ಬರಿಬೇಕು ಅಂತ ಕೂತೆ ಆದ್ರೆ ಏನ್ ಬರಿಲಿ ಅಂತ ಯೋಚನೆ ಮಾಡಿ ಮಾಡಿ ಸಾಕಾಗೋಯ್ತು . ಅಷ್ಟರಲ್ಲಿ ನನ್ನ ತಮ್ಮ ಬಂದು ನಿಂಗೆ ಈ ಬ್ಲಾಗ್ ಪ್ರಾರಂಭಿಸಲು ಯಾರು ಹೇಳಿ ಕೊಟ್ಟಿದ್ದು? ಅನ್ನೋ ಪ್ರೆಶ್ನೆನ ಮುಂದಿಟ್ಟ ಒಂದು ಒಳ್ಳೆ ವಿಷಯ ಸಿಕ್ಕಿತು ಅಂತ ಖುಷಿ ಪಟ್ಟು ಆತನಿಗೆ ಧನ್ಯವಾದ ಹೇಳಿ. ನೋಡಿ ಹೀಗೆ ಪ್ರಾರಂಭಿಸಿದೆ. ಶಾಲೆಗೆ ಹೋಗುತ್ತಿರುವಾಗಲೇ ಕವನ ಓದೋದು ಸಂಗ್ರಹಿಸೋದು ಅಂದರೆ ತುಂಬಾ ಇಷ್ಟ. ಉದಯವಾಣಿ ಪತ್ರಿಕೇಲಿ ಬರುತಿದ್ದ ಕಾವ್ಯ ಬಿಂದು ಓದುತಿದ್ದೆ. ನಾನು ಒಂದು ದಿನ ಹೀಗೆ ಬರೀಬೇಕು ಅಂತ ಅಸೆ ಪಡುತಿದ್ದೆ. ಆದರೆ ಏನು ಬರೆಯುವುದೆಂದು ಗೊತ್ತಾಗುತ್ತಿರಲಿಲ್ಲ ಏನಾದ್ರು ಬರೆದರು ಅದನ್ನ ಯಾರಿಗೂ ತೋರಿಸಲು ಭಯ ಯಾಕೆಂದರೆ ಎಲ್ಲರೂ ತಮಾಷೆ ಮಾಡುತ್ತಿದ್ದರು. ಹಾಗೇ ನನ್ನ ಆಸೇನ ಅಲ್ಲೇ ಮುಚಿಡುತಿದ್ದೆ. ಹೀಗೆ ನನ್ನ ಕವನ ಹಾಗೂ ಲೇಖನ ಸಂಗ್ರಹಿಸೋ ಹುಚ್ಚು ಬೆಳೆಯುತ್ತಾ ಹೋಯಿತು. ಹೀಗೆ ಒಂದು ದಿನ ಆರ್ಕುಟ್ ನಲ್ಲಿ ಸದಸ್ಯೆಯಾದೆ. ಇಲ್ಲಿ ನನ್ನ ಏನಾದ್ರು ಬರೀಬೇಕು ಅನ್ನೋ ಅಸೆ ಮತ್ತೆ ಚಿಗುರೊಡೆಯಿತು ಅದಿಕ್ಕೆ ಮೊದಲ ಕಾರಣ ನವಿಲೂರ ಹುಡುಗ ಸೋಮಣ್ಣ ನ ಹಾಗೂ ಹರೀಶ್ ರವರ ಬರಹ. ನಾನು ಹೀಗೆ ಬರೀಬೇಕು ಅಂತ ಬರೆಯಲು ಪ್ರಾರಂಭಿಸಿದೆ. ಮೊದಲನೆಯದಾಗೆ ಸೋಮಣ್ಣನಿಗೆ ಪತ್ರ ಬರೆದೆ. ನಂತರ ಇನ್ನೂ ಬರೀಬೇಕು ಅಂತ ಅಸೆ ಬೆಳೆಯಿತು ಹಾಗಾಗಿ ಬರಿತ ಇದ್ದೆ. ಹೀಗೆ ಬರೆದಿದ್ದನ್ನು ಒಂದು ಕಡೆ ಸಂಗ್ರಹಿಸಿಡೋಕೆ ಸಹಾಯ ಮಾಡಿದೋರು ರಂಜಿತ್ ರವರು. ನಂತರದ ದಿನಗಳಲ್ಲಿ ರಾಜೇಶ್, ಜ್ಞಾನಮುರ್ತಿ, ರಂಜಿತ್, ಇಂಚರ ಸೋಮಣ್ಣ ಇವರೆಲ್ಲರ ಬರಹ ಹಾಗೂ ಪ್ರೋತ್ಸಾಹ ಇನ್ನಷ್ಟು ಬರೆಯಬೇಕು ಅನ್ನೋ ಆಸೆ ಹುಟ್ಟಿಸಿತು. ಹಾಗೇ ಬರೆಯುತ್ತಾ ಇದ್ದೇನೆ. ನನ್ನ ಜವಾಬ್ದರಿನ ಇನ್ನಷ್ಟು ಹೆಚ್ಚಿಸಿದವರು ಕನ್ನಡ ಪ್ರಭ ಪತ್ರಿಕೆಯವರು. ಯಾಕೆಂದರೆ ಈ ಪತ್ರಿಕೆಯಲ್ಲಿ ಬರುವ ಬ್ಲಾಗಾಯಣ ಅನ್ನೋ ಅಂಕಣದಲ್ಲಿ ನನ್ನ ಬ್ಲಾಗನ್ನು ಎಲ್ಲರಿಗೂ ಪರಿಚಯಿಸಿದರು. ನನಗೆ ಈ ವಿಷಯನ ತಿಳಿಸಿದ್ದು ರಾಜೇಶ್. ಅವರು ತಿಳಿಸದೇ ಇದ್ದರೆ ನನಗೆ ತಿಳಿಯುತ್ತಿರಲಿಲ್ಲ ಹಾಗಾಗಿ ರಾಜೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಹಾಗೇ ನನ್ನ ಬರವಣಿಗೆನ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಾ ನನ್ನ ಜವಾಬ್ದರಿನ ನೆನಪಲ್ಲಿಟ್ಟು ಕೊಂಡು ಇನ್ನಷ್ಟು ಬರೆಯ ಬೇಕೆಂಬ ಅಸೆ ಹೊತ್ತು ಕೊಂಡು ನನ್ನ ಬರವಣಿಗೆನ ಹೀಗೆ ಮುಗಿಸಿದೆ ನೋಡಿ . ತಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ
ಅಕ್ಕ ನಮ್ಮೆಲ್ಲರ ಪ್ರೊತ್ಸಾಹ ಸದಾ ಇರುತ್ತದೆ….. ಇನ್ನು ಹೆಚ್ಚು ಒಳ್ಳೆ ಒಳ್ಳೆಯ ಲೇಖನಗಳನ್ನು ಬರೆಯಿರಿ.. ಎಂದು ಆಶಿಸುವೆ….
ರೋಹಿಣಿ ಮರಿ,
ನನ್ನ ಪ್ರಕಾರ ಬರೆಯೋದು ಸುಲಭ. ಅದರೆ ಯಾರಿಗಾರದ್ರು ತೋರಿಸೋಕೆ ಭಯ! ಅಲ್ವಾ…ಇದರಿಂದಾಗಿ ಏನಾದರೂ ಬರೆಯೋ ಮುಂಚೇನೇ ಹಿಂಜರಿಕೆಯಿಂದಾಗಿ ಪೆನ್ನು ಪೇಪರ್ ದೂರವಾಗಿರುತ್ತವೆ…..ಇದು ಎಲ್ಲರ ಪ್ರಾರಂಭದ ಕತೆ….
ಇದಕ್ಕೆ ವಿರುದ್ದ್ದವಾಗಿ ಏನು ಯೋಚಿಸದೆ…ಸುಮ್ಮನೆ ಬರೆಯುವುದು…..ನಂತರ ಬ್ಲಾಗಿಗೆ ಹಾಕುವುದು…..ಆಗ ನೋಡುಮರಿ….ಮಜಾ ಚೆನ್ನಾಗಿದ್ದರೆ ಬೆನ್ನುತಟ್ಟುತ್ತಾರೆ…ಇಲ್ಲದಿದ್ದಲ್ಲಿ ಹೀಗೆ ಬರಿ ಅಂತ ಯಾರಾದ್ರು ತಿದ್ದುತ್ತಾರೆ…..ಅದು ತಾನೆ ನಮಗೆ ಬೇಕಿರುವುದು…..ಕೆಲವರು ಬೈದರೆ ಬೈಸಿಕೊಳ್ಳುವುದು…..ಅದು ಕೂಡ ಕಲಿಕೆಯ ಲಕ್ಷಣ…..ನನಗೆ ಇವೆಲ್ಲಾ ಆಗಿವೆ…..ಇದು ನನ್ನ ಅನುಭವ…ನನ್ನ ಬೆನ್ನು ತಟ್ಟಿದವರನ್ನು ನೆನೆಸಿಕೊಂಡು ನಿನ್ನನ್ನು ಪ್ರೀತಿಯಿಂದ ಬೆನ್ನುತಟ್ಟಲು ನಾನಿದ್ದೇನೆ…ಏನು ಯೋಚಿಸದೆ ಸುಮ್ಮನೆ ಬರೆದರಾಯಿತು….ಅಲ್ವೇ….
ನಲ್ಮೆಯ ಸಹೋದರಿ ರೋಹಿಣಿ,
ನಿಮ್ಮ ಪ್ರೀತಿಗೆ ನಾನು ಮೂಕವಿಸ್ಮಿತ, ಹೋಗಲಿ ನಾಮನ್ನೆಲ್ಲ ಬಹಳ ಮೇಲೇರಿಸಿದ್ದೀರಿ. ಆದರೆ ನಾವೆಲ್ಲಾ ಇಲ್ಲಿನ ಪ್ರತಿ ಕಾರ್ಯಕ್ಕೂ ಬರಿಯ ನೆಪ ಮಾತ್ರ. ನಿಮ್ಮ ಬರಹಗಳ ಸ್ವಾಭಾವಿಕ ಸೊಗಡು ಎಂತಹವರನ್ನು ಸೆಳೆದು ಕರೆ ತರುತ್ತದೆ. ಮುಷ್ಟಿಯಷ್ಟು ಧೈರ್ಯವಿರಲಿ, ನಿಮ್ಮ ಜೊತೆ ನಾವಿರುತ್ತೇವೆ, ಎಂದಿಗೂ….
ಪ್ರೀತಿಯಿಂದ,
-ರಾಜೇಶ್ ಮಂಜುನಾಥ್
ನಲ್ಮೆಯ ಸಹೋದರಿ ರೋಹಿಣಿ,
ನಿಮ್ಮ ಪ್ರೀತಿಗೆ ನಾನು ಮೂಕವಿಸ್ಮಿತ, ಹೊಗಳಿ ನಮ್ಮನ್ನೆಲ್ಲ ಬಹಳ ಮೇಲೇರಿಸಿದ್ದೀರಿ. ಆದರೆ ನಾವೆಲ್ಲಾ ಇಲ್ಲಿನ ಪ್ರತಿ ಕಾರ್ಯಕ್ಕೂ ಬರಿಯ ನೆಪ ಮಾತ್ರ. ನಿಮ್ಮ ಬರಹಗಳ ಸ್ವಾಭಾವಿಕ ಸೊಗಡು ಎಂತಹವರನ್ನು ಸೆಳೆದು ಕರೆ ತರುತ್ತದೆ. ಮುಷ್ಟಿಯಷ್ಟು ಧೈರ್ಯವಿರಲಿ, ನಿಮ್ಮ ಜೊತೆ ನಾವಿರುತ್ತೇವೆ, ಎಂದಿಗೂ….
ಪ್ರೀತಿಯಿಂದ,
-ರಾಜೇಶ್ ಮಂಜುನಾಥ್
ನಮಸ್ಕಾರ ರೋಹಿಣಿ
ನಿಮ್ಮ ಪ್ರೀತಿಗೆ ದನ್ಯವಾದ..
ನಿಮ್ಮ ಈ ಬರವಣಿಗೆ ಹೀಗೆ ಸಾಗಲಿ………
ಇಂಚರ ಪುಟ್ಟಿ
ಖಂಡಿತ ಇನ್ನೂ ಒಳ್ಳೆ ಒಳ್ಳೆ ಬರಹ ನಿಮಗೆ ಉಣ ಬಡಿಸುತ್ತೇನೆ
ಅಡ್ಡ ಬಿದ್ದೆ ಶಿವು ಅಣ್ಣ
ಕಂಡಿತ ಬೆನ್ನು ತಟ್ಟುವವರಿದ್ದರೆ ಇನ್ನೂ ಚೆನ್ನಾಗಿ ಬರಿಬಹುದು. ಖಂಡಿತ ಅಣ್ಣ ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯ ಹೀಗೆ ಬರುತ್ತಿರಿ ಬೆನ್ನು ತಟ್ಟುತಿರಿ
ನಲ್ಮೆಯ ಸಹೋದರ ರಾಜೇಶ್
ನನ್ನ ಮುಷ್ಟಿಯಷ್ಟು ಧೈರ್ಯದ ಜೊತೆ ನೀವೆಲ್ಲ ಇದ್ದಾರೆ ಖಂಡಿತ ಏನಾದರೂ ಸಾದಿಸುವೆ
ನಮಸ್ತೆ ಜ್ಞಾನ ಮೂರ್ತಿಯವರೇ
ನಿಮ್ಮ ಧನ್ಯವಾದಕ್ಕೆ ನನ್ನ ಮರು ಧನ್ಯವಾದ. ನಿಮ್ಮೆಲ್ಲರ ಹಾರೈಕೆ ಇದ್ದರೆ ನನ್ನ ಬರಹ ಇನ್ನೂ ಚೆನ್ನಾಗಿ ಸಾಗುವುದು
ರೋಹಿಣಿ ಅವರೇ ಇದು ಅನ್ಯಾಯ ನನ್ನ ಬರಹ ನಿಮಗೆ ಸ್ವಲ್ಪವೂ ನಿಮಗೆ ಬರೆಯಲು ಪ್ರೇರಣೆ ನೀಡಲಿಲ್ಲವೇ..? :(. ಬರವಣಿಗೆ ಅನ್ನುವುದು ಸಮಾಜದಲ್ಲಿ ನಿಮಗೆ ನಿಮ್ಮದೇ ಆದ ಗುರುತನ್ನು ತಂದುಕೊಡುತ್ತೆ..ಪ್ರಯತ್ನ ನಮ್ಮದಾಗಿರಲಿ..ಅಭಿಪ್ರಾಯ ಓದುಗರದಾಗಿರಲಿ. ನೀವು ಯಾರಿಗೂ ಹೆದರದೆ ಬರೆಯಲು ಪ್ರಾರಂಭಿಸಿ.
ಸುನಿಲ್ ಮಲ್ಲೇನಹಳ್ಳಿ
ರೋಹಿಣಿ,
ಬರೆಯುವುದು ಅಂದರೆ ಮನದ ಭಾವನೆಗಳನ್ನು ಹೊರಹಾಕಲು ಒಂದು ಚಿಕ್ಕ outlet, ಸುಖದಾಯಕ ಪ್ರಸವ ಅಂತ ನನ್ನ ಅನಿಸಿಕೆ.
ನನ್ನೆಲ್ಲ ಕೀಳರಿಮೆಗಳು, ದುಃಖಗಳು ಬರೆಯುವುದರಿಂದ ಕಡಿಮೆಯಾಗಿವೆ. ಮೆದುಳು, ತನಗೆ ಜಾಸ್ತಿ ಕೆಲಸ ಕೊಡುತ್ತಿರುವುದಕ್ಕೆ ಖುಷಿಪಟ್ಟಿದೆ.
ಹಾಗಾಗಿ ಬರೆಯುವುದು ನಿಮಗೂ ಎಲ್ಲಾ ಖುಷಿಯನು ನೀಡಲಿ ಅಂತ ಹಾರೈಸುವೆ.
Hmm…. Bareeri bareeri. naavella Odteevi Rohiniyavre.
ಬರೀರಿ .. ನಿಮ್ಮ ಅಭಿವ್ಯಕ್ತಿತ್ವದ ಹಿಡಿತಕ್ಕೆ ಎಷ್ಟು ಸಿಗುತ್ತೋ ಅಷ್ಟೂ ಬರೀರಿ..
ಭಾವನಾಲಹರಿ – ಹೆಸರೇ ಸೊಗಸಾಗಿದೆ. ಆಗಾಗ ಹಿಂತಿರುಗಿ ನೋಡಬೇಕು. ಸಹಾಯ ಮಾಡಿದವರಿಗೆ thanks ಹೇಳುತ್ತಾ, ಬೆಳೆಯಲು ನೆರವಾದವರನ್ನು ನೆನೆಯಬೇಕು ಎಂಬುದು ನಿಮ್ಮ ಭಾವನೆಗಳಲ್ಲಿ(ಮಾತುಗಳಲ್ಲಿ) ತಿಳಿಯುತ್ತೆ.
ನಮಸ್ತೇ ಸುನಿಲ್
ಬೇಜಾರು ಮಡ್ಕೊ ಬೇಡ್ರಿ ನಿಮ್ಮೆಲ್ಲರ ಬರಹನೇ ನನಗೆ ಪ್ರೇರಣೆ
ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ
ನಮಸ್ತೆ ಕಲ್ಲರೆಯವರಿಗೆ
ಸ್ವಾಗತ ಭಾವಾನ ಲಹರಿಗೆ
ಖಂಡಿತ ಬರಿತೀನಿ ಬರೆದು ನಿಮಗೆಲ್ಲಾ ಉಣ ಬಡಿಸುತ್ತೀನಿ
ನಮಸ್ತೆ ಮಲ್ಲಿಕಾರ್ಜುನ ಸರ್
ಸ್ವಾಗತ ಭಾವಾನ ಲಹರಿಗೆ
ಹಿಂದೆ ತಿರುಗುತ್ತಾ ನೋಡುತ್ತಿರಿ ನನ್ನ ತಪ್ಪನ್ನು ತಿದ್ದುತಿರಿ
ನಮಸ್ತೇ ಫ್ರೆಂಡು
ಇಂತಹ ಸುಖದಾಯಕ ಪ್ರಸವ ಕೆಲವೋಂದು ಸಲ ಬೇಜಾರು ಮಾಡಿಸುತ್ತದೆ ಅಲ್ವೇ. ನೀವು ಹೇಳಿದ ಮಾತು ನಿಜ ಬರೆಯಲು ಕೂತರೆ ಬೇರೆ ಯಾವ ಯೋಚನೆನು ತಲೆಗೆ ಬರೋದಿಲ್ಲ. ಬರವಣಿಗೆ ಯಾವತ್ತು ಮನಸ್ಸಿಗೆ ಖುಷಿ ಕೊಡುತ್ತೆ ಬರೆಯೋದನ್ನ ಯಾವತ್ತು ನಿಲ್ಲಿಸೋದಿಲ್ಲ
ನಮಸ್ತೆ ಸಂತೋಷ್ ಸರ್
ಸ್ವಾಗತ ಭಾವಾನ ಲಹರಿಗೆ
ಸಾದ್ಯವದಷ್ಟು ಬರೆಯುತ್ತೇನೆ. ಹೀಗೆ ಬರುತ್ತಿರಿ ಹಾಗೂ ಹಾರೈಸುತ್ತಿರಿ