ನೀ ಕಷ್ಟದಲ್ಲಿದ್ದಾಗ
ದೇವರು ಸಹಾಯ ಮಾಡಿದರೆ
ಅವನ ಶಕ್ತಿಯ ಬಗ್ಗೆ
ನಿನಗೆ ನಂಬಿಕೆ ಬರುತ್ತೆ.
ಅದೇ ಅವನು
ನಿನಗೆ ಸಹಾಯ ಮಾಡಲು
ಸ್ವಲ್ಪ ತಡಾ ಮಾಡಿದರೂ
ನಿನ್ನ ಶಕ್ತಿಯ ಬಗ್ಗೆ
ಅಂತಹ ದೇವರಿಗೇ
ನಂಬಿಕೆಯಿದೆ ಎಂದರ್ಥ !
ನೀರಿನ ಮೇಲೆ
ಬರಯಲಾಗುವುದಿಲ್ಲ.
ಬರೆದರೂ
ಅದು ಉಳಿಯುವುದಿಲ್ಲ.
ನನ್ನದು
’ಕಲ್ಲು ಹೃದಯ’
ಎಂದು ಹೇಳುತ್ತಾರೆ ಎಲ್ಲ.
ವಿಚಿತ್ರವೆಂದರೆ,
ಕಲ್ಲಿನ ಮೇಲೆ ಬರೆದಿದ್ದು
ಎಂದಿಗೂ ಅಳಿಸಿ ಹೋಗುವುದಿಲ್ಲ!!
ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ?
ಮೊದಲೆರೆಡೂ ಮಸ್ತಾಗಿವೆ.
ಮೂರನೇದರಲ್ಲಿ ಕೊಂಚ ಗೊಂದಲ.
ಸ್ನೇಹ,ಪ್ರೀತಿ ಎರಡೂ ಬದುಕಲಿಕ್ಕೆ ಬೇಕಾದ್ದು ಅಲ್ವೆನಮ್ಮಾ?
ಪ್ರೀತಿ ಇಲ್ದಿರೋ ಸ್ನೇಹ, ಸ್ನೇಹ ಇಲ್ದಿರೋ ಪ್ರೀತಿ ಹ್ಯಾಗೆ ಪರಿಪೂರ್ಣ ಆಗುತ್ತೆ?
ಜೀವ ಹೂವಗಂಧ ಹಬ್ಬಲು ಪ್ರೀತಿ ಬೇರು ,ಸ್ನೇಹ ನೀರು ಎರಡೂ ಮುಖ್ಯ ಅಂತ ನನ್ನಭಿಪ್ರಾಯ.
ರೋಹಿಣಿ,
ಕವನ ಚೆನ್ನಾಗಿದೆ, ಆದರೆ ಕೊನೆಯದರ ಬಗ್ಗೆ ನನ್ನದು ರಜಿತ್ ಅಭಿಪ್ರಾಯವೇ.
-ರಾಜೇಶ್ ಮಂಜುನಾಥ್
ರೋಹಿಣಿ,
ಕವನ ಚೆನ್ನಾಗಿದೆ, ಆದರೆ ಕೊನೆಯದರ ಬಗ್ಗೆ ನನ್ನದು ರಂಜಿತ್ ಅಭಿಪ್ರಾಯವೇ. ಬರವಣಿಗೆ ಹೀಗೆ ಮುಂದುವರೆಯಲಿ.
-ರಾಜೇಶ್ ಮಂಜುನಾಥ್
khandita munduvarisuve aga gottagada matu iga artha vagutta ide idanna saripadisuve
kavanagalu adbutavagive 3 ne kavana bahala chennagide
ಧನ್ಯವಾದಗಳು ರಾಮು ಸರ್
ಹೀಗೆ ಬರುತಿರಿ
eradanedu tumba ishta aaytu… sooooooooper
namaste prasanna sir
bhavana laharige swagatha
ishta pattiddakke dhanyavaadagalu.
hige baruttiri