ಒಂದು ಶುಕ್ರವಾರ ದಿನ ಬೆಳಗ್ಗೆ ಬೇಗ ಎದ್ದು ಎಂದಿನಂತೆ ದೇವಸ್ಥಾನಕ್ಕೆ ಹೊರಡಲು ರೆಡಿಯಾದೆ. ಹಾಗೇ ದೇವಸ್ಥಾನಕ್ಕೆ ಹೋಗಿ ವಾಪಾಸು ಬರೋವಾಗ ಬಸ್ಸು ಕೈ ಕೊಟ್ಟ ಪರಿಣಾಮ ನಡೆದುಕೊಂಡು ಬರಬೇಕಾಯಿತು.ಬರುತ್ತಿರುವಾಗ ದಾರಿಯಲ್ಲಿ ಪುಟ್ಟ ಎರಡು ಮಕ್ಕಳು ಆಡೋದನ್ನ ನೋಡಿದೆ.ಪಾಪ ಆ ಮಕ್ಕಳನ್ನು ನೋಡಿದರೆ ಮೈಯಲ್ಲಿ ಬಟ್ಟೆ ಇಲ್ಲ ಬರಿ ಚಡ್ಡಿಲಿ ಇದ್ದವು ನೀರು ನೋಡದೆ ವರುಷಗಳೇ ಕಳೆದಂತಿದ್ದ ಮೈ ಕೈ, ಎಣ್ಣೆ ಕಾಣದ ತಲೆಗೂದಲು ನೋಡಿದರೆ ಪಾಪ ಅನಿಸುತಿತ್ತು. ನನ್ನ ಕೈಯಲ್ಲಿ ಇದ್ದ ಪ್ಲಾಸ್ಟಿಕ್ ಕವರ್ ನೋಡುತ್ತಾ ನಿಂತ ಮಕ್ಕಳನ್ನು ನೋಡಿ ಬೇಜಾರಾಗಿ ಅದರಲಿದ್ದ ಪ್ರಸಾದನ ಅವರಿಗೆ ಕೊಟ್ಟು ಅವರ ತಂದೆ ತಾಯಿನ ನೋಡಬೇಕೆಂದು ಆ ಕಡೆ ಹೋದೆ. ಆದ್ರೆ ಅಲ್ಲಿ ಯಾರು ಆ ಮಕ್ಕಳ ತಂದೆ ತಾಯಿ ಎಂದು ಗೊತ್ತಾಗಲೇ ಇಲ್ಲ. ಅಲ್ಲೇ ಇದ್ದ ಒಬ್ಬರನ್ನು ಕೇಳಿದೆ ಅದಿಕ್ಕೆ ಅವರು ಅವರಿಲ್ಲಿ ಇಲ್ಲ ಅವರು ಇನ್ನೊಂದು ಸೈಟಲ್ಲಿ ಇದ್ದಾರೆ ಅಂದರು. ನನಗೆ ಕೋಪ ಬಂದು ಆ ತಂದೆ ತಾಯಿಗೆ ಬೈಯುತ್ತ ಆ ಮಕ್ಕಳ ಹತ್ತಿರ ಹೋಗಣ ಅಂತ ವಾಪಸ್ಸು ಬರೋವಾಗ ಅಲ್ಲಿ ಇನ್ನೂ ನಾಲಕ್ಕು ಜನ ಮಕ್ಕಳಿದ್ದರು. ಎಲ್ಲರೂ ಒಂದೊಂದು ವರ್ಷ ಹೆಚ್ಹು ಕಡಿಮೆ ಇದ್ದ ಹಾಗಿದ್ದರು ಎಲ್ಲರೂ ಹದಿಮೂರು ವರುಷದ ಕೆಳಗಿನವರು. ಆದ್ರೆ ಈ ಮಕ್ಕಳು ಆಟ ಆಡುತಿರಲಿಲ್ಲ ಅದರ ಬದಲು ಕೆಲಸ ಮಾಡುತಿದ್ದರು. ಕಾಲಲ್ಲಿ ಚಪ್ಪಲಿ ಇಲ್ಲ ಮೈಯಲ್ಲಿ ಸರಿಯಾದ ಬಟ್ಟೆ ಇಲ್ಲ ಬರೀ ತಲೇಲಿ ನಾಲಕ್ಕು ಐದು ಇಟ್ಟಿಗೆಗಳನ್ನ ಹೊತ್ತು ತರುತಿದ್ದರು. ತುಂಬಾನೇ ಬೇಜಾರಾಗಿ ಅವರನನ್ನ ನಿಲ್ಲಿಸಿ ಅವರ ಭಾರನ ಕೆಳಗಿಳಿಸಿ ಮಾತಾಡಿಸಿದೆ. ಅಪ್ಪ ಅಮ್ಮ ಎಲ್ಲಿ ಅಂದಾಗ ಮಕ್ಕಳು ಊರಲ್ಲಿ ಇದ್ದಾರೆ. ಇಲ್ಲಿ ಯಾರ ಜೋತೆಗಿದ್ದೀರ ಅಂತ ಕೇಳಿದರೆ ಚಿಕಪ್ಪ ಹಾಗೂ ಚಿಕ್ಕಮ್ಮನ ಜೊತೆ ಇದ್ದೀವಿ. ಶಾಲೆಗೆ ಹೋಗಲ್ವೇನೋ ಅಂತ ಕೇಳಿದರೆ ಅದಕಂತಾನೆ ಕಳಿಸಿದ್ರು ಊರಿಂದ. ಆದ್ರೆ ನಮಗಿದೆ ಶಾಲೆಯಾಗಿದೆ. ಹೋಗೋ ಅಸೆ ಇದೆ ಆದ್ರೆ ಇವರು ಕಳಿಸಲ್ಲ. ಮತ್ತೆ ಕೆಲವರನ್ನ ವಿಚಾರಿಸಿದಾಗ ಈ ಮಕ್ಕಳನ್ನ ಶಾಲೆಗೆ ಸೇರಿಸಿದರು ಆ ಮಕ್ಕಳನ್ನ ಸಾಕುವವರು ಶಾಲೆ ಬಿಡಿಸಿ ಇಲ್ಲಿಗೆ ಕರೆತರುತ್ತಾರೆ ಅಂತ ಹೇಳಿ ಜಾರಿ ಕೊಂಡರು. ನಮ್ಮ ಈ ಸರಕಾರ ಎಷ್ಟು ಯೋಜನೆಗಳನ್ನ ತಂದರು ಪ್ರಯೋಜನ ಇಲ್ಲ ಎಂದು ಆಗ ಅರ್ಥ ವಾಯಿತು. ಈ ತರ ಮಕ್ಕಳನ್ನು ದುಡಿಸಿಕೊಳ್ಳುವವರನ್ನು ಏನು ಮಾಡೋದು? ಇನ್ನೂ ಕೆಲವು ಕಡೆ ಮಕ್ಕಳನ್ನ ದುಡಿಸ್ತಾರೆ. ಯಾರಾದರು ಅಧಿಕಾರಿಗಳು ಬರುತಿದ್ದಾರೆ ಎಂದು ಗೊತ್ತಾದರೆ ಸಾಕು ಆ ಮಕ್ಕಳನ್ನ ರಜೆ ಕೊಟ್ಟು ಮನೆಗೆ ಕಳುಹಿಸುತ್ತಾರೆ ಇಂತವರಿಗೆಲ್ಲ ಪಾಠ ಕಲಿಸಬೇಕು. ಮಕ್ಕಳನ್ನ ದುಡಿಸುವವರಿಗಿಂತ ಮಕ್ಕಳಿಗೆ ಕೆಲಸ ಕೊಡುವವರಿಗೆ ಮೊದಲು ತಕ್ಕ ಶಾಸ್ತಿ ಮಾಡಬೇಕು. ಯಾಕೆಂದರೆ ಅವರು ಕೆಲಸಾನೇ ಕೊಟ್ಟಿಲ್ಲ ಅಂದರೆ ಆ ಮಕ್ಕಳು ದುಡಿಯುತಿದ್ರ ಇಲ್ಲ ಅಲ್ವಾ!! ನಂತರ ದುಡಿಸುವವರ ಮೇಲೆ ಕಠಿಣ ಶಿಕ್ಷೆಯಾಗಬೇಕು. ಎಲ್ಲೂ ಬಾಲಕಾರ್ಮಿಕರು ಇರಬಾರದು ನೀವೇನಂತೀರಾ? ನಾನು ಆ ಮಕ್ಕಳನ್ನ ನೋಡಿದ ದಿನ ದಿಂದ ನನ್ನ ಕಣ್ಣಿಗೆ ಎಲ್ಲಿ ಬಾಲ ಕಾರ್ಮಿಕರು ನೋಡ ಸಿಗುತ್ತಾರೋ ಅಲ್ಲೇ ಹತ್ತಿರ ಇರೋ ಶಾಲೆಗೆ ವಿಷಯ ತಿಳಿಸುತ್ತೇನೆ ಕೂಡಲೇ ಅವರು ಬಂದು ಆ ಮಕಳನ್ನ ಶಾಲೆಗೆ ಕರೆದುಕೊಂಡುಹೋಗುತ್ತಾರೆ. ಹೀಗೆ ನಿಮಗೂ ಅಷ್ಟೇ ಎಲ್ಲಾದರು ಇಂಥ ಮಕ್ಕಳು ನೋಡ ಸಿಕ್ಕರೆ ಖಂಡಿತ ಸಮೀಪ ಇರೋ ಶಾಲೆಗೆ ವಿಷಯ ತಿಳಿಸಿ. ಬಾಲಕಾರ್ಮಿಕ ಅನ್ನೋ ಪಿಡುಗುನ ನಿರ್ಮೂಲನೆ ಮಾಡೋಣ. ಇಂತಹ ಮಕ್ಕಳಿಗೆ ಸಹಾಯ ಮಾಡುತ್ತೀರ ತಾನೆ?
ಸಂಗ್ರಹಗಳು
ಭಾವನಾಲಹರಿಯ ಯಾತ್ರೆಯಲಿ ನನ್ನ ಭಾವನೆಗೆ ಸೆರೆ ಸಿಕ್ಕವರು
- ಇಂಚರ ಪುಟ್ಟಿಯ ಸ್ವಾತಿಮುತ್ತು
- ಕಾಫಿ ಬೇಕೇನು ಬನ್ನಿ ಇಲ್ಲಿದೆ “ಕಾಫಿಕ್ಲಬ್”
- ಚಿತ್ರಕ್ಕನ ಶರಧಿ
- ಜ್ಞಾನಮೂರ್ತಿ ರವರ
- ಡಿ.ಜಿ ಸಂಪತ್ ರವರ ನವ್ಯ ಸಮಾಜ
- ನವಿಲೂರ ಹುಡುಗ ಚೋಮಣ್ಣನ ನವಿಲುಗರಿ
- ನಾಗು ತಳವಾರ್ ರವರ : ಹಳ್ಳಿ ಹುಡುಗ
- ಪರಾಂಜಪೆ ರವರ: ಮನಸಿನ್ಯಾಗಿನ ಮಾತು
- ಪಲ್ಲವಿಯವರ : ಅನುಪಲ್ಲವಿ
- ಪ್ರಕಾಶಣ್ಣನ :ಇಟ್ಟಿಗೆ ಸಿಮೆಂಟು
- ಮಂಗಳೂರ ಧೂಮಕೇತು ಸಂದೀಪರವರ : ಕಡಲತೀರ
- ಮಂಗಳೂರಿನ ಹುಡುಗ ಮಿಥುನನ : ಮನಸು
- ಮಲ್ಲಿಕಾರ್ಜುನ್ ಅವರ :ನನ್ನ ಹಾಡು
- ಮಲ್ಲಿಕಾರ್ಜುನ್ ಡಿ ಜಿ ರವರ : ಕ್ಯಾಮರ ಕಣ್ಣಲ್ಲಿ
- ರಂಜಿತ್ ಅವರು ಮನಸೆಂಬ ಹೂದೋಟದಲ್ಲಿ ಅರಳಿರುವ ನೀಲಿಹೂಗಳು
- ರಾಜೇಶ್ ಮಂಜುನಾಥ್ ಅವರ ಲಗೋರಿ ಆಟ
- ಶಂಕರ ಪ್ರಸಾದ ರವರ :ಸೋಮಾರಿ ಕಟ್ಟೆ
- ಶಾಂತಲ ಅಕ್ಕನ ನೆನಪು ಕನಸುಗಳ ನಡುವೆ
- ಶಿವುರವರ ಛಾಯಾಕನ್ನಡಿ
- ಸುಧೇಶ್ ರವರ : ಅನುಭೂತಿ
- ಸುನಿಲ್ ಮಲ್ಲೇನಹಳ್ಳಿ
- ಸ್ನೇಹಜೀವಿ ಅಶೊಕ್ ರವರ :setting the world free
- ಹರೀಶ್ ರವರ : ನವೋದಯ
- ಹೇಮಾರವರ ಅಂತರಂಗದ ಮಾತು ಹೇಮಾನತರಂಗ
akka i lekhana chennagide..baala karmikarna tadibeku..anno maatu tumba arthapoornavagi ide.. ..
Thank You Putti
ಮೇಡಮ್,
ಲೇಖನ ಚೆನ್ನಾಗಿದೆ…ಬರಹದಲ್ಲಿ ಕಾಳಜಿ ಮತ್ತು ಅಪ್ತತೆ ನನಗಿಷ್ಟವಾಯಿತು…..
ನಾನು ಶಿವು ಅಂತ ಹೀಗೆ ಅಲೆದಾಡಿಕೊಂಡು ನಿಮ್ಮ ಬ್ಲಾಗಿಗೆ ಬಂದೆ….
ನನ್ನ ಬ್ಲಾಗಿಗೊಮ್ಮೆ ಬನ್ನಿ….ಆಹಾಂ! ಈಗ ನನ್ನ ಬ್ಲಾಗಿನಲ್ಲಿ ಹೊಸ ನಡೆದಾಡುವ ಭೂಪಟಗಳು ಬಂದಿವೆ…ಮನಃಪೂರ್ವಕವಾಗಿ ನಗಲು ಬನ್ನಿ…..
http://chaayakannadi.blogspot.com/
ಆಯ್ತಮ್ಮ, ಆ ಮಕ್ಕಳಿಗಿಂತಲೂ ಮಗುವಿನ ಹೃದಯನಮ್ಮ ನಿಂದು..ನೀ ಹೇಳಿದಂಗೆ ಖಂಡಿತಾ ಮಾಡೋಣ
-ನಾಗು,ತಳವಾರ್.
ಬಾಲಕಾರ್ಮಿಕ ಪದ್ದತಿ ನಿಷೇದಿಸಬೇಕು, ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗಬೇಕು ಅವರು ಶಾಲೆ ತೊರೆಯದಂತೆ ನೋಡಿಕೊಳ್ಳಬೇಕು ಎಂದೂ ಮತಾನಾಡುವ ಜನರೇ, ಇಂದು ಮಕ್ಕಳನ್ನು ಹೋಟಲ್, ಬಾರ್, ಬೇಕರಿ, ರೈಸ್ ಮಿಲ್ , ಕಟ್ಟಡ ಕೆಲಸ, ಮತ್ತು ಟೀ ಅಂಗಡಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಖಂಡಿತವಾಗಿ ನಮ್ಮಂತರು ನಿಮ್ಮಂತೋರ ಸಹಾಯದಿಂದ, ಬಾಲಕರ್ಮಿಕರಲ್ಲಿ ನಿಮಗು ಓದು-ಬರಹ ಬೇಕು ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡುಸುವ ವಾತಾವರಣ ನಿರ್ಮಾಣಮಡಬೇಕು. ಆಗ ಮಾತ್ರ ಬಾಲಕರ್ಮಿಕ ಪದ್ದತಿ ನಿರ್ಮೂಲನೆ ಮತ್ತು ನಿಮ್ಮ ಬರಹ ಎರಡು ಸಾರ್ಥಕ.
ನೀವೇನಂತೀರಾ ???
nija.. Rohini adre.. nammalli Bengaloorinatha oorinalli nodidaga prathi signal nallu kanishta 5-6 jana makkalu.. ondu putta hudugi adu 6 7 varshada hudugi innondu hasu kandammanann ethkond bikshe bedthirthare.. makkalu kelsa madodu bikshe bedodu.. idenalla nillisbekagirodu thande thayigalu. nanthara samaja andre navugalu.. khanditha kandalli gundu anno rithili karya pravaruttargabeku.
ನಮಸ್ತೆ ಶಿವು ಸರ್
ನನ್ನ ಭಾವನೆಗಳ ಲಹರಿಗೆ ಸ್ಪಂದಿಸಿದ ತಮಗೆ ಧನ್ಯವಾದಗಳು
ಧನ್ಯವಾದಗಳು ನಾಗು ಸರ್
ನಾವೆಲ್ಲ ಒಂದಾದರೆ ಇಂತಹ ಪಿಡುಗುಗಳನ್ನು ದೂರ ಮಾಡಬಹುದು
ನಮಸ್ತೆ ಜ್ಞಾನಮುರ್ತಿಯವರಿಗೆ
ನೀವು ಹೇಳಿದ ವಿಚಾರನು ಸರಿ ಅಂತಹ ಕೆಲಸಾನ ನಾವೆಲ್ಲ ಮಾಡಲೇಬೇಕು
ನಮಸ್ತೆ ಪುಷ್ಪ ಮೇಡಂ
ಬಿಕ್ಷಾಟನೆ ಅನ್ನೋದು ಒಂದು ಪಿಡುಗು.
ಇದನ್ನು ನಡೆಸೋದು ಕೆಲವೊಂದು ಮಾಫಿಯ ಬಳಗಗಳಂತೆ
ಕಾಳಜಿಯುಳ್ಳ ಬರಹ. ಭಾವಲಹರಿ ಪಯಣ ನಿತ್ಯ ನೂತನವಾಗಿರಲಿ
-ಚಿತ್ರಾ
ಖಂಡಿತ ಚಿತ್ರಕ್ಕ
idu artha purna vada mathu. yestu sarala mathu adre tumba hathira vago mathu……
Tangi i lekhana chennagide..baala karmikarna tadibeku..anno maatu tumba arthapoornavagi ide.. ..
mathe, leakana chennagide, but lekandidnda prasnegalige othara sigodilla, a makkalannu shalege searisabahudu, but neave healidanthe avarannu nodikolluvavaru shalege kalisuthare ennuvudu yava namdike, a muddu makklige naave ondu shale theredare heage, chennagiruthe allava……..nanthu ready eddene….
namaste vijay
bhavanalaharige swagatha
nivu yava mathu ishta pattiri yendu gottaglilla.
adaru aa mathanna ishta pattiddakke nanna kadeyinda dhanyavadagalu
namaste bheemanna
bhavanalaharige swagatha
lekhana ishta pattiddakke dhanyavadagalu. hige barutiri.
namaste manjunath sir
bhavanalaharige swagatha
nivu helida mathu nija lekhanadinda ii pidugannu purthiyagi tadeyalu sadhya illa. naaniga shalege serisiro makkalalli yellaru kaliyuttiddare nanu yavagaladaromme shalege phone madi vicharisuttiruttene. nivu helida mathu nija. navella seri antaha makkalige sanna dagi shale prarambhisabahudu. adare ii kelasa obbobbrinda nadeyuvantadalla hani hani seridarene halla allave nanantu siddha
nimma eee karyakke namma smpoorna
sahakaaravide.
nice writings rohini.