Category Archives: ಕವನ

ಯಾರೋ ಬರೆದಿದ್ದು ನೆನಪು ಬರ್ತಾ ಇಲ್ಲ. ಆದರು ಮನಸ್ಸಿಗೆ ಹಿಡಿಸಿದ ಸಾಲುಗಳು!!!

ಕವನಗಳನ್ನ ಸಂಗ್ರಹಿಸೋದು ನನ್ನ ಹವ್ಯಾಸ. ನಾನು ಸಂಗ್ರಹಿಸಿರೋದ್ರಲ್ಲಿ ನನಗೆ ಹಿಡಿಸಿದ ನಾಲ್ಕು ಹನಿಗವನ  

 

 

ಮಾತು!!!!!!!

 

 

ಸ್ಮಶಾನದಲ್ಲಿ ಕಣ್ಣೀರಿನ ಮಾತು
ತೊಟ್ಟಿಲಿನಲಿ ಮಗುವಿನ ನಗುವಿನ ಮಾತು
ಬೆಳಗಿನ ಜಾವದಲಿ ಮಂಜಿನ ಮಾತು
ಸಂಜೆಗತ್ತಲಿನ ಮಬ್ಬಿನ ಮಾತು
ಹುಣ್ಣಿಮೆ ರಾತ್ರಿಯ ಬೆಳದಿಂಗಳ ಮಾತು
ಅಮಾವಾಸ್ಯೆಯ ಕಾರ್ಗತ್ತಲಿನ ಮಾತು
ಮಾತಿನ ಮತ್ತು
ತಿಳಿದವರಿಗೆ ಗೊತ್ತು
ಕಳೆಸುವುದು ಹೊತ್ತು
ಇದರಿಂದ ಬೇರೆ ಕೆಲಸಗಳಿಗೆ ಕುತ್ತು
ಎಲ್ಲೆಲ್ಲೂ ಮೌನದ ಮಾತು

ಮಾತುಗಳು
ಮರೆತುಹೋಗಿವೆ.
ಕವನಗ್ಳು ಕಳೆಗುಂದಿವೆ.
ಶಾಯರಿಗಳಲ್ಲಿ ಸತ್ವವಿಲ್ಲ.
ಗಝಲ್ ಗಳು ಗೂಡು ಸೇರಿವೆ.
ಈಗ ಉಳಿದಿರುವುದು
ಕೇವಲ ನನ್ನನಿನ್ನ ಮೌನ ಸಂಭಾಷಣೆ.

ಪ್ರೀತಿ!!!!!!!!
  

ಪ್ರೀತಿಯೆಂದರೆ……
ಸಾಗರದಷ್ಟು ಆಳ
ಆಗಸದಷ್ಟು ವಿಶಾಲ
ಹೇಳಿಕೊಂಡರೆ ಗೊಂದಲ
ಹೇಳದಿರೆ ತಳಮಳ
ಅರಿತರೆ ನಿರಾಳ
ಅರಿಯದಿರೆ ಕರಾಳ
ಪ್ರೀತಿಯೆಂದರೆ………
ಅದೊಂದು ಗಾಳ!
ಸಿಲುಕಿದರೆ ಬಿಡಿಸಲಾರದ ಬಂಧ
ಸಿಲುಕದಿರೆ ನೋವು ಅನಂತ

ನೀ ಜೊತೆ ಇದ್ದಾಗ
ನಿನ್ನನ್ನೇ ಕೇಳುತ್ತಿದ್ದೆ
ಗೆಳತಿ ಪ್ರೀತಿ ಎಂದರೆ
ಏನೆಂದು . . .
ನೀ ನನ್ನನ್ನು
ಅಗಲಿದಾಗ
ನನಗನ್ನಿಸಿತು
ಅದು ನೀನೇಎಂದು.

ಮನದಾಳದ ಮಾತು

ತುಟಿಯಂಚಲ್ಲಿ ಬಂದ ಮಾತು
ಹೊರಹಾಕಲಾಗದ ಮಾತು
ಮನದಲ್ಲೇ ಮೌನದಿಂದ ಆಡಿದ ಮಾತು
ನನ್ನ ಜೀವನದ ಗುಟ್ಟಾಯಿತು ಈ ಮಾತು
ನಲ್ಲನಿಗೆ ಹೇಳಿ ಬಿಡು ಅಂದಿತ್ತು ಮನದ ಮಾತು
ಈಗ ಹೇಳಿಯೇ ಬಿಡುವೆ ನನ್ನ ಹೃದಯದ ಮಾತು
ಆದರೆ ನಲ್ಲನಾಡಿದ ಮಾತು
ನನ್ನ ಮನದಾಳದ ಮಾತ ಬಚ್ಚಿಡಲು ಪ್ರಯತ್ನಿಸಿತು
ತುಟಿಯಂಚಲ್ಲಿ ಬಂದ ಮಾತು
ನನ್ನ ಮನದಲ್ಲೇ ಸತ್ತು ಹೋಯಿತು
ನನ್ನ ಮನದಾಳದ ಮಾತು

*************************

ಅ೦ದುಕೊಳ್ಳುವುದೊ೦ದು,
ಆಗುವುದು ಇನ್ನೊ೦ದು,
ಹುಡುಕಿ ಹೋದರೆ ಅಲ್ಲಿ
ಸಿಗುವುದು ಮತ್ತೊ೦ದು. !!!
ಬಯಸುವುದು ಮೂರು
ಬೇಕಾಗಿರುವುದು ನೂರು
ಹುಡುಕಿ ಹೋದರೆ ಅಲ್ಲಿ
ಸಿಗುವುದು ಸಾವಿರಾರು

**************************

ನಾನು ಸಂಗ್ರಹಿಸಿರೋ ನನ್ನ ಭಾವನೆಗಳ ಮಾತು

ನೀ ಕಷ್ಟದಲ್ಲಿದ್ದಾಗ
ದೇವರು ಸಹಾಯ ಮಾಡಿದರೆ
ಅವನ ಶಕ್ತಿಯ ಬಗ್ಗೆ
ನಿನಗೆ ನಂಬಿಕೆ ಬರುತ್ತೆ.
ಅದೇ ಅವನು
ನಿನಗೆ ಸಹಾಯ ಮಾಡಲು
ಸ್ವಲ್ಪ ತಡಾ ಮಾಡಿದರೂ
ನಿನ್ನ ಶಕ್ತಿಯ ಬಗ್ಗೆ
ಅಂತಹ ದೇವರಿಗೇ
ನಂಬಿಕೆಯಿದೆ ಎಂದರ್ಥ !

ನೀರಿನ ಮೇಲೆ
ಬರಯಲಾಗುವುದಿಲ್ಲ.
ಬರೆದರೂ
ಅದು ಉಳಿಯುವುದಿಲ್ಲ.
ನನ್ನದು
’ಕಲ್ಲು ಹೃದಯ’
ಎಂದು ಹೇಳುತ್ತಾರೆ ಎಲ್ಲ.
ವಿಚಿತ್ರವೆಂದರೆ,
ಕಲ್ಲಿನ ಮೇಲೆ ಬರೆದಿದ್ದು
ಎಂದಿಗೂ ಅಳಿಸಿ ಹೋಗುವುದಿಲ್ಲ!!

ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ?