ತಾಯಿಯೇ ದೇವರು ನೀವೇನಂತೀರಾ?

ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತ್ತಿರುವೆ ನಾನು!!!!!
ಎಷ್ಟು ಅರ್ಥಪೂರ್ಣವಾಗಿರೋ ಹಾಡು ಎಷ್ಟು ಕೇಳಿದರು ಇನ್ನಷ್ಟು ಕೇಳಬೇಕೆನ್ನೋ ಆಸೆ. ಮಗು ತಾಯಿಯ ಹೊಟ್ಟೆಯಿಂದ ಹೊರಬರಲು ಕಾತರಿಸುತ್ತಿದೆ. ತನ್ನ ತಾಯಿನ ಕೇಳಿಕೊಳ್ಳುತ್ತಾ  ಇದೆ. ನನಗೆ ಆದಷ್ಟು ಬೇಗ ಪ್ರಪಂಚದ ಬೆಳಕು ತೋರಿಸು ಎಂದು ತನ್ನ ಮೆತ್ತನೆಯ ಕಾಲಿಂದ ತಾಯಿಯ ಹೊಟ್ಟೆಗೆ ಒದೆಯುತ್ತಿದೆ ತಾಯಿಯು ಆ ನೋವಿಂದ ಆನಂದ ಪಡುತ್ತಾಳೆ. ಯಾವಾಗ ನಾನು ಈ ಮಗುವಿನ ಮುಖ ನೋಡುವೆನೋ ಎಂದು ಕಾತರಿಸುತ್ತಾಳೆ. ನನ್ನ ಅಮ್ಮಾ  ಹೇಳುತಿದ್ದ ಮಾತು ಒಂದು ಹೆಣ್ಣು ಪರಿಪೂರ್ಣ ಹೆಣ್ಣು ಆಗಲು  ಆಕೆ ತಾಯಿಯಾಗಲೇ ಬೇಕು. ಅದು ನಿಜಾನೆ ಮದುವೆಯಾಗಿ ಒಂದು ವರುಷ ಕಳೆಯುವಾಗಲೇ ಹೆಣ್ಣು ಗರ್ಭಿಣಿ ಆಗಬೇಕು ಇಲ್ಲ ಅಂದರೆ ಈ ಜನರ ಬಾಯಿಯ ಮಾತಾಗುತ್ತಾಳೆ. ಏನಮ್ಮ ಹೋಗಿ ಒಳ್ಳೆ ಡಾಕ್ಟರ್ಗೆ ತೋರಿಸ್ಕೊಂಡು ಬರಬಾರದ ಅಂತ ಹೇಳೋರು  ಕೆಲವರು. ಏನೋ ಸಮಸ್ಯೆ ಇರಬೇಕು ಅದಿಕ್ಕೆ ಇನ್ನೂ ಮಡಿಲು ತುಂಬಿಲ್ಲ ಅನ್ನೋರು ಇನ್ನೂ ಕೆಲವರು. ಇವರಿಗೆಲ್ಲ ಉತ್ತರ ಕೊಡೋಕ್ಕಾಗದೆ ಏನು ಹೇಳೋಕು ಆಗದೆ ಪಡುವ ಪಾಡು ಆಕೆಗೆ ಗೊತ್ತು. ನನ್ನಲ್ಲಿ ಎಷ್ಟೋ ಜನ ಕೇಳಿದ ಮಾತು ನೀನು ತಾಯಿನ ದೇವರು ಅನ್ನುತ್ತೀಯಲ್ಲ  ಹಾಗಾದರೆ ಅಪ್ಪ ಯಾರು ಗುಮ್ಮನ ಅಂತ. ಅಮ್ಮಾ ಯಾವತಿದ್ರು  ದೇವರೇ ಯಾಕೆಂದರೆ ನನಗೆ ಈ ಪ್ರಪಂಚದ ಬೆಳಕನ್ನು ತೋರಿಸಿದವಳು ತಾಯಿ ಅಷ್ಟೇ ಅಲ್ಲ ತಾನೆಷ್ಟು ನೋವು ಪಟ್ಟರು ತನ್ನ ಮಗುವಿಗೆ ನೋವು ಪಡಿಸಲು ಇಷ್ಟ ಪಡೋದಿಲ್ಲ ಒಂಬತ್ತು ತಿಂಗಳು ಮಗುನ ಅದೆಷ್ಟು ಎಚ್ಚರಿಕೆಯಿಂದ  ಕಾಪಾಡಿ ಅದನ್ನ ಈ ಭೂಮಿಗೆ ತರೋವಾಗ ಆಕೆ ಪಡುವ ವೇದನೆ ಅಷ್ಟಿಷ್ಟಲ್ಲ  ಎಲ್ಲ ವೇದನೆಯನ್ನು ಆ ಮಗುವಿನ ಆಳುವಲ್ಲಿ ಹಾಗೂ ಮಗುವಿನ ಮುಖ ನೋಡಿ ಮರೆಯುತ್ತಾಳೆ. ಇದಕ್ಕೆ ತಾಯಿ ಯಾವತಿದ್ದರು ದೇವರು. ಆದರೆ ಅಪ್ಪ ಇಷ್ಟೆಲ್ಲಾ ನೋವು ಅನುಭವಿಸುತ್ತಾರ ಇಲ್ಲ. ಆದರು ಅಪ್ಪನೂ ದೇವರು ಸಮಾನರೇ. ತನ್ನ ಮೈಯ ರಕ್ತವನ್ನು ಹಾಲಗಿಸಿ ಮಗೂಗೆ ಕುಡಿಸುವವಳು ತಾಯಿ ಮಗುವಿನ ನೋವನ್ನು ಸಂತೋಷವನ್ನು ಮೊದಲು ತಿಳಿಯುವವಳು ತಾಯಿ ಇಂತಹ ತಾಯಿಯನ್ನ ದೇವರು ಎಂದು ಅನ್ನಲೇ ಬೇಕಲ್ಲವೇ.

31 responses to “ತಾಯಿಯೇ ದೇವರು ನೀವೇನಂತೀರಾ?

  1. ತಾಯಿಯ ಬಗ್ಗೆ ಬರೆದದ್ದನ್ನು ಓದಿ, ನನಗೆ ಅವ್ವ ನೆನಪಾದಳು..ತಕ್ಷಣ ನನ್ನ ಬ್ಲಾಗ್ ನಲ್ಲಿ ಅವ್ವಳಿಗಾಗಿ ಶಾಯಿರಿವೊಂದನ್ನ ಬರೆದಿದ್ದೇನೆ..ನೀವೂ ಒಮ್ಮೆ ಓದಿ, ಅಭಿಪ್ರಾಯ ತಿಳಿಸಿ…
    ನಾಗು,ತಳವಾರ್.

  2. ರೋಹಿಣಿ ಅವರೆ…
    ಅಮ್ಮನ ಬಗ್ಗೆ ಬಹಳ ಸುಂದರವಾಗಿ ಭಾವನೆಗಳ ಬಿತ್ತರಿಸಿದ್ದೀರಿ.
    ನನಗೂ ‘ಅಮ್ಮ’ ಎನ್ನುವ ಪದ, ಅದರೊಳಗಿನ ‘ಅಮ್ಮ’ ಎಲ್ಲವೂ ಇಷ್ಟ.
    ಸುಂದರ ಲೇಖನ.

  3. ರೋಹಿಣಿ ಮೇಡಂ ,

    “ವರ ಕೊಡುವ ದೇವರನು ನಾ ಕಾಣೆನಮ್ಮ
    ಫಲ ಕೊಡುವ ಕಾಮಧೇನುವಾಗಿ ನಾನು ನಿನ್ನ ಕಂಡೆನಮ್ಮ ”

    ತಾಯಿಯೇ ಮೊದಲ ಗುರು ಎಂಬ ಗಾದೆಯನ್ನು ನಿಜವಾಗಿಸಿದೆ ಈ ನಿಮ್ಮ ಬರಹ..

  4. ಧನ್ಯವಾದಗಳು ನಾಗು ತಳವಾರ್ ಅವರಿಗೆ
    ಖಂಡಿತ ಓದುವೆ ದಯವಿಟ್ಟು ನಿಮ್ಮ ಬ್ಲಾಗ್ ನ ವಿಳಾಸ ಕಳುಹಿಸಿ

  5. ಧನ್ಯವಾದಗಳು ಶಾಂತ ಮೇಡಂ

    ಯಾವ ಜಾತಿಯವನಾಗಿರಲಿ ಎಷ್ಟೇ ಕೆಟ್ಟವನಾಗಿರಲಿ ಆತನ ಬಾಯಿಂದ ಅಮ್ಮ ಅನ್ನೋ ಪದ ಬಂದೆ ಬರುತ್ತೆ. ಅಮ್ಮ ಅನ್ನೋ ಪದಕ್ಕೆ ಅಷ್ಟು ಶಕ್ತಿ ಇದೆ. ಅಲ್ವಾ ಮೇಡಂ

  6. ಧನ್ಯವಾದಗಳು ಜ್ಞಾನ ಮೂರ್ತಿಯವರಿಗೆ

    ಕಣ್ಣಿಗೆ ಕಾಣುವ ದೇವರು ಅಮ್ಮ ಅಲ್ವಾ.
    ನಿಜವಾಗಿಯೂ ಅಮ್ಮನೇ ಮೊದಲ ಗುರು. ಗಾದೆಮಾತುಗಳು ಯಾವತ್ತು ಸುಳ್ಳಾಗೋದಿಲ್ಲ. ನೀವೇನಂತೀರಾ

  7. nagtalwar.wordpress.com
    ಬ್ಲಾಗ್ ವಿಳಾಸ…ಕೇಳಿದಿರಲ್ಲಾ? ತೆಗೆದುಕೊಳ್ಳಿ..!
    ಧನ್ಯವಾದಗಳೊಂದಿಗೆ…
    ನಾಗು,ತಳವಾರ್.
    nagarjunadp@gmail.com

  8. ರೋಹಿಣಿ,
    ನಿಮ್ಮ ಈ ಬರಹ ಓದಿದ ಮೇಲೆ ನನಗೊಂದು ಎಲ್ಲೋ ಓದಿದ ವಿಚಾರ ನೆನಪಿಗೆ ಬಂತು ಅದೇನೆಂದರೆ… ಹುಡುಗ ಮಳೆಯಲ್ಲಿ ಒದ್ದೆಯಾಗಿ ಬಂದಾಗ ಮನೆಯವರ ಪ್ರತಿಕ್ರಿಯೆ ಹೇಗಿತ್ತು ಎಂದು ಅವನು ವಿವರಿಸುತ್ತಾನೆ “ಬಾಗಿಲು ದಾಟುತ್ತಿದ್ದಂತೆ ಅಣ್ಣ ಕೇಳಿದ ಸ್ವಲ್ಪ ಮಳೆ ನಿಲ್ಲುವವರೆಗೆ ಕಾದು ಬರಬಹುದಿತ್ತಲ್ಲ ಅಂತ, ಅಕ್ಕಾ ಕೇಳಿದಳು ಛತ್ರಿ ಏಕೆ ತೆಗೆದುಕೊಂಡು ಹೋಗಲಿಲ್ಲ ಅಂತ, ಅಪ್ಪ ನಾಳೆ ನಿನಗೆ ಹುಷಾರು ತಪ್ಪಲಿ ಆಗ ಗೊತ್ತಾಗುತ್ತೆ ಅಂತ ಗದರಿದರು, ಅಮ್ಮ ನನ್ನ ತಲೆ ಒರೆಸುತ್ತ ಹಾಳಾದ್ದು ಈಗಲೇ ಬರಬೇಕ ಅಂತ ಮಳೆಯನ್ನು ಶಪಿಸುತ್ತಿದ್ದಳು”. ಇದು ಅಮ್ಮ ಅಲ್ವ ರೋಹಿಣಿ, ನಿಮ್ಮ ಬರಹ ಇಷ್ಟವಾಯ್ತು.
    -ರಾಜೇಶ್ ಮಂಜುನಾಥ್

  9. ಸತ್ಯವಾದ ಮಾತು ಅಂತೀನಿ

    ಪ್ರೀತಿ ವಾತ್ಸಲ್ಯ ಮಮತೆಗಳ ಮೂಲ ತಾಯಿ
    ಆ ತಾಯಿತನ ಅನ್ನೋದು ಪ್ರತಿ ಹೆಣ್ಣಿನಲ್ಲಿಅವಳುಹುಟ್ಟುವಾಗಲೇ
    ತನ್ನ ತಾಯಿಯಿಂದ ಪಡೆದಿರುವ ಮೊದಲ ಉಡುಗೊರೆ
    ಅಲ್ವ ರೋಹಿಣಿ

  10. ನನ್ನ ಬರಹ ಇಷ್ಟಪಟ್ಟಿದ್ದಕ್ಕೆ ಅನಂತ ಅನಂತ ದನ್ಯವಾದಗಳು.

    ನಿಜ ರಾಜೇಶ್ ಅಮ್ಮ ಮಾತ್ರ ಆ ರೀತಿ ಕೆಳೋಕ್ಕಾಗೋದು ಮತ್ತೆ ಯಾರಿಂದನೂ ಸಾದ್ಯ ಇಲ್ಲ.

  11. ನನ್ನ ಭಾವನೆಗಳ ಭಾವನ ಲಹರಿಗೆ ಸ್ಪಂದಿಸಿದ ಪುಷ್ಪರವರಿಗೆ ನನ್ನ ಧನ್ಯವಾದಗಳು

    ನಿಮ್ಮ ಮಾತು ನಿಜ ತಾಯಿತನವು ಹೆಣ್ಣಿಗೆ ಸಿಕ್ಕಿರೋ ಅತೀ ದೊಡ್ಡ ವರ

  12. ಅಮ್ಮ ಎಂದರೆ ಯಾವುದೇ ಕಷ್ಟಕಾಲದಲ್ಲಿ ಓದಲು ಬೆವರು ಸುರಿಸಿ ಹರಸಿದ ಮಹನಿ..
    ಲಕ್ಷ್ಮಿನಾರಾಯಣ ಭಟ್ಟ್ ಅವರ ನುಡಿಗಳು ನೆನಪಿಗೆ ಬರ್ತಾ ಇದೆ..
    “ತಾಯಿ ನಿನ್ನ ಮಡಿಲಲಿ
    ಕಣ್ಣ ಕಂಡ ತೆರೆದ ಕ್ಷಣದಲಿ
    ಸುತ್ರವೊಂದು ಬಿಗಿಯಿತೆನ್ನ
    ಸಂಬಂಧದ ನೆಪದಲಿ”
    ನಿಮ್ಮ ತುಂಬುಹೃದಯದ ನೇರ ನುಡಿಗಳಿಗೆ ಧಬ್ಯಾವಾದಗಳು ರೋಹಿಣಿ..
    ನಿಮ್ಮವನು ಪ್ರಿಯದರ್ಶಿ

  13. ಅಮ್ಮನಿಗೆ ಅಮ್ಮನ್ನೇ ಸರಿಸಾಟಿ..
    ಅಂತ ಅಮ್ಮನ ಬಗ್ಗೆ ನೀವು ಬರೆದಿರೋ ಲೇಖನ ಬಹಳ ಸೊಗಸಾಗಿ ಮೂಡಿಬಂದಿದೆ.
    ವಂದನೆಗಳು
    ಸುನಿಲ್ ಮಲ್ಲೇನಹಳ್ಳಿ

  14. ನೀವು ನನ್ನ ಪ್ರೀತಿಸುತ್ತಿರೋದು ನಿಜವೇ ಆದ್ರೆ ನಂಗೆ ನಿಮ್ಮಮ್ಮನ್ನ ಕೊಂದು ಆಕೆಯ ಹೃದಯ ತಂದುಕೊಡು ಅಂತಾಳಂತೆ ಹೆಂಡತಿಯೊಬ್ಬಳು.

    ಆಕೆಗಾಗಿ ಅಮ್ಮನ ಹೃದಯ ಹೊತ್ತು ತರುತ್ತಿದ್ದಾಗ ದಾರಿಯಲ್ಲಿ ಕಲ್ಲು ತಾಗಿ ಎಡವುತ್ತಾನೆ.

    “ನೋವಾಯ್ತಾ ಮಗೂ..” ಎಂದು ಪ್ರೀತಿಯಿಂದ ಕೇಳುತ್ತದಂತೆ ಅಮ್ಮನ ಹೃದಯ!

    ಎಲ್ಲೋ ಓದಿದ್ದು. ನಿಮ್ಮ ಬರಹ ಓದುತ್ತಿದ್ದಂತೆ ನೆನಪಾಗಿ ಮನಸು ಒದ್ದೆಯಾಯಿತು.

  15. ಧನ್ಯವಾದಗಳು ಅಶೋಕ್
    ಅಮ್ಮ ಅಂದ್ರೆ ಹಾಗೇನೆ ಸ್ವಾರ್ಥ ಇಲ್ಲದ ಜೀವ ಅದು

  16. ನನ್ನ ಭಾವನಳಹರಿಗೆ ಸ್ಪಂದಿಸಿದ ಸುನಿಲ್ ರವರಿಗೆ ಧನ್ಯವಾದಗಳು

  17. ನನ್ನ ಭಾವನಲಹರಿಗೆ ಸ್ಪಂದಿಸಿದ ಹಾಗೂ ಈ ಕತೆನ ನಮಗೂ ನೆನಪಿಸಿದಕ್ಕೆ ರಂಜಿತ್ ರವರಿಗೆ ಧನ್ಯವಾದಗಳು

  18. ರೋಹಿಣಿ ಮರಿ,

    ಅಮ್ಮನ ಬಗ್ಗೆ ಇರುವ ಆ ಹಾಡು ನನಗೂ ತುಂಬಾ ಇಷ್ಟ….ನಾನು ಆಗಾಗ ಅದನ್ನು ಕೇಳುತ್ತಿರುತ್ತೇನೆ…..ತಾಯಿಯ ಬಗ್ಗೆ ಓದುತ್ತಾ ಹಾಗೆ ಅಪ್ತವಾಗಿಬಿಡುತ್ತದೆ……ಓದುತ್ತಾ ಊರಿನಲ್ಲಿರುವ ನನ್ನಮ್ಮ ನೆನಪಾದಳು……ಥ್ಯಾಂಕ್ಸ್……

  19. ammana preeti hegiruttade ennuvudakke ondu udaaharane. nanage cigaretu seduva chatavittu. nanna sahodara videshadalli kelesadalliddu swadeshakke maralidaaga videshi cigarettina karttonondannu tandu nannannoo seri snehitarige hanchalu ittidda. nanna taayi cigaretuseduvudu haanikara endu tilididdu saha nannamelina vyamohadinda nanagagi innoeradu pack cigaretannu nanna sahodaranige tiliyadante tegedu muchittu naanu obbane iddaga tego cigaretu kudibedaandru kelolla ella cigaretannu avanu (nanna sahodaranannu)ellarigu sikkabatte hanchuttane adaralli ninagoskara 2 packet tegidittiddene. endu kottaga amman preeti entahudu endu asharyapatte.

  20. ನಮಸ್ತೆ ಸಂಪತ್ ಸರ್
    ಅಮ್ಮನ ಪ್ರೀತಿಗೆ ಒಳ್ಳೆ ಉದಾಹರಣೆನೆ ಕೊಟ್ಟಿದ್ದಿರಾ ನನ್ನ ಭಾವನೆಗಳಿಗೆ ಸ್ಪಂದಿಸಿದ ನಿಮಗೆ ಧನ್ಯವಾದಗಳು ಹೀಗೆ ಬರುತಿರಿ

  21. ಶಿವೂ ಅಣ್ಣ
    ಅಮ್ಮನ ಬಿಟ್ಟು ದೂರ ಇರೋದಂದ್ರೆ ತುಂಬಾ ಬೇಜರಲ್ವಾ ಹೀಗೆ ಬರುತಿರಿ ಅಣ್ಣ

  22. ಮರೆಯೋಲ್ಲ ನಿನ್ನ ! ಮರೆತರೂ... ನನ್ನ! -ಸ್ನೇಹಾಂಧ

    ವಿದ್ಯೆ ಕಲಿಸದ ತಂದೆ
    ಬುಧ್ಧಿ ಹೇಳದ ಗುರು
    ಬಿದ್ದಿರಲು ಬಂದು ನೋಡದ ತಾಯಿ
    ಶುಧ್ಧ ವೈರಿಗಳು ಸರ್ವಜ್ಞ.

  23. ವಿದ್ಯೆ ಕಲಿಸದ ತಂದೆ
    ಬುಧ್ಧಿ ಹೇಳದ ಗುರು
    ಬಿದ್ದಿರಲು ಬಂದು ನೋಡದ ತಾಯಿ
    ಶುಧ್ಧ ವೈರಿಗಳು ಸರ್ವಜ್ಞ.

  24. rohiniyavarige nenapugalu. naanu vayassinalli bahalastu hiriya. nimmannu alla ninnannu preetiyainda’ magale’ endu kareyuva ennisuttade. nanage kannadadalli type maadi kalisalu barutilla. swalpa mattige baraha maaduttene. aadare adannu cut and paste maadalu baruttilla. illadiddare kannadadalliye uttarisuttidde. irali naavibbaru heegye chikka makkalu maatanaaduvante tappu tappaagi muddu muddaagiye (kannadavannu englishnalli type maadi) vyavaharisona. irali. ninna baravanigeya bagge hemme ennisuttade. Ninna bhaavanige bahalastu arthagarbhitavaagiddu manasinalli acchaliyade nilluvantiruttade.naanu vruttiyalli paatrakartha. kelavondu nanna anisikegalannu nann bog nalli haakiruttene. neenomme ninna drushti haayisuvante kelilokolluttene. naaneega amerika pravaasadaliddene. illina kelavondu vishyagalabagge vinimaya maadikollalu bayasuttene. ninage abhyantaravilladiddare ninna abhipraaya tilisu. ninage mangalavaagali. inti ninna nnu nirantaravaagi harasa bayasuva hiriya kannadiga.nanna blog Navyasamaja.blogspot.com (nenepirali.)

  25. rohiniyavare nanna e patrakke uttara baralilla kaaranvenu? tilisi
    inti tamma shreyobhilaashi
    sampath.

  26. ನಮಸ್ತೆ ಸಂಪತ್ ಸರ್ ಕೆಲಸದ ಒತ್ತಡದಿಂದ ಉತ್ತರಿಸೋದು ತಡವಾಯಿತು. ಕ್ಷಮೆ ಇರಲಿ

    ನಿಮ್ಮ ಅಸೆಯಂತೆಯೇ ಚಿಕ್ಕ ಮಕ್ಕಳು ಮಾತನಾಡುವಂತೆ ತಪ್ಪು ತಪ್ಪಾಗಿ ಮುದ್ದು ಮುದ್ದಾಗಿಯೇ ಮಾತಾಡೋಣ ನೀವು ದೊಡ್ಡೋರು ಅದರಲ್ಲೂ ಪತ್ರಕರ್ತರು ನನ್ನ ಬರವಣಿಗೆನ ಮೆಚ್ಚಿದ್ದೀರಿ ಎಂದರೆ ನಾನು ಎಷ್ಟು ಖುಷಿ ಪಡಲ್ಲ ಹೇಳಿ.ಖಂಡಿತ ನನಗೂ ನಿಮ್ಮಿಂದ ಕೆಲವು ವಿಷಯ ಕಲಿಯೋದಿದೆ ಖಂಡಿತ ನಿಮ್ಮ ಜೊತೆ ವಿಷಯ ವಿನಿಮಯ ಮಾಡಲು ಬಯಸುತ್ತೇನೆ. ಹಾಗೇ ಯಾವಾಗಲೂ ನನ್ನನ್ನ ಹರಸುತ್ತಿರಿ ಅಶೀರ್ವದಿಸುತ್ತಿರಿ.

  27. ಮಹಾನವಮಿ ಹಬ್ಬಕ್ಕೆ ಒಂದು ದಿನ ಬಾಕಿ ಇತ್ತು,ನಾನು ಕಾಲೇಜಿಗೆ ಹೋಗಿದ್ದೆ.ಆಗ ನನ್ನ ಮಾತಾಪಿತರು ನನ್ನ ತಮ್ಮನನ್ನು ಬಟ್ಟೆ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಬಟ್ಟೆ ತೆಗೆದುಕೊಟ್ಟು ಹಾಗೆ ಊರಿನ ಬಸ್ ಹತ್ತಿಸಿ ಕಳಿಸಿದ್ದರು,ನಂತರ ಮನೆಗೆ ಬಂದು ಅಣ್ಣನಿಗೆ ಹಣ ಕೊಟ್ಟು ಗುರುನ [nannannu ]ಊರಿಗೆ ಕಳಿಸಿ ನಂತರ ನೀನು ಹೊಸ ಬಟ್ಟೆ ತೆಗೆದುಕೊಂಡು ಹಾಕಿಕೊಂಡು ಊರಿಗೆ ಬಾ ..ಎಂದು ಹೇಳಿ ಅವನಿಗೆ ಹೇಳಿ ಹಣ ಕೊಟ್ಟು ಅವರು ಊರಿಗೆ ಹೋಗಿದ್ದರು.

    ನಾನು ಕಾಲೇಜು ಮುಗಿಸಿ ಮನೆಗೆ ಬಂದು ನೋಡಿದೆ ,ಅಮ್ಮ ಅಪ್ಪ ಇರಲಿಲ್ಲ.,ಊರಿಗೆ ಎಲ್ಲ ತಯಾರಿ ಮಾಡಲು ಹೋಗಿರಬೇಕೆಂದು ತಿಳಿದು ಸ್ನಾನ ಮಾಡಿ ಹಳೆ ಬಟ್ಟೆ ಹಾಕಿಕೊಂಡು ಊರಿನ ಬಸ್ ಹತ್ತಿ ಹೊರಟೆ.
    ಊರಂಗಳದಲ್ಲಿ ತಮ್ಮ ಹೊಸ ಬಟ್ಟೆ ಹಾಕಿದ್ದನ್ನು ಕಂಡೆ ,ಚಿಕ್ಕವನು ಹಠ ಹಿಡಿದಿದ್ದಕ್ಕೆ ತೆಗೆದು ಕೊಟ್ಟಿರಬೇಕು ಎಂದು ತಿಳಿದು ಮನೆ ಕಡೆ ಹೆಜ್ಜೆ ಹಾಕಿದೆ.
    ಅಲ್ಲಿ ಅಮ್ಮ ಅಪ್ಪ ಹೊಸ ಬಟ್ಟೆ ಹಾಕಿಕೊಂಡು ತಯಾರಿ ನಡೆಸುತ್ತಿದ್ದರು.ಮನೆಗೆ ಹೋದ ಸ್ವಲ್ಪ ಹೊತ್ತಿನ ನಂತರ ಅಣ್ಣ ಬಂದ ,ಅವನ ಮೈ ಮೇಲೂ ಹೊಸ ಬಟ್ಟೆ….
    ಅಂದು ಹಬ್ಬ ಮನೆಯವರೆಲ್ಲ ಹೊಸ ಬಟ್ಟೆ ಹಾಕಿದ್ದಾರೆ,ಆದ್ರೆ..ನಾನು/“`’;?

    ವಾಸ್ತವ ಏನೆಂದರೆ ನನ್ನ ಹತ್ತಿರ ಕಡಿಮೆ ಬಟ್ಟೆ ಇದ್ದವು,ಅಣ್ಣ ಹಾಗೂ ತಮ್ಮನ ಹತ್ತಿರ ಜಾಸ್ತಿ ಬಟ್ಟೆಗಳೇ ಇದ್ದವು,ನಾನು ಅಣ್ಣನ ಹಳೆ ಬಟ್ಟೆ ಹಾಕ್ಕೊಂಡೆ ಕಾಲೇಜಿಗೆ ಹೋಗ್ತಿದ್ದೆ.
    ಮತ್ತೆ ಅಣ್ಣ ಹಾಗೂ ತಮ್ಮ ಹಾಕ್ತಿದ್ದುದು ಸಾವಿರಾರು ರೂಪಾಯಿನ ಅಧುನಿಕ ಕಾಲದ ಬಟ್ಟೆಗಳು.ಆದ್ರೆ ನಂಗೆ ಅವು ಹಿಡಿಸುತ್ತಿರಲಿಲ್ಲ ನಾನು ಕೇಳ್ತಿದ್ದುದು ಕೇವಲ ೨೫೦ ರೂಪಾಯಿನ ಬಟ್ಟೆಗಳು ..ಆದ್ರೆ ನಾನು ಕೇಳಿದಾಗ ಅಪ್ಪನ ಹತ್ತಿರ ಹಣ ಇರುತ್ತಿರಲಿಲ್ಲ,ಆದ್ರೆ ಅಣ್ಣ ಅಥವಾ ತಮ್ಮ ಕೇಳಿದರೆ ಹಣ ಬರ್ತಿತ್ತು.

  28. rohiNige asheervaadagalu.ninna javaabu nodi tumba kushiyaayitu. nanndu hechchaagi raajakeeya vishleshane yaagiddu eega namma deshada lokasabheya chunaavaneya bagge bareyuttiddene. Ninnastu sundaravaada kavanagalannaagali, aantarikadalli adagiruva supta sundara baavaneyannu vyktapadisuva saamarthya nannalliavaadaru ,kelavodu nanna bhavanegalannu padya roopadalli vyaktapadisiddeene. omme nann blognalli inuki ninna abhipraayavannu tilisu. abhipraaya vykatapadisuvalli pakshapaatakke avakaasha needade( andare naanu barediruvudella sari endu helade)neravaagi teekisuvudannu naanu bayasutteene. nanna blog navyasamaaja.blogspot.com Nanna blognalli taavu alla neenu inuki noduveyendu nabuva
    ninna mukha parichayave illadiddaru bahaldinadinda parichyastareno ambante vyvaharisuva ninna shreobhilaashi kanndiga
    d.g.sampath.

  29. rohinige hrudaya purvaka ashirvaadagalu,neenu nanna blog n moolaka kalisiruva abhipraayakke vandanegalu. nanna blog nalli “munjaaneyi0da sanjeayavarege” idara bagge ninna abhipraaya barali. adarallina prathi padyada prathi saalinalli eradane akshara onde aagiruttade. allade jivanada aarambha mattu antyagaLannu saha vykta padisiddene. idu 1970 ra adibaagadalli rachisida kavana. ” Aksharaambe” ennuva kavana’ a’aksharadinda hididu koneya akshara ‘ksha’varegide. adannu kalisuttene. ninna snehitarigu kalisu. iti, ninna Shreyobhilaashi.
    sampath.

  30. ನಾನು ಊಟಕ್ಕೆ ಕೂತೆ,ತಾಯಿ ಎನಿಸಿಕೊಂಡವರು ಅನ್ನ ತಂದು ಬಡಿಸಿ ನೆನ್ನೆಯ ಸಾಂಬಾರ್ ಅನ್ನು ತೆಗೆದುಕೊಂಡು ಬಂದರು,ಅದು ಕೆಟ್ಟು ಹೋಗಿ ಅದರ ದುರ್ವಾಸನೆ ನನ್ನ ನಾಸಿಕಕ್ಕೆ ಬಡಿಯುತ್ತಿತ್ತು.ಬಡಿಸಲೋ ಬೇಡವೋ ಎಂದು ಒಂದು ಮಾತು ಕೇಳದೆ ಅನ್ನದ ಮೇಲೆ ಸುರಿದು ಹೊರಟುಹೋದರು.ಇನ್ನೇನೋ ಕೈ ಹಾಕಬೇಕು ಅನ್ನುವಷ್ಟರಲ್ಲಿ ಅಣ್ಣ ಎನಿಸಿಕೊಂಡವನು ನನ್ನ ಪಕ್ಕ ಊಟಕ್ಕೆ ಬಂದು ಕೂತ ಅವ್ನಿಗೆ ಅನ್ನ ಬಡಿಸಿ ಸಾಂಬಾರ್ ಹಾಕಲೋ, ಮಜ್ಜಿಗೆ ಹಾಕಲೋ ಅಂತ ಕೇಳಿದರು ಅವ್ನು ಸಾಂಬಾರ್ ಅಂದ. ತರಬಾರದ ಮನಸಲ್ಲಿ ತಂದು ಸ್ವಲ್ಪ ಅನ್ನದ ಪಕ್ಕದಲ್ಲಿ ಹಾಕಿ ಚೆನ್ನಾಗಿದೆಯೋ ಇಲ್ಲವೊ ನೋಡಪ್ಪ ಚೆನ್ನಾಗಿಲ್ಲ ಅಂದ್ರೆ ಮಜ್ಜಿಗೆ ಹಾಕಿಸಿಕೊ ಅಂಥ ಹೇಳಿದರು.ಅವನು ಬಡಿಸಿದ ಕೂಡಲೇ ವಾಸನೆ ನೋಡಿಯೇ ಕೆಟ್ಟಿದೆ ಅಂತ ಹೇಳಿ ಮಜ್ಜಿಗೆ ಅನ್ನ ಊಟ ಮಾಡಿದ. ನಾನು? ನೋಡಿದೆ.ದೇವರಿಗೆ ನಾಲಿಗೆಯನ್ನ ಜಡ ಮಾಡಪ್ಪ ಎಂದು ಬೇಡಿಕೊಂಡು ತಾಯಿ ಕೊಟ್ಟಿದ್ದು ಅಮೃತ ಅಲ್ವ ಅಂತ ಕಣ್ಮುಚ್ಚಿ ಊಟ ಮಾಡಿ ಮುಗಿಸಿದೆ.ತಾಯಿಯೇ ದೇವರು ಅಲ್ವ?

  31. pratiyobbarigu amma beke beku

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s