“ರಕ್ತ ಸಂಭಂದಗಳ ಮೀರಿದ ಬಂಧವಿದು”

 
 
bubble-playಆವಳ ಮಡಿಲಲ್ಲಿ….ಅವನು  ಮಲಗಿದ್ದ ಮಗುವಿನ ಹಾಗೆ….ಅವಳ  ಕೈಯನ್ನು   ಗಟ್ಟಿಯಾಗಿ  ಹೇಗೆ  ಅದುಮಿಡಿದಿದ್ದನೆಂದರೆ  ಆ ಹಿಡಿತದಲ್ಲಿ  ಮಮತೆ ಮತ್ತು ನಂಬಿಕೆ  ಒಟ್ಟಿಗಿರುವ   ಆ ಹಸ್ತದಲ್ಲಿ ಇವನ  ಸಂಪೂರ್ಣ  ಭಾರವಿತ್ತು…ಮಗುವೇ  ತಾಯಿಯ  ಮಮತೆಯ  ಅಲೆಯಲ್ಲಿ ತೇಲಿದಂತೆ….
 
 
           ಅವನ  ಉಸಿರು  ನಿದಾನವಾಗಿ  ಕ್ಷೀಣವಾಗುತ್ತಿತ್ತು……ನೋಟದಲ್ಲಿ   ಅಪರಾಧಿ ಮನೋಭಾವನೆ  ತುಂಬಿತ್ತು….ಇವಳಿಗೂ  ಆಷ್ಟೇ  ಅವನ ಸ್ಥಿತಿಯನ್ನು  ಕಂಡು  ಎದೆ ಉಮ್ಮಳಿಸಿ ಬಂದಂತಾದರೂ   ಕಷ್ಟಪಟ್ಟು  ತಡೆದುಕೊಳ್ಳುತ್ತಿದ್ದಳು…..
 
 
           ಎಂಥ  ಗೆಳೆಯನಾಗಿದ್ದ……ಸ್ನೇಹವೆಂದರೇ  ಇವನೇನಾ……..ಆಗ  ನಾವಿಬ್ಬರೂ   ಹಂಚಿಕೊಂಡ  ವಿಚಾರಗಳೆಷ್ಟು….ಒಟ್ಟುಗೂಡಿ  ಅನುಭವಿಸಿದ  ಪರಿಶುದ್ಧ  ಸ್ನೇಹದ  ತನ್ಮಯತೆಯನ್ನು  ಮರೆಯಲು ಸಾಧ್ಯವೇ….. ಇಬ್ಬರೂ ಕಷ್ಟಪಟ್ಟು  ಮೇಲೆ ಬಂದವರು…..ಈಗ  ನೋಡಿದರೆ   ಸಾಯುವ ಸ್ಥಿತಿಯಲ್ಲಿ  ಹೀಗೆ  ನನ್ನ  ಮಡಿಲಲ್ಲಿ  ಮಲಗಿದ್ದಾನೆ….
 
 
             ಇಷ್ಟಕ್ಕೂ….ನಾವಿಬ್ಬರೂ  ಗೆಳೆಯರಾಗಿದ್ದೆ……ಒಂದು  ಆಕಸ್ಮಿಕ………………………………………………………………………………………………………………………………………………. 
 
ಒಂದು ಸಣ್ಣ ಕುಟುಂಬ ಇರೋದು ನಾಲಕ್ಕು ಜನ.  ತುಂಬಾ ಸಂತೋಷದಿಂದ ಜೀವನ ನಡೆಸುತಿದ್ದ ಕುಟುಂಬ. ಕೆಲಸಕ್ಕೆ ಹೋಗೋ ತಂದೆ ತಾಯಿ ಶಾಲೆಗೆ ಹೋಗೋ ಪುಟಾಣಿ ಇಬ್ಬರು ಮಕ್ಕಳು.
 
ಈ ಮಕ್ಕಳನ್ನ ಸ್ನಾನ ಮಾಡಿಸೋದು. ಅವರ ಶಾಲೆ ಕೆಲಸ ಮಡಿಸೋದೆಲ್ಲಾ ತಂದೆಯ ಕೆಲಸ. ತಾಯಿಗೆ ಮಕ್ಕಳ ಜೊತೆ ಗಂಡನನ್ನು ನೋಡಿಕೋಳ್ಳೋ ಕೆಲಸ. ಈ ಎಲ್ಲಾ ಕೆಲಸ ಮುಗಿಸಿ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡೋದು ಇವರಿಬ್ಬರ ಕೆಲಸ.
 

ಹೀಗೆ ಸುಖವಾಗಿ ನಡೆಯುತಿದ್ದ ಸಂಸಾರಕ್ಕೆ ಯಾರ ಕೆಟ್ಟ ಕಣ್ಣು ಬಿತ್ತೋ ಸಂಸಾರಕ್ಕೆ ಮೊದಲ ಆಘಾತ ಯಜಮಾನನ ಸಾವು. ಆಘಾತವನ್ನು ಎದುರಿಸಲು ಸಂಸಾರ ಸಿದ್ದವಾಗಿರಲಿಲ್ಲ.

 

ಒಂದು ದಿನ ಯಜಮಾನಿ ಇನ್ನು ಬದುಕುವುದರಲ್ಲಿ ಅರ್ಥ ಇಲ್ಲ ನಾವು ಅನಾಥರದೆವು ಎಂದು ತಾನು ಮಕ್ಕಳು ಅತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದಳು.

 

ವಿಷಯ ಹೇಗೋ ಕುಟುಂಬದ ಸ್ನೇಹಿತ ಅನ್ನೋ ಅವಕಾಶವಾದಿಗೆ ಗೊತ್ತಾಯಿತು . ಈತ ಸಮಯನ ಚೆನ್ನಾಗಿ ಉಪಯೋಗಿಸಬೇಕು ಎಂದು ಯೋಚನೆ ಮಾಡಿ ಇವರು ಆತ್ಮಹತ್ಯೆ ಮಾಡದಂತೆ ತನ್ನ ಮಾತಿನಲ್ಲೇ ಕಟ್ಟಿ ಹಾಕಿದ .

 

ಪಾಪ ಕುಟುಂಬಕ್ಕೂ ಈಗ ಸಮಾಧಾನ ಮಾಡೋರು ಬೇಕಾಗಿತ್ತು . ಅದನ್ನ ಅರಿತು ವ್ಯಕ್ತಿ ಹಾಗೆ ನಡೆದುಕೊಂಡು ಕುಟುಂಬದ ನಂಬಿಕೆಯನ್ನ ಸಂಪಾದಿಸಿದ . ಸಮಯದಲ್ಲಿ ಕುಟುಂಬಕ್ಕೆ ನಾವು ಒಬ್ಬ ನರಭಕ್ಷಕನ ಕೈಅಳು ಆಗುತ್ತೇವೆ ಎಂದು ಸ್ವಲ್ಪನೂ ಸಂಶಯ ಬಂದಿರಲಿಲ್ಲ .

 

ಹೀಗೆ ವರುಷಗಳು ಉರುಳಿದವು ಈತನು ಕುಟುಂಬದಲ್ಲಿ ಒಬ್ಬನಾದ ತನ್ನ ಸ್ವಾರ್ಥಕ್ಕೋಸ್ಕರ ಕುಟುಂಬಕ್ಕೆ ಸಹಾಯಮಾಡುತ್ತ ಬಂದ .

 

ಮಕ್ಕಳು ಬೆಳೆದು ದೊಡ್ಡವರಾದರುಹುಡುಗಿಗೆ ಈತನ ಮಾತೆಂದರೆ ದೇವರ ವಾಕ್ಯ . ಹುಡುಗನಿಗೆ ಈತ ದೇವರೇ ಆಗಿದ್ದ

 

ಯಾಕೆಂದರೆ ಸಾಯೋ ಪರಿಸ್ಥಿತಿಯಲಿ ಬದುಕಿಸಿದವನು ಈತ ಅನ್ನೋ ಮಮಕಾರ .ಮಕ್ಕಳು ಬೆಳೆದಂತೆ ಅವರ ಮನಸ್ಸು ಬೆಳೆದಿತ್ತು ಹಾಗೆ ಯೋಚನೆ ಮಾಡೋ ಶಕ್ತಿನೂ ಬೆಳೆದಿತ್ತು .

 

ಬರು ಬರುತ್ತಾ ಹುಡುಗಿಗೆತನನ್ನು ನೋಡಿದರೆ ಮನಸೆಲ್ಲಾ ನೀರಿನಿಂದ ಹೋರ ಬಂದ ಮೀನಿನಂತೆ ವಿಲ ವಿಲ ಒದ್ದಾಡುತಿತ್ತು.  ಇದಕ್ಕೂ ಒಂದು ಕಾರಣ ಇತ್ತು .

 

ಒಂದು ದಿನ ಮನೆಯಲಿ ಯಾರು ಇಲ್ಲದ ಸಮಯದಲ್ಲಿ ಈತ ಇವಳಲ್ಲಿ ಮಾತನಾಡಿದ ರೀತಿ ಹಾಗಿತ್ತು. ವ್ಯಕ್ತಿಗೆ ಮೂರುಜನ ಮಕ್ಕಳು ಇವರಲ್ಲಿ ದೊಡ್ಡ ಮಗ ಹುಡುಗಿನ ಇಷ್ಟ ಪಟ್ಟಿದ್ದ .ಹುಡುಗಿಗೂ ತಿಳಿಸಿದ್ದ.

 

ಆದರೆ ಹುಡುಗಿಗೆ ಇಷ್ಟ ಇದ್ದರೂ ತಾಯಿ ಮತ್ತು ಮಾವಂದಿರ ಭಯ . ಹಾಗಾಗಿ ಹುಡುಗಿ ಏನು ಉತ್ತರ ಕೊಡೋದು ಅಂತ ಗೊತ್ತಾಗದೆ ಹುಡುಗನ ತಂದೆಯಲ್ಲಿ( ವ್ಯಕ್ತಿ) ಹೇಳುತ್ತಾಳೆ.

 

ಆಗ ಸಮಯದಲ್ಲಿ ಹುಡುಗಿ ಯೋಚನೇನು ಮಾಡದ ರೀತಿ ವ್ಯಕ್ತಿ ಮಾತನಾಡುತ್ತಾನೆ. ಅವನು ಹುಡುಗ ಅವನ ಪ್ರಾಯನೇ ಅಂತದ್ದು ನೀನೆ ಸಹಕರಿಸು ಅಂತಾನೆ.

 

ನಿಮ್ಮ ಮದುವೆ ನಾನೇ ಮಾಡಿಸ್ತೀನಿ. ನಿನ್ನ ಅಮ್ಮನಲ್ಲಿ ಮಾವನಲ್ಲಿ ನಾನೇ ಮಾತಾಡ್ತೀನಿ. ಮಾತು ಆತನ ಬಾಯಿಂದ ಹೊರಬಿಳೋ ಅಷ್ಟರಲಿ ಹುಡುಗಿಗೆ ಅವನ ಮೇಲಿರುವ ಅಭಿಮಾನ ಇನ್ನು ಜಾಸ್ತಿಯಾಗುತ್ತೆ .

 

ಪಾಪ ಈಕೆಗೆನು ಗೊತ್ತು ಈತ ನಯವಂಚಕನೆಂದು! ಈತನ ಮಾತು ಕೇಳಿ ಹುಡುಗನನ್ನು  ಪ್ರೀತಿಸಲು ಪ್ರಾರಂಭಿಸಿದಳು .

 

 

 ಹೀಗೆ ಒಂದು ದಿನ ಮಾತಾಡುತ್ತ ತನ್ನ ಮಗನ ಮತ್ತು ಹುಡುಗಿಯ ಪ್ರೀತಿ ಬಗ್ಗೆ ವಿಚಾರಿಸಿದ . ಹುಡುಗಿ ಆತ ನನಗೂ ಇಷ್ಟ ಆದರೆ ನಮ್ಮ ಮನೆಯವರ ಮಾನ ಮರ್ಯಾದೆ ಹಾಳು ಮಾಡಲು ಇಷ್ಟ ವಿಲ್ಲ ಅಂದಳು .

 

ಈತ ಮಾತನ್ನು ಹೇಳೋದೇ ಕಾಯುತಿದ್ದ . ಕೂಡಲೇ ಆತ ನಾನು ಒಪ್ಪಿಸುತ್ತೇನೆ ನಾನೆ ನಿಂತು ನಿಮ್ಮ ಮದುವೆ ಮಾಡುತ್ತೀನಿ ಅಂತಾನೆ ಆದರೆ ನಾನೊಂದು ಮಾತು ಹೇಳ್ತೀನಿ ಅದರಂತೆ ನೀನು ನಡೆದು ಕೊಳ್ಳ ಬೇಕು ಅನ್ನೋ ಕೆಟ್ಟ ಬೇಡಿಕೆನ ಅವಳ ಮುಂದೆ ಇಡುತ್ತಾನೆ.

 

ಇವಳಿಗೆ ಆತನ ಮಾತಿನ ಓಳ ಮರ್ಮದ ಅರಿವಿಲ್ಲದೆ ಸರಿ ಅನ್ನುತಾಳೆ .

 

ಹೀಗೆ ಸ್ವಲ್ಪ ದಿನಗಳಲ್ಲಿ ಹುಡುಗಿ ಮತ್ತೆ ಒಂಟಿಯಾಗಿ ಸಿಕ್ಕಿದಳು . ಆವತ್ತು ಆತ ನೋಡೋ ರೀತಿ ಮಾತನಾಡೋ ಶೈಲಿಯಲ್ಲಿ ಏನೋ ವ್ಯತ್ಯಾಸ ಕಂಡಳು. ಅವನು ಅಂದ ಮಾತು ಹೀಗಿತ್ತು.

 

“ನಿನ್ನನ್ನು ನಾನು ನನ್ನ ಸೊಸೆ ಯಾಗಿ ನನ್ನ ಮನೆ ತುಂಬಿಸಿ ಕೊಳ್ಳುತ್ತೇನೆ. ಆದರೆ ನೀನು ನನ್ನ ಮಾತು ಕೇಳಬೇಕು ನಾನು ಹೇಳಿದ ಹಾಗೆ ಕೇಳಬೇಕು ನನ್ನ ಬಯಕೆ ತೀರಿಸ ಬೇಕು.”

 

 ಅವನ ಬಾಯಿಂದ ಬಂದ ಮಾತಿಂದ ಆತನ ವ್ಯಕ್ತಿತ್ವ ಸಾಬೀತಾಯಿತು. ಹುಡುಗಿಗೆ ಏನು ಹೇಳುವುದು ಎಂದು ಗೊತ್ತಾಗದೆ ಅಲ್ಲೇ ಕುಸಿದು ಕುಳಿತಳು .

 

ಯೋಚನೆ ಮಾಡಿ ಹೇಳು ಈಗ ನಾನು ಹೇಳಿದ ಮಾತು ಕೇಳಿದರೆ ನಿನ್ನ ಇಷ್ಟದಂತೆ ನಿನ್ನ ಮದುವೆನ ನನ್ನ ಮಗನ ಜೊತೆ ಮಾಡ್ತೀನಿ ಅಂತ ಹೇಳಿ ಹೊರಡುತ್ತಾನೆ.

 

ಎಳೆ ಮನಸ್ಸು ಸಮಾಧಾನ ಮಾಡಿ ಕೊಳ್ಳೋದಿಕ್ಕೆ ತುಂಬಾನೇ ಸಮಯ ತೆಗೆದುಕೊಳ್ಳುತ್ತೆ. ಅನಂತರ ಒಂದು ನಿರ್ಧಾರಕ್ಕೆ ಬರುತ್ತಾಳೆ.

 

ಒಂದು ವಾರ ಯೋಚನೆ ಮಾಡಿ ಅವನಲ್ಲಿ ನಾನು ನಿನ್ನ ಮಗಳಿಗಿಂತ ಇನ್ನೂ ಚಿಕ್ಕವಳು ನೀವು ನನ್ನ ದೃಷ್ಟಿಲಿ ನೊಡುತ್ತೀರಾ ಅಂತ ಅಂದುಕೊಂಡಿರಲಿಲ್ಲ. ದಯವಿಟ್ಟು ನನ್ನ ಜೀವನನ ಅದರ ಪಾಡಿಗೆ ಬಿಟ್ಟು ಬಿಡಿ. ಇನ್ನು ಯಾವತ್ತೂ ನನ್ನಲ್ಲಿ ವಿಷಯ ಮಾತಡಬೇಡಿ. ಇನ್ನು ನಾನು ಯಾವತ್ತು ನಿಮ್ಮ ಮತ್ತು ನಿಮ್ಮ ಮನೆಯವರ ವಿಷಯಕ್ಕೆ ಬರೋದಿಲ್ಲ. ಅಂತ ಹೇಳಿದಳು.

 

 ಇಂತಹ ಮಾತು ಇವನಂತಹ ವ್ಯಕಿಗಳಿಗೆ ಅರ್ಥ ಅಗಬೇಕಲ್ವ. ಎಳೆ ಬಾಲೆಯ ಮಾತುಗಳು ಈತನ ಮನಸ್ಸಿಗೆ ಮುಟ್ಟಲೇಯಿಲ್ಲ.ಈತನಿಂದ ಮತ್ತೂ ತೊಂದರೆ ಕಡಿಮೆ ಆಗಲೇ ಇಲ್ಲ. ಈತನ ವರ್ತನೆಯಿಂದ ಹುಡುಗಿ ಹುಡುಗರನ್ನು ದ್ವೇಷಿಸಲು ಪ್ರಾರಂಭಿಸಿದಳು

 

ಮನೆಯಿಂದ ಹೊರಗಡೆ ಮತ್ತು ಒಳಗಡೆ ಒಬ್ಬಳೇ ಇರಲು ಭಯ ಪಡುತ್ತಿದ್ದಳು . ಇದನ್ನು ಗಮನಿಸಿದ ಈಕೆಯ ಮಾವ (ತಾಯಿಯ ತಮ್ಮ) ಒಂದು ವಿಷಯ ಇವಳ ಮುಂದೆ ಇಡಲು ಬಯಸುತ್ತಾರೆಇದರ ಬಗ್ಗೆ ಈಕೆಯ ತಾಯಿಯಲ್ಲೂ ಮಾತಾನಾಡಿ ಒಪ್ಪಿಸುತ್ತಾರೆ.

 

ಹುಡುಗಿಗೆ ಮಕ್ಕಳು ಅಂದರೆ ತುಂಭಾ ಪ್ರೀತಿ. ವಿಷಯ ತಿಳಿದ ಹುಡುಗಿಯ ಮಾವ ಈಕೆನ ಒಂದು ಸಣ್ಣ ಮಕ್ಕಳ ಆಟ ಆಡುವ ಶಾಲೆಗೆ ಸಹಾಯಕಿಯಾಗಿ ಕೆಲಸಕ್ಕೆ ಸೇರಿಸುತ್ತಾರೆ. ಇದರಿಂದ ಹುಡುಗಿಯ ಮನಸ್ಸಿಗೂ ನೆಮ್ಮದಿಯಾಯಿತು.

 

ಹೀಗೆ ವರುಷಗಳು ಕಳೆದವು. ಹುಡುಗಿಯು ತನ್ನ ಜೀವನದಲ್ಲಿ ನಡೆದ ಕೆಟ್ಟ ಘಟನೆನ ಮರೆಯುತ್ತಾ ಬಂದಳು. ಅಷ್ಟರಲ್ಲಿ ಅವರ ಕಿರುಕುಳನು ಕಡಿಮೆಯಾಗಿತ್ತು. ಆದರೆ ಹುಡುಗಿಗೆ ಪುರುಷರ ಬಗ್ಗೆ ಇದ್ದ ದ್ವೇಷ ಮಾತ್ರ ಕಡಿಮೆಯಾಗಿರಲಿಲ್ಲ. ಇನ್ನು ತನ್ನ ವಿದ್ಯಾಬ್ಯಾಸ ಮುಂದುವರಿಸಬೇಕು ಎಂದು ನಿರ್ಧರಿಸಿ ಅಲ್ಲಿಂದ ಕೆಲಸ ಬಿಟ್ಟು ಕಲಿಕೆಯ ಕಡೆಗೆ ಗಮನ ಹರಿಸುತ್ತಾಳೆ.

 

ತಾನು ಕಲಿಯುವ ವಾತವರಣದಲ್ಲಿ ಎಲ್ಲರ ಜೊತೆ ಬೆರೆಯಲು ಮನಸ್ಸು ಒಪ್ಪುವುದಿಲ್ಲ. ಹೀಗೆ ತಾನಯಿತು ತನ್ನ ಓದಾಯಿತು ಅಂತ ಇರುವ ಹುಡುಗಿಯ ಸ್ನೇಹ ಪಡೆಯಲು ಒಬ್ಬ ಹಾತೊರೆಯುತ್ತಾನೆ. ಅಂತೂ ಕೊನೆಗೆ ಆಕೆಯ ಸ್ನೇಹನ ಪಡೆಯುತ್ತಾನೆ. ಒಳ್ಳೆಯ ಸ್ನೇಹಿತರಾಗುತ್ತಾರೆ.

 

ಇವರ ಸ್ನೇಹ ಎಷ್ಟು ಬೆಳೆದಿತ್ತು ಎಂದರೆ ಇಬ್ಬರ ನಡುವೆ ಯಾವುದೇ ಮುಚ್ಚು ಮರೆ ಇರಲಿಲ್ಲ . ಹುಡುಗಿಗೆ ಪರುಷರಲ್ಲಿ ಇದ್ದ ಭಯ ಕೋಪ ಎಲ್ಲ ಈತನಿಂದ ನಾಶವಾಯಿತು.

 

ಓದು ಮುಗಿಯಿತು ಹುಡುಗನಿಗೆ ದೂರದ ಊರಲ್ಲಿ ಕೆಲಸ ಸಿಕ್ಕಿತು.ಹುಡುಗಿಗೆ ಇದೆ ಊರಲ್ಲಿ ಕೆಲಸ ದೊರಕಿತು. ದಿನಾಲೂ ಅವನಿಂದನು ಫೋನ್ ಬರುತಿತ್ತು ಇವಳು ಮಾಡುತ್ತಿದಳು . ಹೀಗೆ ಬರುಬರುತ್ತಾ ಆತನ ಕಡೆಯಿಂದ ಫೋನ್ ಬರುವುದು ಕಡಿಮೆಯಾಯಿತು. ಇಲ್ಲಿಂದ ಈಕೆ ಫೋನ್  ಮಾಡುತ್ತಿದ್ದಳು. ಕೊನೆಗೆ ಆತ ಹೇಳಿಬಿಟ್ಟ ಫೋನ್ ಮಾಡಿ ನನಗೆ ತೊಂದರೆ ಕೊಡಬೇಡ.

 

ಸ್ನೇಹಾನ ನಂಬಿದ್ದ ತನ್ನ ಕಷ್ಟವೆಲ್ಲಾ ಹೇಳಿಕೊಳ್ಳುತ್ತಿದ್ದ ಸ್ನೇಹಿತನೇ ಹೀಗೆ ಹೇಳಿದರೆ ಈಕೆಯ ಮನಸ್ಸು ಹೇಗಾಗಿರಬೇಡ ಆದರು ಈಕೆಗೆ ಆತ ಹೀಗೆ ಹೇಳಿದನ್ನು ನಂಬಲಾಗುತ್ತಿಲ್ಲ. ಏನೋ ತೊಂದರೆ ಆಗಿರಬೇಕು ಅಂತ ಒಂದು ಮೇಲ್ ಕಳಿಸಿದಳು.

 

ಅದರಲ್ಲಿ ಹೀಗೆ ಬರೆದಿತ್ತು . ಸ್ನೇಹವೇ ಏನಾಗಿದೆ ನಿನಗೆ ನನ್ನ ಮನಸ್ಸು ಹೇಳ್ತಿದೆ ನೀನು ತೊಂದರೆಯಲ್ಲಿಯಿದ್ದಿಯಾಂತ. ತಿಳಿಸು ನನ್ನಿಂದ ಆಗಬಹುದಾದ ಸಹಾಯ ಮಾಡುವೆ .ಅಥವಾ ನನ್ನಿಂದ ಏನಾದರೂ ತೊಂದರೆ ಆಗಿದ್ದರೆ ಹೇಳು ಇನ್ನುಏನು ಹೇಳಲ್ಲ . ಆದರೆ ನನ್ನ ಸ್ನೇಹಾನ ಮಾತ್ರ ಮರೆಯಬೇಡ. ನನ್ನ ಸ್ನೇಹ ಯಾವಾಗಲು ನಿನ್ನ ನೆನಪ್ಪಿಟ್ಟು ಕೊಳ್ಳುತ್ತೆ. ಹಾಗು ನಿನ್ನ ಸಾಂತ್ವನಕ್ಕೊಸ್ಕರ ಕಾಯುತ್ತಿರುತ್ತೆ .

 

ಆತನಿಂದ ಉತ್ತರನೂ ಬರಲಿಲ್ಲ. ಫೋನೂ ಇಲ್ಲ ಇನ್ನು ನನ್ನಿಂದ ಆತನಿಗೆ ತೊಂದರೆಯಾಗಬಾರದು ಎಂದು ನಿರ್ಧರಿಸಿ ತನ್ನ ಪಾಡಿಗೆ ತಾನು ಇರಲು ನಿರ್ಧರಿಸಿದಳು.

 

ಹೀಗೆ ಒಂದು ದಿನ ಇದ್ದಕ್ಕಿದಂತೆ ಆತನಿಂದ ಒಂದು ಸಂದೇಶ ಬಂತು

 

ದಯವಿಟ್ಟು ನನಗೆ ಸಹಾಯ ಮಾಡು ನನಗೆ ತುರ್ತಾಗಿ ಸ್ವಲ್ಪ ಹಣದ ಅವಶ್ಯಕತೆ ಇದೆ. ಎಲ್ಲಿಯೂ ಸಿಗಲಿಲ್ಲ ಕೊನೆಗೆ ನಿನ್ನಲಿ ಕೇಳುತ್ತಿದ್ದೇನೆ ನನಗೆ ಸಂಜೆಯೊಳಗೆ 5000 ರೂಪಯಿ ಕಳುಹಿಸಿಕೊಡು ನಮ್ಮ ಸ್ನೇಹಾನ ದುರುಪಯೋಗ ಮಾಡುತ್ತಿದ್ದೇನೆ ಅಂತ ತಿಳ್ಕೋಬೇಡ. ಹಣ ಯಾಕೆ ಏನು ಅಂತ ಕೇಳಬೇಡ ಸಮಯ ಬಂದಾಗ ನಾನೇ ಹೇಳುತ್ತೇನೆ . ದಯವಿಟ್ಟು ಸಹಾಯ ಮಾಡು.

 

ಹುಡುಗಿಗೆ ಗಾಬರಿಯಾಯಿತು ಕರೆ ಮಾಡಿದಳು ಆದರೆ ಆತ ಸ್ವಿಚ್ ಒಫ್ಫ್ ಮಾಡಿದ್ದ. ಹೆದರಿಕೆಯಾಯಿತು ಮತ್ತೆ ಹೇಗೋ ಹೊಂದಿಸಿ ಹಣ ಕಳುಹಿಸಿದಳು.

 

ಮತ್ತೆ ಬಂತು ಸಂದೇಶ ಧನ್ಯವಾದಗಳು ನೀನಿನ್ನು ನಮ್ಮ ಸ್ನೇಹಾನ ಮರೆತಿಲ್ಲ ಅಲ್ವಾ ಆದರೆ ನಾನು?

 

ಅಯ್ಯೋ ಏನಾಗಿದೆ ಇವನಿಗೆ ಯಾಕೆ ರೀತಿ ಸಂದೇಶ ಕಳುಹಿಸುತ್ತಿದ್ದಾನೆ ಇರಲಿ ಕಾಯುತ್ತೇನೆ ನನ್ನ ಸ್ನೇಹ ನನಗೆ ಮೋಸ ಮಾಡೋದಿಲ್ಲ.

 

ಹೀಗೆ 3 ತಿಂಗಳುಗಳು ಕಳೆದಾಗ ಇನ್ನೊಂದು ಸಂದೇಶ.

     ನಿನ್ನ ಕೊನೆ ಬಾರಿ ನೋಡಬೇಕು ನಿನ್ನ ಮಡಿಲಲ್ಲಿ ಮಲಗಬೇಕು ನಿನ್ನ ಕೈಯಿಂದ ನನಗಿಷ್ಟವಾದುದ್ದನ್ನು ತಿನ್ನಬೇಕು. ತುಂಬಾ ಆಸೆಯಿಂದ ಕೇಳಿಕೊಳ್ಳುತ್ತಾಇದ್ದೀನಿ ನನಗೇನಿಷ್ಟ ಅಂತ ನಿನಗೆ ಗೊತ್ತು . ನಿನ್ನ ಬರುವಿಕೆಗೊಸ್ಕರ ಉಸಿರು ಬಿಗಿ ಹಿಡಿದು ಕಾಯುತ್ತಿರುತ್ತೇನೆ ಬೇಗ ನಮ್ಮ ಮನೆಗೆ ಬಂದು ಬಿಡು ಆದಷ್ಟು ಬೇಗ .

 

ಇದನ್ನು ಓದಿದ ಹುಡುಗಿಗೆ ಆದ ಸಂತೋಷ ಅಷ್ಟಿಷ್ಟಲ್ಲ . ನನಗೆ ಒಂದು ಸುಳಿವು ಕೊಡದೆ ಊರಿಗೆ ಬಂದಿದ್ದೀಯಲ್ಲ ಇರು ಈಗ ಹೊರಡುತ್ತೇನೆ ಆಗಲೇ ನೆನಪಾಯಿತು ಆತನಿಗೆ ನಾನು ಮಾಡಿದ ಪಾಯಸ ತುಂಬಾ ಇಷ್ಟ ಅಂತ . ಕೂಡಲೇ ಪಾಯಸ ಮಾಡಿ ಬಾಕ್ಸ್ ನಲ್ಲಿ ತುಂಬಿಸಿ ತಾಯಿಯೊಂದಿಗೆ ಹೊರಟಳು. ಬೇಗ ತಲುಪಬೇಕು ಅಂತ ಆಟೋ ಮಾಡಿ ಹೊರಟಳು .

 

ಆಗ ಇನ್ನೊದು ಸಂದೇಶಆದಷ್ಟು ಬೇಗ ಬನ್ನಿ” ಇದನ್ನ ನೋಡಿದ ಹುಡುಗಿಗೆ ಆಶ್ಚರ್ಯ ಇವನ್ಯಾಕೆಬನ್ನಿ” ಅಂತಾನೆ ? ಬಾ ಅನ್ಬೇಕಿತಲ್ವಾ ಅಂತ ಯೋಚಿಸ್ಕೊಂಡು ಆತನ ಮನೆ ಹತ್ತಿರ ಬಂದೇ ಬಿಟ್ಟರು . ಹುಡುಗಿಗೆ ಆಗ ಅರಿವಾಯಿತು ಅಲ್ಲಿಯ ಪರಿಸ್ಥಿತಿ !

 

ಆಟೋ ಇಳಿಯುತ್ತಿದ್ದಂತೆ ಹುಡುಗಿಯ ಜೊತೆ ಓದುತಿದ್ದವರಲ್ಲಿ 3 ಜನ ಹುಡುಗರು ಬಂದು ಬೇಗ ಬಾ ಎಂದು ಆಕೆನ ಎಳೆದುಕೊಂಡೇ ಹೊರಟರು ಮನೆ ತುಂಬಾ ಜನ ಹಾಗೂ ಗುಸು ಗುಸು ಮಾತು.

 

ಮನೆ ಒಳಗಡೆ ಕಾಲು ಇಡುತ್ತಿದ್ದಂತೆ ಎದೆ ಬಡಿತ ಯಾಕೋ ಹೆಚ್ಚಾಗಿತ್ತು ಕೈ ಕಾಲು ನಡುಗುತ್ತಿತ್ತು . ಇನ್ನು ನಡೆಯಲು ಆಗದು ಅನ್ನೋ ಮನಸ್ಥಿತಿ ಅಲ್ಲೇ ಕುಳಿತು ಬಿಡಲೇನೋ ಅನ್ನೋ ಅನಿಸಿಕೆ.

 

 ಹೀಗೆ ಮನೆ ಒಳಗಡೆ ಕಾಲಿಟ್ಟವಳು ಮಂಚದಲ್ಲಿ ಮಲಗಿದ್ದ ತನ್ನ ಸ್ನೇಹಿತನ ಕಂಡು ಅಲ್ಲೇ ಕುಸಿದಳು. ಮತ್ತೆ ಚೇತರಿಸಿ ಕೊಂಡವಳಿಗೆಆತನನ್ನು ನೋಡಲಾಗಲಿಲ್ಲ ಹೇಗಿದ್ದವನು ಈಗ ಹೀಗೆ ಲೋಕದ ನೆನಪೇ ಇಲ್ಲದಂತೆ ಮಲಗಿದ್ದಾನೆ ಕಣ್ಣು ಮುಚ್ಚಿ ಮಲಗಿದ್ದಾನೆ.

 

 ಹತ್ತಿರ ಬಂದು ನೋಡಿದವಳಿಗೆ ಆತನ ಮುಖ ನೋಡಲಾಗಲಿಲ್ಲ ಹೊರಗೆ ಓಡಿಬರಬೇಕೆಂದು ಕೊಂಡಳು.

 

 ಅಲ್ಲಿಂದ ಹೊರಡಬೇಕೆಂದು ಅಂದುಕೊಳ್ಳುವಷ್ಟರಲ್ಲಿ ಆತ ಆಕೆಯ ದುಪ್ಪಟ್ಟನ ಹಿಡಿದ್ದಿದ್ದ ತಿರುಗಿ ನೋಡಿದವಳಿಗೆ ಆಳು ನುಂಗಲಾಗಲಿಲ್ಲ . ಕಣ್ಣಂಚ್ಚಿಂದ ಕಣ್ಣಹನಿ ಜಾರಿತ್ತು.

 

ಎಷ್ಟು ನಿಶ್ಯಕ್ತನಾಗಿದ್ದ ಎಂದರೆ ಮಾತನಾಡಲು ಆಗುತ್ತಿರಲಿಲ್ಲ ಬಾ ಎಂದು ಸನ್ನೆ ಮಾಡಿ ಕುಳಿತು ಕೊಳ್ಳಲು ಹೇಳಿದ. ಈಕೆ ಆತನ ತಲೆಯನ್ನೆತ್ತಿ ತನ್ನ ಮಡಿಲಲ್ಲಿ ಮಲಗಿಸಿದಳು.

 

ಸಮಯದಲ್ಲಿ ಆತನ ಮುಖದಲ್ಲಿ ಸಂತೋಷದ ಅಲೆಯೊಂದು ಬಂದು ಹಾಗೆ ಮರೆಯಾಯಿತು.

 

 ತಾನು ತಂದಿದ್ದ ಪಾಯಸವನ್ನು ಸ್ವಲ್ಪ ಸ್ವಲ್ಪವೇ ತಿನ್ನಿಸಿದಳು. ತುಂಬಾ ಕಷ್ಟದಲ್ಲಿ ತಿನ್ನುತಿದ್ದ ಮಧ್ಯ ಮಧ್ಯ ಆಕೆಯ ಕೈಯನ್ನು ತನ್ನ ಎದೆಗಂಟುವಂತೆ ಗಟ್ಟಿಯಾಗಿ ಹಿಡಿಯುತ್ತಿದ್ದ.

 

ಹಾಗೆ ತನ್ನ ತಂಗಿಯ ಕಡೆ ತಿರುಗಿ ಏನೋ ಸನ್ನೆ ಮಾಡಿದ ಆಗ ಆಕೆ ಒಂದು ಪತ್ರ ತಂದುಕೊಟ್ಟಳು. ಅದನ್ನ ಸ್ನೇಹಿತೆಯ ಕೈಗಿತ್ತು ನಾನು ಹೋಗುತ್ತಿದ್ದೇನೆ. ಇನ್ನು ನಿನ್ನ ಮಗನಾಗಿ ಹುಟ್ಟಿ ಬರಲು ಅವಕಾಶ ನೀಡುವೆಯಾ ಎಂದು ಕೇಳುತ್ತಾನೆ.

 

ಸಮಯದಲ್ಲಿ ಆಕೆ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಬಿಸಿದಳು. ಅಲ್ಲಿ ಇದ್ದವರೆಲ್ಲರ ಕಣ್ಣು ಒದ್ದೆಯಾಯಿತು.

 

ಪತ್ರ ಓದು ಎಂದು ಸನ್ನೆ ಮಾಡಿದ  ಪತ್ರದಲ್ಲಿ  ಹೀಗೆ ಬರೆದಿತ್ತು

 

 

 

ಪ್ರಿಯ ಗೆಳತಿ ,

ಬದುಕಿನಲ್ಲಿ ನಾನು ಪಡೆದ ಭಾಗ್ಯಗಳಲ್ಲಿ ದೊಡ್ಡದು ನಿನ್ನ ಸ್ನೇಹ. ನಿನ್ನ ನೋಡಿದ ಮೊದಲನೇ ದಿನನೇ ಹೃದಯ ಮನಸ್ಸನ್ನು ತಟ್ಟಿ ಹೇಳಿತು ಈಕೆ ನಿನ್ನ ಗೆಳತಿ. ಆದರೆ ನಾನು ಕೆಲಸದ ವಿಚಾರವಾಗಿ ದೂರ ಹೋಗಬೇಕಾಗಿ ಬಂತು .

 

ಆವತ್ತೇ ಶುರುವಾಯಿತು ನೋಡು ನನಗೆ ಗ್ರಹಚಾರ . ಹೋದ ಎರಡೇದಿನಗಳಲ್ಲಿ ಒಬ್ಬ ಹುಡುಗಿಯ ಪರಿಚಯವಾಯಿತು. ಪರಿಚಯನೇ ಸ್ನೇಹ ಪ್ರೀತಿಗೆ ಬದಲಾವಣೆ ಯಾಯಿತು. ತುಂಬಾನೇ ಪೀತಿ ಮಾಡ್ತಿದ್ದೆ ಅವಳ್ನ. ಅವಳು ಅಷ್ಟೇ ಪ್ರೀತಿ ಮಾಡ್ತಾ ಇದ್ಲು ಅಂತ ನಂಬಿದ್ದೆ.

   

ಆದರೆ ಆಕೆ ಮೋಸ ಮಾಡಿ ಬಿಟ್ಲು ನನ್ನ ಒಳ್ಳೆತನನ ದುರುಪಯೋಗ ಮಾಡಿ ಬಿಟ್ಲು. ಅವಳು ಅಸೆ ಪಟ್ಟಳು ಅಂತ ನರ್ಸಿಂಗ್ ಕಲಿಯೋದಿಕ್ಕೆ ಸಹಾಯ ಮಾಡಿದೆ. ಎರಡು ವರುಷ ನಾನೇ ಖರ್ಚು ಮಾಡಿ ಕಳಿಸಿದೆ. ಈಗ ಮೂರನೆ ವರುಷದ ಕಲಿಕೆ ನಡೆಯುತಿದೆ.

    

ಈಗ ನಾನು ಅವಳಿಗೆ ಬೇಡವಾದೆ ಯಾರೋ ಇನ್ನೊಬ್ಬ ಸಿಕ್ಕಿದ್ದಾನೆ ಅವನು ನನ್ನ ದುಬೈ ಗೆ ಕರೆದು ಕೊಂಡು ಹೋಗ್ತಾನಂತೆ ಅದಕ್ಕಾಗಿ ನಾನು ಅವನ ಜೊತೆ ಅಲ್ಲಿ ಹೋಗ್ತೀನಿ ಅವನನ್ನೇ ಮದುವೆ ಆಗುತ್ತೀನಿ ಅಂತ ಹೇಳಿ ಹೋದಳು.

    

 ಈಗ ಹೇಳು ನಾನು ಏನು ಮಾಡಲಿ ಅವಳ ಅಪ್ಪ ಈಗಲೂ ಅವಳನ್ನ ನಿನಗೆ ಕೊಟ್ಟು ಮದುವೆ ಮಾಡುತ್ತೀನಿ ಅಂತಾನೆ ಹೇಳ್ತಾರೆ. ಅದಿಕ್ಕೆ ನಾನೇ ಸತ್ತರೆ ಒಳ್ಳೆದಲ್ಲವೇ? ಅವಳಿಗಾಗಿ ತಂದ ಬಣ್ಣದ ಬಳೆಗಳನ್ನೇ ನನ್ನ ಉಸಿರು ನಿಲ್ಲಿಸಲು ಬಳಸಿದ್ದೀನಿ.

 

ಇನ್ನೊಂದು ವಿಷಯ ನೀನು ನನಗೆ ಮಾಡಿದ ಸಹಾಯಕ್ಕೆ ಇನ್ನೂ ಮುಂದೆ ನಿಮ್ಮ ಸಂಸಾರಕ್ಕೆ ಏನು ತೊಂದರೆ ಅಗಬರದೆಂದು ನಾನು ಬಿಟ್ಟು ಹೋಗುತ್ತಿರೋ ಕೆಲಸವನ್ನು ನಿನ್ನ ತಮ್ಮನಿಗೆ ವಹಿಸುತ್ತೇನೆ.

 

 ನನ್ನ ಮನೆಯವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡ ನಿನಗೆ ಹಾಗೂ ನಿನ್ನ ಮನೆಯವರಿಗೆ ನನ್ನ ಉಡುಗೊರೆ ಇತೀ ನಿನ್ನ ಪುಟ್ಟ

 

ಇಷ್ಟು ಬರೆದು ತನ್ನ ಕಛೇರಿಯ ವಿಳಾಸ ಬರೆದಿತ್ತು ಇನ್ನೂ ಒಂದು ತಿಂಗಳು ಬಿಟ್ಟು ನಿನ್ನ ತಮ್ಮನನ್ನು ಕಳುಹಿಸು ಎಂದಿತ್ತು. ಸ್ನೇಹದ ಮದ್ಯೆ ಹಣದ ವಿಷಯ ಬರಬಾರದಂತೆ ಹಾಗಾಗಿ ನೀನು ಕಳುಹಿಸಿರೋ ಹಣನ ಬಡ್ಡಿ ಸಮೇತವಾಗಿ

ನಿನ್ನ ಖಾತೆಗೆ ಜಮಾ ಮಾಡಿರುವೆ. 
 
ಪತ್ರ ಓದಿ ಮುಗಿಯುತಿದ್ದಂತೆ ಪತ್ರ ಪೂರ್ತಿಯಾಗಿ ಒದ್ದೆಯಾಗಿತ್ತು

ಹಾಗೆ ಈತನ ಉಸಿರಲ್ಲಿ ಎರಿಳಿತ ಪ್ರಾರಂಭವಾಗಿತ್ತು.

 
ಇನ್ನು ನನ್ನಿಂದ ನೋಡಲಾಗಲ್ಲ ಎಂದು ತನ್ನ ಮಡಿಲಿಂದ ಎತ್ತಬೇಕೆನ್ನುವಷ್ಟರಲ್ಲಿ ಬೇಡ ಎಂದು ಸನ್ನೆ ಮಾಡಿ ಆಕೆಯ ಎರಡೂ ಕೈಗಳನ್ನು ಆತನ ಎದೆಗೆ ಒತ್ತಿ ಹಿಡಿದುಕೊಂಡ.
 
ಇದನ್ನು ನೋಡಲಾಗದ ಹುಡುಗಿ ಕಣ್ಣು ಮುಚ್ಚಿ ಅಳತೊಡಗಿದಳು. ಇದ್ದಕ್ಕಿದಂತೆ ಹಿಡಿದ ಹಿಡಿತ ಸಡಿಲವಾಗುತ್ತಾ ಬಂತು. ಮತ್ತದೇ ಮಾತು ಬರುವ ಜನುಮದಲ್ಲಿ ನಿನ್ನ ಮಗನಾಗಿ ಹುಟ್ಟಿ ಬರಲೇ?  ಈ ಮಾತಿಗೆ ಉತ್ತರ ನೀಡುವ ಮೊದಲೇ  ಮಡಿಲಲ್ಲಿ ಇದ್ದ ಭಾರ ಪಕ್ಕಕ್ಕೆ ವಾಲಿದಂತಾಯಿತು. ಕಣ್ಣು ಬಿಟ್ಟು ನೋಡಿದರೆ ತನ್ನ ಸ್ನೇಹಿತನ ಪ್ರಾಣ ಪಕ್ಷಿ ಹಾರಿಹೋಗಿತ್ತು .

ವಿಧಿಯು ಇವರ ಸ್ನೇಹದಲ್ಲಿ ತನ್ನ ಆಟ ಮುಗಿಸಿತ್ತು.

 

[ “ ಕತೆಯನ್ನು ಬರೆದ ಮೇಲೆ (ಕತೆಯ  ಆರಂಭ  ಮತ್ತು  ಅಂತ್ಯವನ್ನು  ತಿದ್ದಿ, ಅದಕ್ಕೆ  ಸೂಕ್ತವಾದ  ಛಾಯಾಚಿತ್ರ  ನೀಡಿದವರು ಛಾಯಕನ್ನಡಿಯ  ಶಿವಣ್ಣ )ಅವರಿಗೆ ದನ್ಯವಾದಗಳನ್ನು ಹೇಳುತ್ತಾ ……ಈ ಕತೆ ತಮಗೆಲ್ಲಾ ಇಷ್ಟವಾಗುತ್ತೆ ಅಂದುಕೊಂಡಿದ್ದೇನೆ….…. ಓದಿ ನೋಡಿ ಕಾಮೆಂಟ್ ಮಾಡಿ ಪುಟ್ಟ ತಂಗಿಯನ್ನು ಪ್ರೊತ್ಸಾಹಿಸಿ..” ]

 

40 responses to ““ರಕ್ತ ಸಂಭಂದಗಳ ಮೀರಿದ ಬಂಧವಿದು”

  1. ಕಂದಾ, ನಿಮಗೆ ಈ ರೀತಿ ಕಥೆ ಬರಿಯೋಕೆ ಬರತ್ತೆ ಅಂತ ಅನ್ಕೊಂಡಿರ್ಲಿಲ್ಲ. ಹೃದಯಸ್ಪರ್ಶಿ ಕಥೆ. ತುಂಬಾ ಚನ್ನಾಗಿದೆ. Keep it Up… God Bless u..

  2. nimma blog nodi tumba kusahi aaytu ,shivu avaru nimma blogannu odalu helidaru nijakku adbhutavaada barvanige

  3. nimma blog nodi nijakkoo kushi aaytu
    neevu barediruva padagalu neeve maathanaadida haage ide,idu adbhutavaada baravanige,nimma blog annu shivu avaru odalu helidar

  4. nivu thumba chennagi bariteera….

  5. ಭಾವನಾ.. ಲಹರಿಯಲ್ಲಿ..
    ಸುಂದರವಾದ,,…
    ಹ್ರದಯ ಸ್ಪರ್ಶಿ ಕಥೆ…

    ಕಥೆಯ ಭಾವ ಇಷ್ಟವಾಯಿತು…

    ಅಂದವಾದ ಕಥೆಗೆ

    ಅಭಿನಂದನೆಗಳು…

  6. ನನ್ನ ಕಾಮೆಂಟ್ ಜಾಡು ಹಿಡಿದು ನಿಮ್ಮ ಬ್ಲಾಗ್ ಗೆ ಬಂದೆ…..

    “ರಕ್ತ ಸಂಭಂದಗಳ ಮೀರಿದ ಬಂಧವಿದು”

    ಕೊನೆ ಬಂದ ಹಾಗೆ ನಂಗೆ ಅಳು ಬಂದು ಬಿಡ್ತು …

    ತುಂಬಾ ಹೃದಯ ಸ್ಪರ್ಶಿ ಆಗಿದೆ….

  7. ದನ್ಯವಾದಗಳು ವಿನಯಅಣ್ಣ
    ನಾನು ಅನ್ಕೊಂಡಿರಲಿಲ್ಲ ಅಣ್ಣ ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಕೈಯಿಂದ ಬರೆಯಿಸಿತಷ್ಟೆ. ಹೀಗೆ ಬರುತ್ತಿರಿ ಹಾರೈಸುತ್ತಿರಿ ಅಣ್ಣ

  8. ಸುಸ್ವಗಾತ ಕೌಂಡಿನ್ಯ ಸರ್
    ಈ ಬ್ಲಾಗ್ ಓದಿ ಖುಷಿ ಪಟ್ಟಿರಲ್ಲ ನನಗಷ್ಟೇ ಸಾಕು ಹೀಗೆ ಬರುತ್ತಿರಿ ದನ್ಯವಾದಗಳು ಸರ್

  9. ಸೂಪರ್ ಆಗಿದೆ.

    ಮೊದಲ ಕತೆ ಅಂತ ಹೇಳ್ತೀರಿ. ಹಾಗನ್ನಿಸೋಲ್ಲ, ತುಂಬ ಚೆನ್ನಾಗಿ ಬಂದಿದೆ.

  10. ಅಕ್ಕ,
    ಕತೆ ತುಂಬಾ ಚೆನ್ನಾಗಿದೆ…ಹ್ರದಯಕ್ಕೆ ಮುಟ್ಟುವಂತಿದೆ….
    ತುಂಬಾ ಇಷ್ಟ ಅಯಿತು ಅಕ್ಕ……….

  11. ರೋಹಿಣಿ,
    ಬರವಣಿಗೆ ಮತ್ತು ಕಥಾ ಹಂದರದ ತಿರುಳು ಎರಡು ಚೆನ್ನಾಗಿವೆ, ಇದನ್ನು ಹೀಗೆ ಧಾರಾವಾಹಿಯ ತರಹ ಮುಂದುವರೆಸಿ ಕೊಂಡು ಹೋದರೆ ಚೆನ್ನಾಗಿರುತ್ತದೆ ಅಂಬುದು ನನ್ನ ಅನಿಸಿಕೆ, ಆದರೆ ಸ್ವಾರಸ್ಯ ಕಳೆದು ಕೊಳ್ಳದಂತೆ ಎಚ್ಚರವಹಿಸ ಬೇಕಷ್ಟೇ.

  12. ರೋಹಿಣಿ ಮರಿ,

    ಕತೆಯನ್ನು ನನಗೆ ಕಳಿಸಿದ್ದರಿಂದ ನಾನು ಕಾಮೆಂಟು ಮಾಡಬೇಕ ಅನ್ನಿಸಿತು….ಅದರೆ ನಾನು ಓದಿದ್ದೇನಲ್ಲ…ಅದಕ್ಕೆ ನನಗೆ ಅನ್ನಿಸಿದ್ದು ಬರೆಯಬೇಕೆನಿಸಿತ್ತು…
    ಕತೆಯ ತಿರುಳು ತುಂಬಾ ಚೆನ್ನಾಗಿದೆ….ಬರೆಯುವ ಶೈಲಿಯನ್ನು ಬದಲಿಸಿಕೊಂಡರೇ ಚೆನ್ನ…ಮತ್ತೆ ಸಾಧ್ಯವಾದಷ್ಟು ತುಂಬಾ ಚಿಕ್ಕದಾಗಿರಲಿ….ಏನು ಹೇಳಬೇಕೋ ಅದನ್ನು ನೇರವಾಗಿ ಹೇಳಿದರೆ ಒಳ್ಳೆಯದು….
    ಮತ್ತೆ ಇನ್ನೂ ಹೊಸ ಹೊಸ ಕತೆಗಳು…ಮತ್ತೆ ಅವುಗಳಲ್ಲಿ ಹೊಸ ಪ್ರಯೋಗಗಳಿರಲಿ….ಅದಕ್ಕೆ ನನ್ನ ಎಲ್ಲಾ ರೀತಿಯ ಪ್ರೋತ್ಸಾಹ ಇದ್ದೇ ಇರುತ್ದದೆ…..ಅಭಿನಂದನೆಗಳು….

  13. ರೋಹಿಣಿ ರವರೆ,
    ಕತೆ ತುಂಬಾ ಚೆನ್ನಾಗಿದೆ. ನಿಮ್ಮ ಕತೆ ನೇರವಾಗಿ ಓದಿಸಿಕೊಂಡು ಹೋಗುತ್ತದೆ..

  14. ರೋಹಿಣಿ,
    ಶಿವೂ ಹೇಳಿದ ನ೦ತರ ನಿಮ್ಮ ಬ್ಲಾಗ್ ಬಗ್ಗೆ ತಿಳಿಯಿತು.ಓದಿದೆ. ಒ೦ದು ಒಳ್ಳೆಯ ಬರಹ ಓದಿದ೦ತಾಯ್ತು. ತು೦ಬಾನೆ ಸ೦ತೋಷವಾಯ್ತು. ಕಥನ ಶೈಲಿ ಇಷ್ಟವಾಯಿತು. ಇನ್ನು ನಿಮ್ಮ ಬ್ಲಾಗಿಗೆ ನಾನು ಖಾಯಮ್ ಆಗಿ ಬರುತ್ತಿರುತ್ತೇನೆ.
    ನನ್ನ ಬ್ಲಾಗಿನೆಡೆಗೂ ಕಣ್ಣು ಹಾಯಿಸುತ್ತಿರಿ. ಲಿಂಕ್:
    http://www.nirpars.blogspot.com

  15. ಕಥೆ,ಫೋಟೋ,ಬರವಣಿಗೆ ಎಲ್ಲ ಚೆನ್ನಾಗಿದೆ.
    ಶಿವು training ಅಂದರೆ ಸುಮ್ನೇನಾ!!
    All the Best.

  16. ರೋಹಿಣಿ,
    ಶಿವೂ ಹೇಳಿದ ಮೇಲೆ ನಿಮ್ಮ ಬ್ಲಾಗಿನ ಬಗ್ಗೆ ನನಗೆ ತಿಳಿಯಿತು. ನಿಮ್ಮ ಇತ್ತೀಚಿನ ಕಥೆ ಓದಿದೆ. ಚೆನ್ನಾಗಿದೆ. ಸ್ವಲ್ಪ ಉದ್ದವಾಯಿ ತೇನೋ ಅನ್ನಿಸಿತಾದರೂ ಕಥೆಯೊಳಗಿನ ವಿಚಾರ ವನ್ನು ಚೆನ್ನಾಗಿ ಪೋಣಿಸಿ ಬರೆದಿದ್ದೀರಿ. Good. ನನ್ನ ಬ್ಲಾಗಿಗೂ ಒಮ್ಮೆ ಬನ್ನಿ, ಬರುತ್ತಿರಿ, ಅಭಿಪ್ರಾಯಿಸಿ. ನಮಸ್ಕಾರ.
    ಪರಾ೦ಜಪೆ
    http://www.nirpars.blogspot.com

  17. ನಮಸ್ತೇ ಕ್ರಪಾ ಅಕ್ಕ
    ಭಾವನಲಹರಿಗೆ ಸ್ವಾಗತ
    ಅಳಿಸಿದ್ದಕ್ಕೆ ಕ್ಷಮಿಸಿ
    ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ ಅಕ್ಕ

  18. ನಮಸ್ತೇ ಫ್ರೆಂಡು
    ನಿಜ ಹೇಳ್ತಾ ಇದ್ದೀನಿ ಇದು ಮೊದಲ ಕತೆನೆ
    ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ

  19. ನಮಸ್ತೇ ಪುಟ್ಟಿ
    ನಿನಗೆ ಇಷ್ಟವಾಯಿತಲ್ಲ ನನಗೆ ತುಂಬಾ ಖುಷಿಯಯಿತು
    ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರು

  20. ನಲ್ಮೆಯ ಸಹೋದರ ರಾಜೇಶ್
    ನೀವು ಹೇಳಿದ್ದೆನೋ ಸರಿ. ಅದರೆ ಹಾಗೆ ಬ್ಲಾಗ್ ನಲ್ಲಿ ಬರೆಯಲು ಹೊರಟರೆ ಚೆನ್ನಾಗಿರುವುದಿಲ್ಲವೆನೋ ಅಂತ ಅನಿಸುತ್ತಿದೆ. ಯಾಕೆಂದರೆ ಎಲ್ಲರಿಗೂ ಸಮಯದ ಅಭಾವ ಹಾಗೂ ತುಂಬಾ ಉದ್ದವಾಗಿ ಬರೆದರೆ ಓದಲು ಇಷ್ಟ ವಾಗೋದಿಲ್ಲವೇನೋ ಅಂತ ಅನಿಸುತ್ತಿದೆ.
    ಓದಲು ಇಷ್ಟ ಪಟ್ಟರೆ ಖಂಡಿತ ಬರೆಯುತ್ತೇನೆ

  21. ವಂದನೆಗಳು ಶಿವು ಅಣ್ಣ
    ನಿಮ್ಮ ಮಾಹಿತಿ ಇಂದ ಅಷ್ಟು ದೊಡ್ಡದಾಗಿದ್ದ ಕತೆಯನ್ನು ತಿದ್ದಿ ತೀಡಿ ಬರೆದೆ. ಇನ್ನು ಮುಂದೆ ಬರೆಯೋ ಸಂದರ್ಭ ದಲ್ಲಿ ಸರಿಯಾಗಿ ಯೋಚನೆ ಮಾಡಿ ಸಣ್ಣದಾಗಿ ಬರೆಯುತ್ತೇನೆ. ನಿಮ್ಮ ಹಾರೈಕೆ ಹಾಗೂ ಪ್ರೊತ್ಸಾಹ ಹೀಗೆ ಇರಲಿ

  22. ನಮಸ್ತೆ ಪ್ರಕಾಶ್ ಅಣ್ಣ
    ಕತೆ, ಕತೆಯ ಭಾವ ಇಷ್ಟ ಪಟ್ಟಿದ್ದಕೆ ಧನ್ಯವಾದಗಳು ಹೀಗೆ ಬರುತ್ತಿರಿ

  23. ನಮಸ್ತೇ ಜ್ಞಾನ ಸರ್
    ಕತೆ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು
    ಹೀಗೆ ಬರುತ್ತಿರಿ

  24. ನಮಸ್ತೇ ಪರಾ೦ಜಪೆ ಸರ್
    ಭಾವನಲಹರಿಗೆ ಸ್ವಾಗತ
    ಕತೆ ತುಂಬಾ ದೊಡ್ಡದಿದ್ದರು ತಾಳ್ಮೆಯಿಂದ ಓದಿ ಪ್ರತಿಕ್ರಿಯಿಸಿದಿರಲ್ಲ ದನ್ಯವಾದಗಳು. ನಿಮ್ಮ ಅಬಿಮಾನಕ್ಕೆ ನಾನೆಂದು ಋಣಿಯಾಗಿರುವೆ.
    ನಿಮ್ಮ ಬ್ಲಾಗ್ ನ ಪರಿಚಯ ಮಾಡಿ ಕೊಟ್ಟ ಶಿವು ಅಣ್ಣನಿಗೆ ವಂದನೆಗಳು

  25. ನಮಸ್ತೇ ಮಲ್ಲಿಕಾರ್ಜುನ ಸರ್
    ಕತೆ ಫೋಟೋ ಮೆಚ್ಚಿದ್ದಕ್ಕೆ ದನ್ಯವಾದಗಳು
    ನಿಜ ಶಿವು ಅಣ್ಣನ ತರಬೇತಿ ಅಂದ್ರೆ ಹಾಗೇನೆ
    ಹೀಗೆ ಬರುತ್ತಿರಿ

  26. ನಿರೂಪಣೆ ಚೆನ್ನಾಗಿದೆ ಬರೆಯುತ್ತಿರಿ

  27. Rohini,
    Ninna blog nodide. Ishta aaytu. Chennagi baritiya..
    All the best..:)

  28. preetiya rohinige aasheervaadagalu. ninna kathe tunba tunba chennaagide. Adanne naanu nanna patradalli vyktapadisiddene. adendare ninnalliruva aantarika supta bhavanegalannu neenu sundaravaagi vyktapadisuva chaitanya ninnalide. Heege bareyuttaairu neenu namma kannadada mahaan lekhakiyavara saalige seruve. nanna hrudaya poorvaka aasheervaadagalu.
    ninna shreyobhilaashi. sampath. (navyasamaja.blogspot.com)

  29. ಭಾವನ ಲಹರಿಯಲ್ಲಿ ಇರುವ ಪುಟ್ಟ ರೋಹಿಣಿ ನಕ್ಷತ್ರ ವೆ ….
    ತುಂಬ ಮುದ್ದಾಗಿ ಮೂಡಿ ಬಂದಿದೆ ನಿನ್ನ ಇ ಬರಹ . ಗುಡ್ ಚೆನ್ನಾಗಿ ಬರೆದಿದಿಯ . ಕಥೆ ಸ್ವಲ್ಪ ಚಿಕ್ಕದಾಗಿ, ಡೈರೆಕ್ಟ್ ಆಗಿ ಇದ್ದಿದರೆ ತುಂಬ ಚೆನ್ನಾಗಿ ಇರ್ತಿತ್ತು .
    ಫರ್ಸ್ಟ್ ಟೈಮ್ ಅಲ್ವ… ನಿದಾನಕ್ಕೆ ಅಬ್ಯಾಸ ಆಗುತೆ … keep it up ಪುಟ್ಟಿ…
    ಟೈಮ್ ಸಿಕ್ಕಾಗ ನನ್ನ ಬ್ಲಾಗಿಗೂ ಬಂದು ಹೋಗಿ…

    ನಿನ್ನ ಹೊಸ ಫ್ರೆಂಡ್.
    ಗುರು
    http://guruprsad.blogspot.com/

  30. ಪುಟ್ಟ ತಂಗಿ ರೋಹಿಣಿ ,
    ಸುಮ್ಮನೆ ನಿನ್ನ ಬ್ಲಾಗಿಗೆ ಬಂದರೆ
    ಓಂದು ಅದ್ಭುತವಾದ ಕಥೆಯನ್ನು ಓದಿದ ಹಾಗಾಯಿತು.
    ಕಥೆ ಮುಂದೇನಿರಬಹುದು ಅಂತ ಕೂತುಹಲದಿಂದ ತಾನಾಗಿಯೇ
    ಓದಿಸಿಕೊಂಡು ಹೊಯಿತು.
    ನಿನಗೆ ಅನಿಸಿದ್ದನ್ನ ನೇರವಾಗಿ ಬರೆಯುತ್ತಾ ಇರು.

    ಲಕ್ಷ್ಮಣ

  31. tumba channagide
    ಹೇ ಬೆಳದಿಂಗಳ ಬಾಲೇ
    ನಿ ಏಕೆ ತೂಗುವೆ
    ನನ್ನೆದೆಯ ಉಯ್ಯಾಲೆ

    ಹರಳು ಹುರಿದಂಗೆ ಮಾತಾಡ್ತಿಯ
    ಸೋನೆ ಸುರಿದಂಗೆ ಓಡಾಡ್ಥಿಯ
    ಗೆಜ್ಜಿ ಸದ್ದಿನ ಹೆಜ್ಜೆ ಇಟ್ಟು
    ನನ್ನೆದ್ಯೋಳಗೆ ಗಲ್ ಅಂತಿಯ
    ನನ್ನೆದೆಯ ಸರದೊಳಗೆನ
    ಪದಕ ನೀನು ಅಂತಿಯ

    ಗದ್ದಲಕ್ಕಿ ಮೌನ ತೋರ್ಸ್ತಿಯ
    ಮೌನಕ್ಕೆ ನೂರ್ ಮಾತಾಡ್ತಿಯ
    ಮನಸಲ್ಲಿ ಬರ್ತೀಯ
    ಕನಸಲ್ಲಿ ಬರಲ್ಲ
    ಎದುರಿಗೆ ಸಿಕ್ತಿಯ
    ದೊರದಲ್ಲಿ ಇರ್ತಿಯ

    ಈ ಕನವರಿಸುವ ಹುದುಗನೆದೆಯ ಕುಸುಮ ಬಾಲೆ
    ನೀ ನಿಜಕ್ಕೂ ಬಿದಿಗೆಚಂದ್ರಮನಬೆಳದಿಂಗಳಬಾಲೇ ಇಂತಿ ನಿಮ್ಮ
    ಇಬ್ಬನಿ

  32. O magale neenu nannannu maretantide. yeke nanna barahakke uttaravilla. irali kaayuttene. inti ninna abhyudayavannu bayasuva hiriya kannadiga
    sampath.

  33. ನಮಸ್ತೇ ಹರೀಶ್
    ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು

  34. ನಮಸ್ತೇ ರೇಶ್ಮಕ್ಕ
    ಭಾವನಲಹರಿಗೆ ಸ್ವಾಗತ
    ಬರಹ ಇಷ್ಟ ಪಟ್ಟಿದ್ದಕ್ಕೆ ಹಾಗೂ ಹಾರೈಕೆಗೆ ದನ್ಯವಾದಗಳು

  35. ನಮಸ್ತೇ ಸಂಪತ್ ಸರ್
    ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ.
    ನಿಮ್ಮನ್ನ ಮರೆಯುವುದುಂಟೇ ಕಂಡಿತ ಇಲ್ಲ.
    ಬರಹ ಇಷ್ಟ ಪಟ್ಟಿದ್ದಕ್ಕೆ ಹಾಗೂ ಹಾರೈಕೆಗೆ ದನ್ಯವಾದಗಳು. ಕಂಡಿತ ನಿಮ್ಮ ಆಸೆಯಂತೆ ಉತ್ತಮ ಲೇಖಕಿಯಾಗಲು ಸಾದ್ಯವಾದಷ್ಟು ಕಷ್ಟ ಪಡುವೆ.

  36. ಹೊಸ ಫ್ರೆಂಡು ಗುರು ನಮಸ್ತೇ
    ಭಾವನಲಹರಿಗೆ ಸ್ವಾಗತ
    ಮೊದಲ ಕತೆ ಅಲ್ವ ಅದಿಕ್ಕೆ ಹೀಗಾಯಿತು. ಇನ್ನು ಮುಂದೆ ಎಚ್ಚರಿಕೆ ಇಂದ ಬರೆಯುವೆ. ನಿಮ್ಮ ಬ್ಲಾಗೆಗೂ ಬೇಟಿ ಕೊಡುವೆ.
    ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು

  37. ನಮಸ್ತೇ ಲಕ್ಷ್ಮಣ್ ಸರ್
    ಭಾವನಲಹರಿಗೆ ಸ್ವಾಗತ
    ಪುಟ್ಟ ತಂಗಿ ಅಂದ್ರಲ್ಲ ತುಂಬಾ ಖುಷಿಯಾಯಿತು.
    ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು

  38. ನಮಸ್ತೇ ಮಂಜು
    ಭಾವನಲಹರಿಗೆ ಸ್ವಾಗತ
    ಈ ಬಾಲೆಯ ಛಾಯಚಿತ್ರ ನೋಡಿ ಈ ಕವನ ಮುಡಿದಂತಿದೆ. ಒಳ್ಳೆಯ ಕವನ
    ಬರಹ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು

  39. Rohiniyavare…

    katheya thirulu ishtavaayithu… kathe hrudaya sparshiyaagide maththu bhaavanaathmakavaagide…

    katheya niroopane bagge shivanna heliddu nijavenisithu nanagoo kooda….

    heege bareyuttiri…

    – sudhesh

Leave a reply to ಭಾವನಾ ಲಹರಿ ಪ್ರತ್ಯುತ್ತರವನ್ನು ರದ್ದುಮಾಡಿ