|
|
ಸ್ಮಶಾನದಲ್ಲಿ ಕಣ್ಣೀರಿನ ಮಾತು
ತೊಟ್ಟಿಲಿನಲಿ ಮಗುವಿನ ನಗುವಿನ ಮಾತು
ಬೆಳಗಿನ ಜಾವದಲಿ ಮಂಜಿನ ಮಾತು
ಸಂಜೆಗತ್ತಲಿನ ಮಬ್ಬಿನ ಮಾತು
ಹುಣ್ಣಿಮೆ ರಾತ್ರಿಯ ಬೆಳದಿಂಗಳ ಮಾತು
ಅಮಾವಾಸ್ಯೆಯ ಕಾರ್ಗತ್ತಲಿನ ಮಾತು
ಮಾತಿನ ಮತ್ತು
ತಿಳಿದವರಿಗೆ ಗೊತ್ತು
ಕಳೆಸುವುದು ಹೊತ್ತು
ಇದರಿಂದ ಬೇರೆ ಕೆಲಸಗಳಿಗೆ ಕುತ್ತು
ಎಲ್ಲೆಲ್ಲೂ ಮೌನದ ಮಾತು
ಮಾತುಗಳು
ಮರೆತುಹೋಗಿವೆ.
ಕವನಗ್ಳು ಕಳೆಗುಂದಿವೆ.
ಶಾಯರಿಗಳಲ್ಲಿ ಸತ್ವವಿಲ್ಲ.
ಗಝಲ್ ಗಳು ಗೂಡು ಸೇರಿವೆ.
ಈಗ ಉಳಿದಿರುವುದು
ಕೇವಲ ನನ್ನ–ನಿನ್ನ ಈ ಮೌನ ಸಂಭಾಷಣೆ.
ಪ್ರೀತಿ!!!!!!!! |
ಪ್ರೀತಿಯೆಂದರೆ……
ಸಾಗರದಷ್ಟು ಆಳ
ಆಗಸದಷ್ಟು ವಿಶಾಲ
ಹೇಳಿಕೊಂಡರೆ ಗೊಂದಲ
ಹೇಳದಿರೆ ತಳಮಳ
ಅರಿತರೆ ನಿರಾಳ
ಅರಿಯದಿರೆ ಕರಾಳ
ಪ್ರೀತಿಯೆಂದರೆ………
ಅದೊಂದು ಗಾಳ!
ಸಿಲುಕಿದರೆ ಬಿಡಿಸಲಾರದ ಬಂಧ
ಸಿಲುಕದಿರೆ ನೋವು ಅನಂತ
ನೀ ಜೊತೆ ಇದ್ದಾಗ
ನಿನ್ನನ್ನೇ ಕೇಳುತ್ತಿದ್ದೆ
ಗೆಳತಿ ಪ್ರೀತಿ ಎಂದರೆ
ಏನೆಂದು . . .
ನೀ ನನ್ನನ್ನು
ಅಗಲಿದಾಗ
ನನಗನ್ನಿಸಿತು
ಅದು ನೀನೇಎಂದು.
ಎಷ್ಟು ಚೊಲೊ ಇರ್‍ಒ ಹನಿಗಳನ್ನ ಕೂಡಿಟ್ಟುಕೊಂಡಿಯವ್ವ..ನಿಜಕ್ಕೂ ಖುಷಿಯಾಯ್ತಬೇ.. ಹಿಂಗ ಒಳ್ಳೊಳ್ಳೆವ್ನೆಲ್ಲಾ ಜ್ವಾಕಿ ಮಾಡಿ; ನಮಿಗೆ ಓದಕ್ಕ ಕೊಡವ್ವಾ..!
-ನಾಗು,ತಳವಾರ್.
ರೋಹಿಣಿ,
ಮೊದಲಿನದಕ್ಕಿಂತ ಎರಡನೆಯದು ಮತ್ತು ಎರಡನೆಯದಕ್ಕಿಂತ ಮೊದಲಿನದು, ಒಟ್ಟಿನಲ್ಲಿ ಎರಡು ಮುದ್ದಾಗಿವೆ. ಮತ್ತೆ ಮತ್ತೆ ಓದಿಸುತ್ತವೆ, ಬರೆದವರು ಯಾರೋ, ಆದರೆ ಚಂದನೆಯ ಸಾಲುಗಳು ಅದರ ಮಾಲೀಕನಿಗೂ ಬರೆದ ಹೆಮ್ಮೆ ತರುತ್ತವೆ, ನಿಮ್ಮ ಹವ್ಯಾಸಗಳೆಲ್ಲ ಬಹಳ ಚೆನ್ನಾಗಿವೆ.
-ರಾಜೇಶ್ ಮಂಜುನಾಥ್
hi, dear… nice blog… keep it…but write deep thinking…subject…
Tumbha chennagidhe kandha, hege nina barahavannu munduvarisu….
Shubhavagali,,,,
Jai Karnataka
ನಿಮ್ಮ ಬ್ಲಾಗ್ ಶೀರ್ಷಿಕೆ ’ಭಾವನಾ ಲಹರಿ’ ಆಗಬೇಕು. ಭಾವನ ಲಹರಿ ಅಂದ್ರೆ ಭಾವ ಅಂದ್ರೆ ಅಕ್ಕನ ಗಂಡನ ಲಹರಿ ಆಗುತ್ತೆ. howvever is interesting to read poems of others in a personal blog. ಅಭಿನಂದನೆ.
ನಮಸ್ತೆ ನಾಗು ಸರ್
ಹನಿಗಳ ನಾನೆ ಬರೆಯ ಬೇಕೆಂಬ ಆಸೆ
ಈ ಆಸೆನ ಬಚ್ಚಿಟ್ಟಿತು ಈ ದುರಾಸೆ
ಇನ್ನೂ ಸಂಗ್ರಹಿಸಬೇಕು ಅನ್ನೋ ಆಸೆ
ಧನ್ಯವಾದಗಳು ರಾಜೇಶ್
ನಿಮಲ್ಲಿ ಮಾತಾಡಿದ ನಂತರನೆ ಇದನ್ನ ಇಲ್ಲಿ ಹಾಕಿದೆ. ನಿಮಗೆ ಇಷ್ಟ ವಾಗುತ್ತೆ ಅಂತ ಗೋತಿತ್ತು.
ನಮಸ್ತೆ ರಮೇಶ್ ಸರ್
ಖಂಡಿತ ನೀವು ಹೇಳಿದ ಹಾಗೆ ಇನ್ನೂ ಮುಂದೆ ಬರೆಯಲು ಪ್ರಯತ್ನಿಸುವೆ.
ನಮಸ್ತೆ ಅಪ್ಪ
ಎಲ್ಲಾ ನಿಮ್ಮ ಅಶಿರ್ವಾದಗಳು ಅಪ್ಪ
ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಹಾಗೂ ನನ್ನ ಭಾವನೆಗಳಿಗೆ ಸ್ಪಂದಿಸಿದ ತಮಗೆ ಧನ್ಯವಾದಗಳು
ನಮಸ್ತೆ ರಾಮಸ್ವಾಮಿ ಸರ್
ಅನಂತ ಅನಂತ ಧನ್ಯವಾದಗಳು
ಹೀಗೆ ಭೇಟಿ ಕೊಡುತ್ತಾ ಇರಿ ತಪ್ಪುಗಳನ್ನ ತಿಳಿಸುತ್ತಿರಿ
chendaneya kavitegalu….:)
ನಿಮ್ಮ ದನಿಯಷ್ಟೇ ಮಧುರವಾಗಿದೆ ಸಂಗ್ರಹಿಸಿದ ಕವಿತೆಗಳೆಲ್ಲವೂ.
ಬರೆದವರ ಹೆಸರೂ ಸಂಗ್ರಹಿಸುವ ರೂಡಿಯಿದ್ದರೆ ಒಳ್ಳೆಯದು ಅನಿಸುತ್ತದೆ..:)
ಧನ್ಯವಾದಗಳು ಫ್ರೆಂಡು ( ಗುರುಗಳೇ)
ಖಂಡಿತ ಇನ್ನೂ ಮುಂದೆ ಬರೆದವರ ಹೆಸರನ್ನು ಸಂಗ್ರಹಿಸುವೆ
Rohini..
Tumba Chennagide..
ತುಂಬಾ ಸುಂದರವಾದ ಕವನಗಳು….
ರೋಹಿಣಿ ಪುಟ್ಟಿ…
ನೀವು ನನ್ನ ಬ್ಲಾಗಿಗೆ ಬಂದು “ತಂಗಿ..ಇದೋ ನಿನಗೊಂದು ಪತ್ರ” ಲೇಖನಕ್ಕೆ ಪ್ರತಿಕ್ರಿಯಿಸಿದ ತಕ್ಷಣ ನೀವ್ಯಾರು ಅಂತ ತಿಳಿಯಲು ನಿಮ್ಮ ಬ್ಲಾಗಿಗೆ ಹೋದೆ…ರೋಹಿಣಿ ಎನ್ನುವ ಪುಟ್ಟ ಪುಟಾಣಿ ಮುಖದ ಸಹೋದರಿ ಎನಿಸಿತು…..ಒಬ್ಬ ಸಹೋದರನ ಭಾವನೆಗಳು ಮತ್ತೊಬ್ಬ ಸಹೋದರಿಗೆ ಬೇಗ ಅರ್ಥವಾಗುತ್ತದೆ….ನೀವು ನನ್ನ ಭಾವನೆಗಳಿಗೆ ಜೊತೆಯಾಗಿದ್ದಕ್ಕೆ ಥ್ಯಾಂಕ್ಸ್….ಹೀಗೆ ಬರುತ್ತಿರಿ….
ನನಗೆ ನಿಮ್ಮ ಫೋಟೊ ನೋಡಿ…ರೋಹಿಣಿ ಪುಟ್ಟಿ ಅನ್ನಿಸಬೇಕೆನಿಸಿತು….ನೀವೇನು ಅಂದುಕೊಳ್ಳುವುದಿಲ್ಲವೆಂದರೆ ನಾನು ಮುಂದೆ ಹಾಗೆ ಕರೆಯುತ್ತೇನೆ…
ಮತ್ತೆ ಈ ಮೇಲಿನ ಕವನ ಓದಿದೆ…ಬೇರೆಯವರ ಕವನ ಇಷ್ಟಪಟ್ಟು ಇನ್ನೊಬ್ಬರಿಗೆ ತೋರಿಸುವುದು ಕೂಡ ಒಂದು ಅತ್ಮೀಯ ಮನೋಭಾವನೆ……ಕವನ ನನಗೂ ಇಷ್ಟವಾಯಿತು….ನಾನು ಬಿಡುವು ಮಾಡಿಕೊಂಡು ಉಳಿದ ಲೇಖನಗಳನ್ನು ಓದುತ್ತೇನೆ……ನನ್ನ ಬ್ಲಾಗಿಗೆ ಹೀಗೆ ಬರುತ್ತಿರಿ…
ನಮಸ್ತೆ ಸಂತೋಷ್ ಚಿದಂಬರ್ ಹಾಗೂ ದಿಗಂತ
ನನ್ನ ಭಾವನಾಲಹರಿಗೆ ಸ್ಪಂದಿಸಿದ ತಮಗೆ ಧನ್ಯವಾದಗಳು
ನಮಸ್ತೆ ಶಿವೂ ಸರ್
ಮೊದಲನೆಯದಾಗಿ ನನ್ನ ಕ್ಷಮಿಸಿ ನನ್ನ ಬ್ಲಾಗ್ ನಲ್ಲಿರೋ ಫೋಟೋ ನನ್ನದಲ್ಲ
ಖಂಡಿತ ನಿಮಗೆ ಹೇಗೆ ಕರಿಬೇಕು ಅಂತ ಅನಿಸುತೋ ಹಾಗೇ ಕರೀರಿ
ನಾನು ನಿಮ್ಮನ್ನ ಶಿವೂ ಅಣ್ಣ ಅಂತಾನೆ ಕರಿಲಾ
ಮನಚುಂಬಿಸುವ ಹನಿಗಳನ್ನು ಸಂಗ್ರಹಿಸಿ ಹಾಕಿದ್ದೀರಿ…ತುಂಬಾ ಚೆನ್ನಾಗಿವೆ.
-ಚಿತ್ರಾ
“ಮೌನದ ಮಾತು” mattu”ಕಳೆದುಹೋದಮೇಲೆ ಪ್ರೀತಿಯ ಅರಿವಾಗುವುದು” – ತುಂಬಾ ಚೆನ್ನಾಗಿದೆ. ಬರೆದವರಿಗೆ, ಹಾಕಿದ ನಿಮಗೆ – ಇಬ್ಬರಿಗೂ ಅಭಿನಂದನೆಗಳು.
ನನ್ನ ಬ್ಲಾಗಿಗೆ ಬಂದು ನಿಮ್ಮ ಅಭಿಪ್ರಾಯ ತಿಳಿಸಿ.
ಧನ್ಯವಾದಗಳು ಚಿತ್ರಕ್ಕ
ನಮಸ್ತೆ ಮಲ್ಲಿಕಾರ್ಜುನ ಸರ್
ನನ್ನ ಭಾವನೆಗಳಿಗೆ ಸ್ಪಂದಿಸಿದ ನಿಮಗೆ ಧನ್ಯವಾದಗಳು ಹೀಗೆ ಬರುತಿರಿ
ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
– ಶಮ, ನಂದಿಬೆಟ್ಟ
ಹನಿಗಳು ಮುತ್ತಿನ ಹನಿಗಳಂತೆ ತೋರುತ್ತಿವೆ
ಸೋಮಣ್ಣ ಬರೆದದ್ದಾ?
ಉತ್ತಮ ಹನಿಗಳನ್ನು ಸಂಗ್ರಹಿಸಿರುವುದಕ್ಕೆ ವಂದನೆಗಳು
ಗುರುದೇವ ದಯಾ ಕರೊ ದೀನ ಜನೆ
ನಮಸ್ತೇ ಶಮ ಮೇಡಂ
ಭಾವನ ಲಹರಿಗೆ ಸ್ವಾಗತ
ಖಂಡಿತ ನಿಮ್ಮ ಬ್ಲಾಗ್ ಗೆ ಭೇಟಿ ಕೊಡುವೆ
ಹೀಗೆ ಬರುತ್ತಿರಿ
ನಮಸ್ತೇ ಶ್ರೀನಿವಾಸ್ ಸರ್
ಈ ಹನಿಗಳನ್ನ ಇಷ್ಟ ಪಟ್ಟಿದ್ದಕ್ಕೆ ದನ್ಯವಾದಗಳು
ಯಾರು ಬರೆದವರೆಂದು ಸರಿಯಾಗಿ ನೆನಪಿಲ್ಲ ಸರ್. ಹೀಗೆ ಬರುತ್ತಿರಿ ನನ್ನ ಹರಸುತ್ತಿರಿ
indian
i love my india,
ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ?
ನಿಜವಾಗ್ಲೂ ನಿಮ್ಮಲ್ಲಿ ತುಂಬಾ ಒಳೆಯ ಕಲೆ ಇದೆ… ತುಂಬಾ ಅರ್ಥಪೂರ್ಣವಾಗಿ ಬರೆತಿರ…. ನಿಮ್ಮೊಂದಿಗೆ ಮಾತನಾಡಿ ಹೀಗೆ ಅನ್ನೆಸೋದಿಲ್ಲ ಆದ್ರೆ ನೀವು ತುಂಬಾ ಚನ್ನಾಗಿ ಬರೆತಿರ….
hi Rohini,
nimma photodalliruva mukhada sowmyate hagoo barahagaLu ishtavaadavu. Rohini nakshatrana. mangaloredu olu ill.