ಮನದಾಳದ ಮಾತು

ತುಟಿಯಂಚಲ್ಲಿ ಬಂದ ಮಾತು
ಹೊರಹಾಕಲಾಗದ ಮಾತು
ಮನದಲ್ಲೇ ಮೌನದಿಂದ ಆಡಿದ ಮಾತು
ನನ್ನ ಜೀವನದ ಗುಟ್ಟಾಯಿತು ಈ ಮಾತು
ನಲ್ಲನಿಗೆ ಹೇಳಿ ಬಿಡು ಅಂದಿತ್ತು ಮನದ ಮಾತು
ಈಗ ಹೇಳಿಯೇ ಬಿಡುವೆ ನನ್ನ ಹೃದಯದ ಮಾತು
ಆದರೆ ನಲ್ಲನಾಡಿದ ಮಾತು
ನನ್ನ ಮನದಾಳದ ಮಾತ ಬಚ್ಚಿಡಲು ಪ್ರಯತ್ನಿಸಿತು
ತುಟಿಯಂಚಲ್ಲಿ ಬಂದ ಮಾತು
ನನ್ನ ಮನದಲ್ಲೇ ಸತ್ತು ಹೋಯಿತು
ನನ್ನ ಮನದಾಳದ ಮಾತು

*************************

ಅ೦ದುಕೊಳ್ಳುವುದೊ೦ದು,
ಆಗುವುದು ಇನ್ನೊ೦ದು,
ಹುಡುಕಿ ಹೋದರೆ ಅಲ್ಲಿ
ಸಿಗುವುದು ಮತ್ತೊ೦ದು. !!!
ಬಯಸುವುದು ಮೂರು
ಬೇಕಾಗಿರುವುದು ನೂರು
ಹುಡುಕಿ ಹೋದರೆ ಅಲ್ಲಿ
ಸಿಗುವುದು ಸಾವಿರಾರು

**************************

4 responses to “ಮನದಾಳದ ಮಾತು

  1. ನಿಜ, ತಮ್ಮಲ್ಲಿ ಉದ್ಭವಗೊಂಡ ಭಾವನೆಗಳು..ಪಕ್ವಗೊಳ್ಳುವುದಕ್ಕಿಂತ ಮುಂಚೆ ಎಲ್ಲಿ ಕ್ಷೀಣಿಸಿಬಿಡುತ್ತವೋ..? ಎಂಬ ದಿಗಿಲಲ್ಲೇ ಈ ಪದ್ಯಗಳು ಹುಟ್ಟಿದಂತಿವೆ..ಕೊಂಚ ಭಾವನೆ ವಿಸ್ತಾರಗೊಂಡು, ಹೇಳಲೊರಟಿರುವ ಅರ್ಥಕ್ಕೆ ತಕ್ಕ ಹಾಗೆ; ಶಬ್ದಗಳನ್ನ ಹರಿಬಿಟ್ಟರೆ…ತುಂಬ ಚನ್ನ..ಅನ್ನಿಸುತ್ತೆ ಅಲ್ವಾ…? (ನನಗೆ ಪದ್ಯ,ಗದ್ಯ ಎರಡೂ ಗೊತ್ತಿಲ್ಲ..ಸುಮ್ನೆ ಬುದ್ದಿವಂತನ ತನಹಾಗೆ..ಪ್ರತಿಕ್ರಿಯಿಸಿದೆ. ಹ್ಹೆ..ಹ್ಹೆ..ಹ್ಹೆ)

  2. ಧನ್ಯವಾದಗಳು nagtalwar

    ನೀವು ಹೇಳಿರೋ ಮಾತು ನಿಜ. ಅಂಬೆಗಾಲು ಇಡುತ್ತಿರೋ ಮಗು ನಾನು. ಇನ್ನು ನೀವು ಹೇಳಿದ ಮಾತುಗಳನ್ನ ನೆನಪಿಟ್ಟುಕೊಂಡು ಬರೀತೀನಿ

  3. Wonderful and its a fact that you wrote.

    Exactly nothing will happen as we expect !

    Keep writeng such poems.

    Thanks,
    Girish

  4. ನನಗೂ ಈ ಹಾಡು ತುಂಬಾ ಇಷ್ಟ…..ಮತ್ತೆ ಅಮ್ಮನ ತುಂಬಾ ಚೆನ್ನಾಗಿ ಬರೆದಿದ್ದೀರಿ…..ಮತ್ತೆ ನಿಮ್ಮ ಬ್ಲಾಗಿಗೆ ಬೇಟಿ ನೀಡಬೇಕೆನಿಸುತ್ತದೆ….ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ….
    ನೀವು ನನ್ನ ಬ್ಲಾಗಿನ ಭೂಪಟಗಳನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್….ಇನ್ನೂ ಉಳಿದ ಲೇಖನ, ಕವನಗಳನ್ನು ಓದಿ ಅಭಿಪ್ರಾಯ ತಿಳಿಸಿ…..ಮತ್ತೆ ನಾನು ಬರೆದ ಬರೆವಣಿಗೆಯಲ್ಲಿ ಅತ್ಯಂತ ಭಾವುಕಪೂರ್ಣವಾದ ” ತಂಗಿ…ಇದೋ ನಿನಗೊಂದು ಪತ್ರ ” ಓದಿ ದಯವಿಟ್ಟು ಕಾಮೆಂಟ್ ಮಾಡಿ….ಅದೊಂದು ಸತ್ಯ ಕತೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s