಸಿಡೋಕೆ ಸಹಾಯ ಮಾಡಿದೋರು ರಂಜಿತ್ ರವರು. ನಂತರದ ದಿನಗಳಲ್ಲಿ ರಾಜೇಶ್, ಜ್ಞಾನಮುರ್ತಿ, ರಂಜಿತ್, ಇಂಚರ ಸೋಮಣ್ಣ  ಇವರೆಲ್ಲರ ಬರಹ ಹಾಗೂ ಪ್ರೋತ್ಸಾಹ ಇನ್ನಷ್ಟು ಬರೆಯಬೇಕು ಅನ್ನೋ ಆಸೆ ಹುಟ್ಟಿಸಿತು.  ಹಾಗೇ ಬರೆಯುತ್ತಾ ಇದ್ದೇನೆ. ನನ್ನ ಜವಾಬ್ದರಿನ ಇನ್ನಷ್ಟು ಹೆಚ್ಚಿಸಿದವರು  ಕನ್ನಡ ಪ್ರಭ ಪತ್ರಿಕೆಯವರು. ಯಾಕೆಂದರೆ ಈ ಪತ್ರಿಕೆಯಲ್ಲಿ ಬರುವ ಬ್ಲಾಗಾಯಣ ಅನ್ನೋ ಅಂಕಣದಲ್ಲಿ ನನ್ನ ಬ್ಲಾಗನ್ನು ಎಲ್ಲರಿಗೂ ಪರಿಚಯಿಸಿದರು. ನನಗೆ ಈ ವಿಷಯನ ತಿಳಿಸಿದ್ದು ರಾಜೇಶ್. ಅವರು ತಿಳಿಸದೇ ಇದ್ದರೆ ನನಗೆ ತಿಳಿಯುತ್ತಿರಲಿಲ್ಲ ಹಾಗಾಗಿ ರಾಜೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.  ಹಾಗೇ ನನ್ನ ಬರವಣಿಗೆನ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಾ  ನನ್ನ ಜವಾಬ್ದರಿನ ನೆನಪಲ್ಲಿಟ್ಟು ಕೊಂಡು ಇನ್ನಷ್ಟು ಬರೆಯ ಬೇಕೆಂಬ ಅಸೆ ಹೊತ್ತು ಕೊಂಡು ನನ್ನ ಬರವಣಿಗೆನ ಹೀಗೆ ಮುಗಿಸಿದೆ ನೋಡಿ . ತಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ