|
|
ಸ್ಮಶಾನದಲ್ಲಿ ಕಣ್ಣೀರಿನ ಮಾತು
ತೊಟ್ಟಿಲಿನಲಿ ಮಗುವಿನ ನಗುವಿನ ಮಾತು
ಬೆಳಗಿನ ಜಾವದಲಿ ಮಂಜಿನ ಮಾತು
ಸಂಜೆಗತ್ತಲಿನ ಮಬ್ಬಿನ ಮಾತು
ಹುಣ್ಣಿಮೆ ರಾತ್ರಿಯ ಬೆಳದಿಂಗಳ ಮಾತು
ಅಮಾವಾಸ್ಯೆಯ ಕಾರ್ಗತ್ತಲಿನ ಮಾತು
ಮಾತಿನ ಮತ್ತು
ತಿಳಿದವರಿಗೆ ಗೊತ್ತು
ಕಳೆಸುವುದು ಹೊತ್ತು
ಇದರಿಂದ ಬೇರೆ ಕೆಲಸಗಳಿಗೆ ಕುತ್ತು
ಎಲ್ಲೆಲ್ಲೂ ಮೌನದ ಮಾತು
ಮಾತುಗಳು
ಮರೆತುಹೋಗಿವೆ.
ಕವನಗ್ಳು ಕಳೆಗುಂದಿವೆ.
ಶಾಯರಿಗಳಲ್ಲಿ ಸತ್ವವಿಲ್ಲ.
ಗಝಲ್ ಗಳು ಗೂಡು ಸೇರಿವೆ.
ಈಗ ಉಳಿದಿರುವುದು
ಕೇವಲ ನನ್ನ–ನಿನ್ನ ಈ ಮೌನ ಸಂಭಾಷಣೆ.
ಪ್ರೀತಿ!!!!!!!! |
ಪ್ರೀತಿಯೆಂದರೆ……
ಸಾಗರದಷ್ಟು ಆಳ
ಆಗಸದಷ್ಟು ವಿಶಾಲ
ಹೇಳಿಕೊಂಡರೆ ಗೊಂದಲ
ಹೇಳದಿರೆ ತಳಮಳ
ಅರಿತರೆ ನಿರಾಳ
ಅರಿಯದಿರೆ ಕರಾಳ
ಪ್ರೀತಿಯೆಂದರೆ………
ಅದೊಂದು ಗಾಳ!
ಸಿಲುಕಿದರೆ ಬಿಡಿಸಲಾರದ ಬಂಧ
ಸಿಲುಕದಿರೆ ನೋವು ಅನಂತ
ನೀ ಜೊತೆ ಇದ್ದಾಗ
ನಿನ್ನನ್ನೇ ಕೇಳುತ್ತಿದ್ದೆ
ಗೆಳತಿ ಪ್ರೀತಿ ಎಂದರೆ
ಏನೆಂದು . . .
ನೀ ನನ್ನನ್ನು
ಅಗಲಿದಾಗ
ನನಗನ್ನಿಸಿತು
ಅದು ನೀನೇಎಂದು.