ಹೇಗಿದ್ದೀಯ ಅಣ್ಣಾ? ನೀನು ಬೇಡ ಎಂದರು ನಾನು ನಿನ್ನ ಅಣ್ಣಾ ಅಂತಾನೆ ಕರಿಯೋದು. ನಿನ್ನ ಬರವಣಿಗೆ ನೋಡಿಯೇ ನಾನು ಬರೆಯಬೇಕು ಅನ್ನೋ ಆಸೆ ಇನ್ನು ಜಾಸ್ತಿಯಾಯಿತು . ನಿನ್ನ ಬರವಣಿಗೆ ನೋಡಿದೆ ರಿಕ್ವೆಸ್ಟ್ ಕಳಿಸಿದೆ. ನೀನು ನಿನ್ನ ಸ್ನೇಹಲೋಕಕ್ಕೆ ನನ್ನ ಸೇರಿಸಿಕೊಂಡೆ . ಹಾಗೆ ಅಮಾವಾಸ್ಯೆ ಹುಣ್ಣಿಮೆಗೆ ಒಂದೊಂದು ಸಂದೇಶಗಳು ಬರುತಿದ್ದವು ನಾನು ಮರುಸಂದೇಶ ಕಳುಹಿಸುತಿದ್ದೆ . ನಿನ್ನಲ್ಲಿ ಮಾತಾಡಬೇಕು ಅನ್ನೋ ಅಸೆ ಹಾಗೆ ಇತ್ತು . ಹೀಗೆ ಒಂದು ದಿನ ಹೇಗೋ ನಿನ್ನ ಫೋನ್ ನಂಬರ್ ಸಿಕ್ಕಿತು.ಆಗ ಆದ ಸಂತೋಷ ಅಷ್ಟಿಷ್ಟಲ್ಲ. ಕೂಡಲೇ ಫೋನ್ ಮಾಡಿದೆ. ಈಗಲೂ ನೆನಪಿದೆ ಆವತ್ತು ನೀನು ನನ್ನ ಮಂಗಳೂರ ನಕ್ಷತ್ರ ಅಂದಿದ್ದೆ . ನಾನು ನಿನ್ನ ಅಣ್ಣಾ ಅಂದಿದಕ್ಕೆ ನೀನು ನನ್ನ ಅಕ್ಕ ಅಂತ ಕರೆದೆ. ನಂತರದ ದಿನಗಳಲ್ಲಿ ನಿನ್ನ ಜೊತೆ ಯಾವಾಗ ಮಾತಾಡೋದು ಅಂತ ಕಾಯುತಿದ್ದೆ . ಮನಸಲ್ಲಿ ಏನೆ ಕಿರಿ ಕಿರಿ ಇದ್ದರೂ ನಿನ್ನ ಜೊತೆ ಮಾತನಾಡುವಾಗ ಎಲ್ಲ ಮರೆತು ಹೋಗುತ್ತೆ . ನಿನಗೊಂದು ವಿಷಯ ಗೊತ್ತಾ? ನನಗ್ಯಾವತ್ತು ತುಂಬಾ ಬೇಜಾರಾಗಿರುತ್ತೋ ಆವತ್ತು ನಿನ್ನ ಜೊತೆ ಮಾತಾಡಿದೆ ಅಂತ ಇಟ್ಟುಕೋ ಆವತ್ತು ಬೇಜಾರೆಲ್ಲಾ ಕಳೆದು ಮನಸ್ಸಿಗೆ ಸಮಾಧಾನವಾಗುತ್ತೆ. ನಿನ್ನ ಮಾತು ನಗು ಈ ಸಮಾಧಾನಕ್ಕೆ ಕಾರಣವಾಗಿರುತ್ತೆ. ಆವತ್ತು ನೀನು ನನ್ನ ಬಕ್ರಿ ಅಂತ ಕರೆದಿದ್ದು ಅಳೋತರ ನಟನೆಮಾಡಿ ನನ್ನ ಗೋಳುಹೊಯಿಕೊಂಡಿದ್ದು. ಹಾಗೇ ಆಂಟಿ ಅಂಕಲ್ ಎಲ್ಲಿ? ಆಂಟಿ ನಿಮಗೆಷ್ಟು ಮಕ್ಕಳು? ಅದರಲ್ಲಿ ಎಷ್ಟು ತಿಕ್ಲು ಎಷ್ಟು ಪಿಕ್ಲು ಈ ಮಾತುಗಳನೆಲ್ಲ ನನ್ನ ಉಸಿರುವವರೆಗೂ ಮರೆಯೋಹಾಗಿಲ್ಲ . ಆದರೆ ಇವೆಲ್ಲಾ ಕ್ಷಣಿಕ ನೆನಪುಗಳಾ? ಅಲ್ಲ ಅಲ್ವಾ ಇಂತಹ ನೆನಪುಗಳು ಇನ್ನು ಹೆಚ್ಹು ಹೆಚ್ಹು ಬರಬೇಕು . ನಿನ್ನ ಜೊತೆ ಮಾತಾಡದೆ ವಾರಗಳೇ ಕಳೆದವು. ನಿನ್ನ ಜೊತೆ ಮಾತಾಡಬೇಕು ನಿನ್ನ ನಗು ಕೇಳಿಸಿಕೊಳ್ಳಬೇಕು ಅನ್ನೋ ಆಸೆ . ಏನೇ ಆಗಲಿ ಯಾವುದೇ ಆಗಲಿ ಸ್ವಲ್ಪ ದಿನ ದೂರ ಇದ್ದರೇನೆ ಅದರ ಪ್ರಾಮುಖ್ಯತೆ ಹೆಚ್ಚಾಗುತದಂತೆ ಅಲ್ವೇನೋ ಹಗಂತಾನೆ ಕಾಯ್ತಾ ಇದ್ದೀನಿ . ನನ್ನ ಜೊತೆ ಮಾತಾಡಬೇಕು ಅಂತ ಅನಿಸಿದರೆ ಒಂದೇ ಒಂದು ಸಂದೇಶ ಕಳುಹಿಸು ಕೂಡಲೇ ಫೋನ್ ಮಾಡುತ್ತೀನಿ .
ನಿನ್ನ ಸಂದೇಶಕ್ಕಾಗಿ ಕಾತರಿಸುತ್ತಿರುವ
ಮಂಗಳೂರ ನಕ್ಷತ್ರ
ನಿನ್ನ ಸಂದೇಶಕ್ಕಾಗಿ ಕಾತರಿಸುತ್ತಿರುವ
ಮಂಗಳೂರ ನಕ್ಷತ್ರ
ಅಣ್ಣನ ಫೋನ್ ನಂಬರ್ ಕೊಡವ್ವ… ನಾನು ಝಾಡಿಸ್ತೀನಿ ಅವನಿಗೆ…!:)
ಬೇಡ ಫ್ರೆಂಡು ಅವ್ನು ಬ್ಯುಸಿ ಇರ್ತಾನಂತೆ ಅದಿಕ್ಕೆ ನಾನೇ ಹೊಂದ್ಕೊಂಡು ಹೋಗ್ಬೇಕು ಅಂತ ನಿರ್ಧಾರ ಮಾಡಿದ್ದೀನಿ. ಹಾಗಾಗಿ ಅವನ ಸಂದೇಶಕ್ಕಾಗಿ ಕಾಯ್ತಾ ಇರ್ತೀನಿ
ರೋಹಿಣಿ,
ತಂಗಿ ಇಷ್ಟೊಂದು ಪ್ರೀತಿಯಿಂದ ಕರೆದಾಗ ಯಾವ ಅಣ್ಣ ದನಿಯಾಗದಿರುತ್ತಾನೆ, ಆದಷ್ಟು ಬೇಗ ನಿಮ್ಮ ಅಣ್ಣನ ಸಂದೇಶ ಮತ್ತು ಫೋನ್ ಕರೆ ಎಲ್ಲ ಬರುತ್ತದೆ ಮತ್ತು ಬರಲಿ ಎಂಬ ಹಾರೈಕೆ ನನ್ನದು…
-ರಾಜೇಶ್ ಮಂಜುನಾಥ್
rohini? adyaaru ? nina hinge kaadta iro goobe anta ana? che che ishtolle tangi ge inta kett anna naa? ond ph maadi matadoken roga avanige?
ಧನ್ಯವಾದಗಳು ರಾಜೇಶ್
ನಿಮ್ಮ ಹಾರೈಕೆ ಕೇಳಿರಬೇಕು ಈಗ ನನ್ನ ಅಣ್ಣ ಮಾತಾಡುತ್ತಾನೆ
ಧನ್ಯವಾದಗಳು ಸೋಮಣ್ಣ
ಬೇಡ ಸೋಮಣ್ಣ ನನ್ನ ಅಣ್ಣಂಗೆ ನೀನೇನು ಗೂಬೆ ಅನ್ನೋದು
ರೋಹಿಣಿ ಪುಟ್ಟಿ….
ನೀವು ಅಣ್ಣನ ಬಗ್ಗೆ ಬರೆದ ಪತ್ರ ಓದಿ ಮನಸ್ಸು ಭಾರವಾಯಿತು….ನಿನಗೊಬ್ಬ ಅಣ್ಣ ಇದ್ದಾನೆ…..ಅದೃಷ್ಟವಂತಳು….ಪ್ರೀತಿಕೊಡುವವರು ಸಿಕ್ಕಾಗ ಎರಡು ಕೈಗಳಿಂದ ಬಾಚಿ ಅಪ್ಪಿಕೊಂಡುಬಿಡಬೇಕಂತೆ…..ನಿಮ್ಮಿಬ್ಬರ ಮಧುರ ಭಾಂಧವ್ಯ ಹೀಗೆ ನೂರ್ಕಾಲ ಇರಲಿ……
ಇಂಥ ಲೇಖನಗಳನ್ನು ಓದುತ್ತಾ…..ನನ್ನ ತಂಗಿ ನೆನಪಾಗಿ ನನಗೆ ಅರಿವಿಲ್ಲದಂತೆ ಕಣ್ಣು ತುಂಬಿರುತ್ತದೆ………ಕ್ಷಮಿಸಿ
ಹಾಯ್ ..’ಮಂಗಳೂರ ನಕ್ಷತ್ರ’..ಏರ್ ಉಂದು ಯಾನ್ ಲಾ ಅವುಲೇ..
ಪತ್ರ ಓದಿ ಖುಷಿಯಾಯಿತು..ನಂಗೂ ಇಂಥ ಒಬ್ಬ ಅಣ್ಣ ಸಿಕ್ಕಿದ್ದಾನೆ..ನಾನು ಸ್ನೇಹಿತರನ್ನು ಸಂಪಾದಿಸೋದಕ್ಕಿಂತ ಅಣ್ಣಂದಿರನ್ನು ಸಂಪಾದಿಸಿದ್ದೇ ಹೆಚ್ಚು..ನಂಗೆ ಅಣ್ಣನ ಪ್ರೀತಿ, ತರ್ಲೆ ತುಂಬಾನೇ ಇಷ್ಟ ಕಣಮ್ಮಿ..ಎಷ್ಟೋ ಕೋಪ ಬಂದ್ರೂ ಅಣ್ಣನತ್ರ ಆ ಕ್ಷಣನೇ ಜಗಳ ಮಾಡು..ಅವನ ಸಂದೇಶಕ್ಕಾಗಿ ಕಾಯಬೇಡ ಆಯಿತಾ..? ಗುಡ್..
ಖಂಡಿತ ಶಿವೂ ಅಣ್ಣ
ನಿಮ್ಮ ಹಾರೈಕೆಯಂತೆ ನಮ್ಮ ಈ ಅಣ್ಣ ತಂಗಿ ಭಾಂದವ್ಯ ಹೀಗೆ ಇರುತ್ತೆ ಹಾಗೇ ಆ ಅಣ್ಣನ ಜೊತೆ ಈ ಅಣ್ಣನು ಸೇರಿಕೊಂಡರೆ ಇನ್ನೂ ಸಂತೋಷ. ನಿಮ್ಮ ತಂಗಿಯ ಸ್ಥಾನನ ನಾನು ತುಂಬಬಲ್ಲೆನೇ ?
ಹಾಯ್ ಚಿತ್ರಕ್ಕ
ಯನ್ಲ ಕುಡ್ಲ ದಾಲೆ ಮಸ್ತ್ ಥ್ಯಾಂಕ್ಸ್ ಎನ್ನ ಬ್ಲಾಗ್ ವಿಸಿಟ್ ಮಲ್ತಿನೆಕ್
‘ಮಂಗಳೂರ ನಕ್ಷತ್ರ!! ’ ಚೆನ್ನಾಗಿದೆ ಹೆಸರು:)
ನಾನು ಮಂಗಳೂರಿನ ಧೂಮಕೇತು.
ನಮಸ್ತೆ ಸಂದೀಪಣ್ಣ
ಹೆಸರು ಇಷ್ಟ ಆಯ್ತಾ ಹವ್ದು ತಾನೆ ನಾನೇ ಮಂಗಳೂರ ನಕ್ಷತ್ರ
ಇದೇನಿದು…ನಾನು ನಿನ್ನ್ನ್ ಮೊದಲಿನ ಅಣ್ಣ ಮತ್ತೆ ನೀನು ಬರೆದ ಪತ್ರದಲ್ಲಿರೋ ಅಣ್ಣ ನಿಜಾ …ಎಲ್ಲಾರ್ಗು ನೀನ್ ಹೀಗೆ ಅಣ್ಣಾ ಅಂತ ಕರೆದ್ರೆ ನನ್ಗೆ ಭಾವ ಅನ್ನೋಕೆ ಯಾರು ಇರಲ್ವಲ್ಲ ತಂಗ್ಯಮ್ಮಾ?
ಯಾಕೋ ಸೊಮಣ್ಣ
ಹೊಟ್ಟೆ ಉರ್ಕೋಳ್ತೀಯ ನಿನ್ಗೆ ಬಾವ ಅಂತ ಕರಿಯೋಕೆ ಒಬ್ಬರು ಇದ್ದಾರೆ ಕಣೊ. ಸ್ವಲ್ಪ ದಿನ ತಡ್ಕೊಳ್ಳೋ