ಅರಿಯಲಾರೆ ನಿನ್ನ ಮಾತನ್ನ
ತಿಲಿಯಲಾರೆ ನಿನ್ನ ಮನಸ್ಸನ್ನ
ಯಾಕೆ ನೀನು ನನಗೆ ಫೋನ್ ಮಾಡೋದಿಲ್ಲ ಅನ್ನುತ್ತಿಯಾ ಫೋನ್ ಮಾಡಿದರೆ ಏನಾದರು ಹೇಳೊದಿದೆಯೇ ಅಂತ ಕೇಳುತ್ತೀಯಾ ಇಲ್ಲಯೆಂದರೆ ಈಗ ಬ್ಯುಸಿ ಇದ್ದೀನಿ ಆಮೇಲೆ ಮಾಡುತ್ತೇನೆ ಎಂದು ಫೋನ್ ಇಟ್ಟುಬಿಡುತ್ತೀಯಾ! ಮಾತಾಡೋಣ ಅಂತ ಆಸೆಯಿಂದ ಕರೆಮಾಡಿದರೆ ನಿರಾಸೆ ಮಾಡುತ್ತೀಯಾ. ಇರಲಿ ಚಿಂತಿಲ್ಲ ಆದರೆ ಯಾಕೋ ನೀನು ನನ್ನ ಮುಂದೆ ಬೇರೆ ಹುಡುಗಿಯರನ್ನ ಹೊಗಳಿ ನನಗೆ ಅಸೂಯೆ ಹುಟ್ಟಿಸುತ್ತೀಯ. ನಾನು ಫೋನ್ ಮಾಡಿದಾಗ ಬ್ಯುಸಿ ಇದ್ದೀನಿ ಅಂತಿಯಾ. ಆದರೆ ನೀನು ಬ್ಯುಸಿ ಇದ್ದಾಗ ಬೇರೆ ಯಾರೆ ಫೋನ್ ಮಾಡಿದರೆ ಗಂಟೆ ಗಟ್ಟಲೆ ಮಾತಾಡುತ್ತೀಯಾ. ಇದೇನು ನಾನು ಬೇಜಾರು ಮಾಡಿಕೊಳ್ಳೊದಿಲ್ಲ ಅನ್ನೋ ನಂಬಿಕೆನಾ ಅಥವಾ ನನ್ನ ಬಗ್ಗೆ ತಿರಸ್ಕಾರನೋ ಗೊತ್ತಾಗ್ತಿಲ್ಲ. ನನ್ನ ಹ್ರದಯಕ್ಕೆ ಪ್ರಾಣ ಇರೋ ತನಕ ಈ ಹ್ರದಯದಲ್ಲಿರೋ ಜಾಗ ನಿನಗಾಗಿ ಮಾತ್ರ ಅದನ್ನ ಯಾರಿಗೋ ಬಿಟ್ಟು ಕೋಡಲಾಗುದಿಲ್ಲ. ಅಲ್ಲ ಕಣೋ ನೀನೆ ನನಗೆ ಹುಡುಗ ಹುಡುಕುತ್ತಿಯಾ ನಿನ್ನ ಬಿಟ್ಟು ಹೇಗೆ ಹೋಗಲಿ ಹೇಗೆ ಒಪ್ಪಲಿ ನಿನ್ನ ಮನಸ್ಸಿಗೆ ನೋವಾಗಬರದೆಂದು ಒಪ್ಪಿದರೆ ನೀನು ನಂತರ ಬಂದು ಆತನನ್ನು ಮದುವೆ ಆಗದಂತೆ ನಿರ್ಬಂಧ ಹೊರಿಸುತ್ತಿಯ. ಏನೆಂದು ಅರ್ಥೈಸಲಿನಿನ್ನ? ನಿನ್ನನ್ನು ಎನೂಂತ ಕರೆಯಲಿ ಗೆಳೆಯನಾ, ಪ್ರಿಯಕರನ, ಅಥವಾ ಹಿತೈಷಿನ. ಏನೇ ಆಗಿರು ಆದರೆ ನಾನು ಉಸಿರಾಡೋದನ್ನ ನಿಲ್ಲಿಸೋತನಕ ನಿನ್ನನ್ನೇ ಆರಾಧಿಸುವೆ ಪ್ರೀತಿಸುವೆ. ನೀನು ನಿನ್ನ ಮನಸ್ಸಿಂದ ನಾನು ನಿನ್ನ ಪ್ರೀತಿಸುವೆ ಎಂದು ಹೇಳುವ ತನಕ ಕಾಯುವೆ ನಾನಾಗಿ ಹೇಳಲಾರೆ ಯಾಕೆಂದರೆ ನಿನ್ನ ಮನಸಲ್ಲಿ ಏನಿದೆಯೆಂದು ನನಗೆ ತಿಳಿಯದು. ಆದಷ್ಟು ಬೇಗ ನಿನ್ನ ಜೀವಕ್ಕೆ ಜೀವ, ಆತ್ಮಕ್ಕೆ ಆತ್ಮ, ಉಸಿರಿಗೆ ಉಸಿರಾಗುವ ಆಸೆ! ನಿನ್ನ ಮನಸ್ಸಿಂದ ನಿನ್ನ ಹ್ರದಯದಿಂದ ಬರುವ ಮಾತಿ(ಉತ್ತರ)ಗಾಗಿ ಕಾಯುತ್ತಿರುವ
ಇಂತೀ ನಿನ್ನ ಉಸಿರಿಗೆ ಉಸಿರಾಗುವಾ
ಅಂಜು