Category Archives: ಪತ್ರಗಳು

ಉಸಿರಿಗೆ ಉಸಿರಾಗುವ ಆಸೆ!

ಅಶು ಹೇಗಿದ್ದಿಯಾ? ನಿನ್ನ ಬಗ್ಗೆಯೇ ಯೋಚನೆ ಮಾಡುತ್ತಾ ಕೂತಿದ್ದೆ. ಯಾಕೆ ಹೀಗೆ ನಡೆದುಕೊಳ್ಳುತ್ತಿದ್ದೀಯಾ? ನಿನ್ನನ್ನು ದಿನದಲ್ಲಿ ಒಂದು ಸಲ ನೊಡದೆ ಇರಲು ಮತನಾಡದೆ ಇರಲು ಸಾಧ್ಯವಾಗೋದಿಲ್ಲ. ಆದರೆ ನಿನಗೆ ಯಾಕೋ ಹಾಗನ್ನಿಸುತ್ತಿಲ್ಲ? ನಾನು ಎನೆಂದು ಅರ್ಥಮಾಡಿಕೊಳ್ಳಲಿ? ನಿನ್ನ ಮಾತು ದಿನವಿದ್ದ ಹಾಗೆ ದಿನವಿಲ್ಲ ಅನ್ನುವ ಹಾಗಿದೆ. ಇವತ್ತೊಂದು ಮಾತು ಹೇಳಿದರೆ ನಾಳೆ ಇನ್ನೊಂದು ಮಾತಾಡುತ್ತೀಯಾ ಏನು ಅಂತ ತಿಳಿಯಲಿ? ನೀನೆ ನನ್ನ ಜೀವ ಅನ್ನುತ್ತೀಯಾ ಇನ್ನೊಂದು ದಿನ ಈ ನಿನ್ನ ಜೀವವನ್ನ ಇನ್ನೊಬ್ಬರ ಕೈಗಿಡುತ್ತೇನೆ, ನಿನಗೆ ಒಳ್ಳೆಯದಾಗಬೇಕು ನಿನ್ನ ಪ್ರೀತಿಯಿಂದ ನೋಡಿಕೊಳ್ಳೊರನ್ನು ನಾನೇ ಹುಡುಕುತ್ತೀನಿ ಅನ್ನುತೀಯ.

ಅರಿಯಲಾರೆ ನಿನ್ನ ಮಾತನ್ನ
ತಿಲಿಯಲಾರೆ ನಿನ್ನ ಮನಸ್ಸನ್ನ

ಯಾಕೆ ನೀನು ನನಗೆ ಫೋನ್ ಮಾಡೋದಿಲ್ಲ ಅನ್ನುತ್ತಿಯಾ ಫೋನ್ ಮಾಡಿದರೆ ಏನಾದರು ಹೇಳೊದಿದೆಯೇ ಅಂತ ಕೇಳುತ್ತೀಯಾ ಇಲ್ಲಯೆಂದರೆ ಈಗ ಬ್ಯುಸಿ ಇದ್ದೀನಿ ಆಮೇಲೆ ಮಾಡುತ್ತೇನೆ ಎಂದು ಫೋನ್ ಇಟ್ಟುಬಿಡುತ್ತೀಯಾ! ಮಾತಾಡೋಣ ಅಂತ ಆಸೆಯಿಂದ ಕರೆಮಾಡಿದರೆ ನಿರಾಸೆ ಮಾಡುತ್ತೀಯಾ. ಇರಲಿ ಚಿಂತಿಲ್ಲ ಆದರೆ ಯಾಕೋ ನೀನು ನನ್ನ ಮುಂದೆ ಬೇರೆ ಹುಡುಗಿಯರನ್ನ ಹೊಗಳಿ ನನಗೆ ಅಸೂಯೆ ಹುಟ್ಟಿಸುತ್ತೀಯ. ನಾನು ಫೋನ್ ಮಾಡಿದಾಗ ಬ್ಯುಸಿ ಇದ್ದೀನಿ ಅಂತಿಯಾ. ಆದರೆ ನೀನು ಬ್ಯುಸಿ ಇದ್ದಾಗ ಬೇರೆ ಯಾರೆ ಫೋನ್ ಮಾಡಿದರೆ ಗಂಟೆ ಗಟ್ಟಲೆ ಮಾತಾಡುತ್ತೀಯಾ. ಇದೇನು ನಾನು ಬೇಜಾರು ಮಾಡಿಕೊಳ್ಳೊದಿಲ್ಲ ಅನ್ನೋ ನಂಬಿಕೆನಾ ಅಥವಾ ನನ್ನ ಬಗ್ಗೆ ತಿರಸ್ಕಾರನೋ ಗೊತ್ತಾಗ್ತಿಲ್ಲ. ನನ್ನ ಹ್ರದಯಕ್ಕೆ ಪ್ರಾಣ ಇರೋ ತನಕ ಈ ಹ್ರದಯದಲ್ಲಿರೋ ಜಾಗ ನಿನಗಾಗಿ ಮಾತ್ರ ಅದನ್ನ ಯಾರಿಗೋ ಬಿಟ್ಟು ಕೋಡಲಾಗುದಿಲ್ಲ. ಅಲ್ಲ ಕಣೋ ನೀನೆ ನನಗೆ ಹುಡುಗ ಹುಡುಕುತ್ತಿಯಾ ನಿನ್ನ ಬಿಟ್ಟು ಹೇಗೆ ಹೋಗಲಿ ಹೇಗೆ ಒಪ್ಪಲಿ ನಿನ್ನ ಮನಸ್ಸಿಗೆ ನೋವಾಗಬರದೆಂದು ಒಪ್ಪಿದರೆ ನೀನು ನಂತರ ಬಂದು ಆತನನ್ನು ಮದುವೆ ಆಗದಂತೆ ನಿರ್ಬಂಧ ಹೊರಿಸುತ್ತಿಯ. ಏನೆಂದು ಅರ್ಥೈಸಲಿನಿನ್ನ? ನಿನ್ನನ್ನು ಎನೂಂತ ಕರೆಯಲಿ ಗೆಳೆಯನಾ, ಪ್ರಿಯಕರನ, ಅಥವಾ ಹಿತೈಷಿನ. ಏನೇ ಆಗಿರು ಆದರೆ ನಾನು ಉಸಿರಾಡೋದನ್ನ ನಿಲ್ಲಿಸೋತನಕ ನಿನ್ನನ್ನೇ ಆರಾಧಿಸುವೆ ಪ್ರೀತಿಸುವೆ. ನೀನು ನಿನ್ನ ಮನಸ್ಸಿಂದ ನಾನು ನಿನ್ನ ಪ್ರೀತಿಸುವೆ ಎಂದು ಹೇಳುವ ತನಕ ಕಾಯುವೆ ನಾನಾಗಿ ಹೇಳಲಾರೆ ಯಾಕೆಂದರೆ ನಿನ್ನ ಮನಸಲ್ಲಿ ಏನಿದೆಯೆಂದು ನನಗೆ ತಿಳಿಯದು. ಆದಷ್ಟು ಬೇಗ ನಿನ್ನ ಜೀವಕ್ಕೆ ಜೀವ, ಆತ್ಮಕ್ಕೆ ಆತ್ಮ, ಉಸಿರಿಗೆ ಉಸಿರಾಗುವ ಆಸೆ! ನಿನ್ನ ಮನಸ್ಸಿಂದ ನಿನ್ನ ಹ್ರದಯದಿಂದ ಬರುವ ಮಾತಿ(ಉತ್ತರ)ಗಾಗಿ ಕಾಯುತ್ತಿರುವ
ಇಂತೀ ನಿನ್ನ ಉಸಿರಿಗೆ ಉಸಿರಾಗುವಾ
ಅಂಜು

ಬೇಜಾರಲ್ಲಿ ಬರೆದ ಪತ್ರ (ಅಣ್ಣನಿಗಾಗಿ)

ಹೇಗಿದ್ದೀಯ ಅಣ್ಣಾ? ನೀನು ಬೇಡ ಎಂದರು ನಾನು ನಿನ್ನ ಅಣ್ಣಾ ಅಂತಾನೆ ಕರಿಯೋದು. ನಿನ್ನ ಬರವಣಿಗೆ ನೋಡಿಯೇ ನಾನು ಬರೆಯಬೇಕು ಅನ್ನೋ ಆಸೆ ಇನ್ನು ಜಾಸ್ತಿಯಾಯಿತು . ನಿನ್ನ ಬರವಣಿಗೆ ನೋಡಿದೆ ರಿಕ್ವೆಸ್ಟ್ ಕಳಿಸಿದೆ. ನೀನು ನಿನ್ನ ಸ್ನೇಹಲೋಕಕ್ಕೆ ನನ್ನ ಸೇರಿಸಿಕೊಂಡೆ . ಹಾಗೆ ಅಮಾವಾಸ್ಯೆ ಹುಣ್ಣಿಮೆಗೆ ಒಂದೊಂದು ಸಂದೇಶಗಳು ಬರುತಿದ್ದವು ನಾನು ಮರುಸಂದೇಶ ಕಳುಹಿಸುತಿದ್ದೆ . ನಿನ್ನಲ್ಲಿ ಮಾತಾಡಬೇಕು ಅನ್ನೋ ಅಸೆ ಹಾಗೆ ಇತ್ತು . ಹೀಗೆ ಒಂದು ದಿನ ಹೇಗೋ ನಿನ್ನ ಫೋನ್ ನಂಬರ್ ಸಿಕ್ಕಿತು.ಆಗ ಆದ ಸಂತೋಷ ಅಷ್ಟಿಷ್ಟಲ್ಲ. ಕೂಡಲೇ ಫೋನ್ ಮಾಡಿದೆ. ಈಗಲೂ ನೆನಪಿದೆ ಆವತ್ತು ನೀನು ನನ್ನ ಮಂಗಳೂರ ನಕ್ಷತ್ರ ಅಂದಿದ್ದೆ . ನಾನು ನಿನ್ನ ಅಣ್ಣಾ ಅಂದಿದಕ್ಕೆ ನೀನು ನನ್ನ ಅಕ್ಕ ಅಂತ ಕರೆದೆ. ನಂತರದ ದಿನಗಳಲ್ಲಿ ನಿನ್ನ ಜೊತೆ ಯಾವಾಗ ಮಾತಾಡೋದು ಅಂತ ಕಾಯುತಿದ್ದೆ . ಮನಸಲ್ಲಿ ಏನೆ ಕಿರಿ ಕಿರಿ ಇದ್ದರೂ ನಿನ್ನ ಜೊತೆ ಮಾತನಾಡುವಾಗ ಎಲ್ಲ ಮರೆತು ಹೋಗುತ್ತೆ . ನಿನಗೊಂದು ವಿಷಯ ಗೊತ್ತಾ? ನನಗ್ಯಾವತ್ತು ತುಂಬಾ ಬೇಜಾರಾಗಿರುತ್ತೋ ಆವತ್ತು ನಿನ್ನ ಜೊತೆ ಮಾತಾಡಿದೆ ಅಂತ ಇಟ್ಟುಕೋ ಆವತ್ತು ಬೇಜಾರೆಲ್ಲಾ ಕಳೆದು ಮನಸ್ಸಿಗೆ ಸಮಾಧಾನವಾಗುತ್ತೆ. ನಿನ್ನ ಮಾತು ನಗು ಈ ಸಮಾಧಾನಕ್ಕೆ ಕಾರಣವಾಗಿರುತ್ತೆ. ಆವತ್ತು ನೀನು ನನ್ನ ಬಕ್ರಿ ಅಂತ ಕರೆದಿದ್ದು ಅಳೋತರ ನಟನೆಮಾಡಿ ನನ್ನ ಗೋಳುಹೊಯಿಕೊಂಡಿದ್ದು. ಹಾಗೇ ಆಂಟಿ ಅಂಕಲ್ ಎಲ್ಲಿ? ಆಂಟಿ ನಿಮಗೆಷ್ಟು ಮಕ್ಕಳು? ಅದರಲ್ಲಿ ಎಷ್ಟು ತಿಕ್ಲು ಎಷ್ಟು ಪಿಕ್ಲು ಈ ಮಾತುಗಳನೆಲ್ಲ ನನ್ನ ಉಸಿರುವವರೆಗೂ ಮರೆಯೋಹಾಗಿಲ್ಲ . ಆದರೆ ಇವೆಲ್ಲಾ ಕ್ಷಣಿಕ ನೆನಪುಗಳಾ? ಅಲ್ಲ ಅಲ್ವಾ ಇಂತಹ ನೆನಪುಗಳು ಇನ್ನು ಹೆಚ್ಹು ಹೆಚ್ಹು ಬರಬೇಕು . ನಿನ್ನ ಜೊತೆ ಮಾತಾಡದೆ ವಾರಗಳೇ ಕಳೆದವು. ನಿನ್ನ ಜೊತೆ ಮಾತಾಡಬೇಕು ನಿನ್ನ ನಗು ಕೇಳಿಸಿಕೊಳ್ಳಬೇಕು ಅನ್ನೋ ಆಸೆ . ಏನೇ ಆಗಲಿ ಯಾವುದೇ ಆಗಲಿ ಸ್ವಲ್ಪ ದಿನ ದೂರ ಇದ್ದರೇನೆ ಅದರ ಪ್ರಾಮುಖ್ಯತೆ ಹೆಚ್ಚಾಗುತದಂತೆ ಅಲ್ವೇನೋ ಹಗಂತಾನೆ ಕಾಯ್ತಾ ಇದ್ದೀನಿ . ನನ್ನ ಜೊತೆ ಮಾತಾಡಬೇಕು ಅಂತ ಅನಿಸಿದರೆ ಒಂದೇ ಒಂದು ಸಂದೇಶ ಕಳುಹಿಸು ಕೂಡಲೇ ಫೋನ್ ಮಾಡುತ್ತೀನಿ .
ನಿನ್ನ ಸಂದೇಶಕ್ಕಾಗಿ ಕಾತರಿಸುತ್ತಿರುವ
ಮಂಗಳೂರ ನಕ್ಷತ್ರ